More

    ಬಿಸಿಯೂಟ ಸಿಬ್ಬಂದಿ ನೇಮಕದಲ್ಲಿ ಅನ್ಯಾಯ

    ಹುಲಸೂರು: ಮುಸ್ತಾಪುರ ಸಕರ್ಾರಿ ಪ್ರಾಥಮಿಕ ಶಾಲೆಯಲ್ಲಿ ಪರಿಶಿಷ್ಟ ಜಾತಿಯ ಅಡುಗೆ ಸಹಾಯಕಿಯನ್ನು ನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸಿ ಭೀಮ ಆಮರ್ಿ ಹಾಗೂ ಗ್ರಾಮ ಕ್ರಾಂತಿ ಸೇನೆ ನೇತೃತ್ವದಲ್ಲಿ ಮುಚಳಂಬದಲ್ಲಿ ಮಂಗಳವಾರ ದಲಿತ ಮುಖಂಡರು ಪ್ರತಿಭಟನೆ ನಡೆಸಿದರು. ಗ್ರಾಮದ ಬಸವೇಶ್ವರ ವೃತ್ತದಿಂದ ಗ್ರಾಪಂ ವರೆಗೆ ಮೆರವಣಿಗೆ ನಡೆಸಿ ತಹಸೀಲ್ದಾರ್ ಶಿವಾನಂದ ಮೇತ್ರೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.

    ಭೀಮ ಆಮರ್ಿ ತಾಲೂಕು ಅಧ್ಯಕ್ಷ ಚೇತನ್ ಕಾಡೆ ಮಾತನಾಡಿ, ಮುಚಳಂಬ ಗ್ರಾಪಂ ವ್ಯಾಪ್ತಿಯ ಮುಸ್ತಾಪುರ ಶಾಲೆಯಲ್ಲಿ ನಿಯಮದ ಪ್ರಕಾರ ಪರಿಶಿಷ್ಟ ಜಾತಿಯ ಅಡುಗೆ ಸಹಾಯಕಿಯನ್ನು ನೇಮಕ ಮಾಡಿಕೊಳ್ಳದೆ ಬೇರೆಯವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಮಂಗಲಾ ಕಾಂಬಳೆ ಅವರ ಬದಲಿಗೆ ಪರಿಶಿಷ್ಟ ಪಂಗಡ ಸಮುದಾಯದ ಮಹಿಳೆಯನ್ನು ನೇಮಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮಂಗಲಾ ಅವರನ್ನು ನೇಮಿಸಿ ಆದೇಶ ನೀಡಬೇಕು ಎಂದು ಮುಖಂಡರು ಪಟ್ಟು ಹಿಡಿದರು. ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಶಿವಾನಂದ ಮೇತ್ರೆ, ಸಮಾಜ ಕಲ್ಯಾಣ ಇಲಾಖೆ ಎಡಿ ಗಿರೀಶ ರಂಜೋಳಕರ್, ಬಿಸಿಯೂಟ ತಾಲೂಕು ಅಧಿಕಾರಿ ಮಣಿಪಾಲ್ ರೆಡ್ಡಿ, ಗ್ರಾಪಂ ಅಧ್ಯಕ್ಷೆ ಮಾಲಾಶ್ರೀ ಮೇತ್ರೆ ಸಮಸ್ಯೆ ಆಲಿಸಿದರು. ಸಕರ್ಾರದ ನಿಯಮದ ಪ್ರಕಾರ ಬಿಸಿಯೂಟದ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಭರಸವೆ ನೀಡಿದ್ದರಿಂದ ಪ್ರತಿಭಟನೆ ಕೈಬಿಡಲಾಯಿತು.

    ಗ್ರಾಮ ಕ್ರಾಂತಿ ಸೇನೆ ಅಧ್ಯಕ್ಷ ಸಂದೀಪ ಮುಕಿಂದೆ, ಪ್ರಮುಖರಾದ ಜ್ಞಾನೇಶ್ವರ ಶಿಂಧೆ, ಶಂಕರ ಫುಲೆ, ದೇವಾನಂದ ತೋಳೆ, ಅಂಕುಶ ಕಾಂಬಳೆ, ಅಶೋಕ ಕಾಂಬಳೆ, ಜ್ಞಾನೇಶ್ವರ ಗಾಯಕವಾಡ, ದತ್ತು ಮೋರೆ, ಮಂಗಲಾ ದತ್ತು, ತೇಜಾಬಾಯಿ ಕಾಂಬಳೆ, ಮಹಾನಂದಾ, ಸಿದ್ದಮ್ಮ ಕಾಂಬಳೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts