More

    ಬಿಸಿಯೂಟದಲ್ಲಿ ಹಲ್ಲಿ 30 ಮಕ್ಕಳು ಅಸ್ವಸ್ಥ

    ಅಫಜಲಪುರ (ಕಲಬುರಗಿ): ಹಾವನೂರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬುಧವಾರ ಮಧ್ಯಾಹ್ನ ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿದ 30 ಮಕ್ಕಳು ಅಸ್ವಸ್ಥಗೊಂಡಿದ್ದು, ಸಕಾಲಕ್ಕೆ ಸಿಕ್ಕ ಚಿಕಿತ್ಸೆಯಿಂದಾಗಿ ಎಲ್ಲರೂ ಚೇತರಿಸಿಕೊಂಡಿದ್ದಾರೆ.

    ಅಡುಗೆ ಮಾಡಿದ ನಂತರ ಹಲ್ಲಿ ಬಿದ್ದಿದ್ದು, ಯಾರೂ ಗಮನಿಸಿಲ್ಲ. ಅಂತೆಯೇ ಬಿಸಿಯೂಟ ಮಾಡಿದ ವಿದ್ಯಾರ್ಥಿಗಳು ಕೆಲಹೊತ್ತಿನ ನಂತರ ವಾಂತಿ ಮಾಡಿಕೊಳ್ಳಲು ಆರಂಭಿಸಿದರು. ತಕ್ಷಣ ಎಲ್ಲರನ್ನು ಗೊಬ್ಬೂರ (ಬಿ) ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಏಳು ವಿದ್ಯಾರ್ಥಿಗಳನ್ನು ಆಂಬುಲೈನ್ಸ್​ಲ್ಲಿ ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ವೈದ್ಯಾಧಿಕಾರಿ ಡಾ.ಅಜೀಜ್ ತಿಳಿಸಿದ್ದಾರೆ.

    ಶಾಲೆಯಲ್ಲಿ 158 ವಿದ್ಯಾರ್ಥಿಗಳು ಓದುತ್ತಿದ್ದು, ಬುಧವಾರ 127 ಮಕ್ಕಳು ಹಾಜರಾಗಿದ್ದರು. ಬಿಸಿಯೂಟದ ಮೊದಲ ಪಂಕ್ತಿಯಲ್ಲಿ ಸೇವಿಸಿದ 30 ವಿದ್ಯಾರ್ಥಿಗಳಲ್ಲಿ ಹೊಟ್ಟೆ ನೋವು ಕಾಣಿಸುತ್ತಿರುವುದನ್ನು ನೋಡಿ ಉಳಿದವರಾರೂ ಭೋಜನ ಮಾಡಿಲ್ಲ. ವಿಷಯ ತಿಳಿಯುತ್ತಿದ್ದಂತೆ ಬಿಇಒ ಮಾರುತಿ ಹುಜರತಿ ಸ್ಥಳಕ್ಕೆ ದೌಡಾಯಿಸಿದರೆ, ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರ ಆಸ್ಪತ್ರೆಗೆ ಭೇಟಿ ಮಕ್ಕಳ ಆರೋಗ್ಯ ವಿಚಾರಿಸಿದರು.

    ಬೆನ್ನಲ್ಲೇ ಗೊಬ್ಬುರ ಆಸ್ಪತ್ರೆ ಎದುರು ಮಕ್ಕಳ ಪಾಲಕರು ಜಮಾಯಿಸಿದ್ದು, ಕೆಲವರು ಕಣ್ಣಿರಿಡುತ್ತ ಬೇಗ ಗುಣಮುಖರಾಗಲಿ ಎಂದು ಮೊರೆಯಿಡುತ್ತಿರುವುದು ಕಂಡಿತು. ಆಸ್ಪತ್ರೆ ಸಿಬ್ಬಂದಿ, ವೈದ್ಯರು ಕಾಳಜಿ ವಹಿಸಿ ಚಿಕಿತ್ಸೆ ನೀಡಿದರು. ಘಟನೆ ಕುರಿತು ಶಿಸ್ತು ಕ್ರಮ ಕೈಗೊಳ್ಳಲು ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದಾಗಿ ಬಿಇಒ ಹುಜರತಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts