More

    ಬಿಷ್ಟಾದೇವಿ, ಮೂಕಮ್ಮದೇವಿ ಜಾತ್ರೆಯಲ್ಲಿ ಪ್ರಾಣಿಬಲಿ ನಿಷೇಧ

    ಕಕ್ಕೇರಿ, ಬೆಳಗಾವಿ: ಇಲ್ಲಿನ ಬಿಷ್ಟಾದೇವಿ ಜಾತ್ರೆಗೆ ಬರುವ ಭಕ್ತರು ದೇವಿ ಹೆಸರಿನಲ್ಲಿ ಪ್ರಾಣಿಬಲಿ ಮಾಡಬಾರದು. ಒಂದು ವೇಳೆ ಪ್ರಾಣಿ ಬಲಿ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಾಲೂಕು ದಂಡಾಧಿಕಾರಿ ಪ್ರವೀಣ ಜೈನ ಎಚ್ಚರಿಕೆ ನೀಡಿದ್ದಾರೆ. ಬಿಷ್ಟಾದೇವಿ ಹಾಗೂ ಸಹೋದರಿ ಮೂಕಮ್ಮದೇವಿ ಜಾತ್ರೆ ನಿಮಿತ್ತ ಈಚೆಗೆ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಶಾಂತಿಪಾಲನೆ ಹಾಗೂ ಪ್ರಾಣಿ ಬಲಿ ನಿಷೇಧ ಕುರಿತು ಸಭೆಯಲ್ಲಿ ಅವರು ಮಾತನಾಡಿದರು.

    ಜಾತ್ರೆ ಸಂದರ್ಭದಲ್ಲಿ ಗ್ರಾಮದಿಂದ 2 ಕಿಮೀ ವ್ಯಾಪ್ತಿಯಲ್ಲಿ ವಾಹನ ನಿಲುಗಡೆಗೆ ಕಮಿಟಿ ಹಾಗೂ ಗ್ರಾಪಂ ವತಿಯಿಂದ ವ್ಯವಸ್ಥೆ ಕಲ್ಪಿಸಿ ಕೊಡಬೇಕು ಎಂದರು. ನಂದಗಡ ಠಾಣೆ ಪಿಎಸ್‌ಐ ರಾಧಾ ಸಪಾಟೆ ಮಾತನಾಡಿ, ಅಂಗಡಿಗಳಿಗೆ ರಸ್ತೆ ಹಾಗೂ ಮಂದಿರದ ಅಕ್ಕಪಕ್ಕ ಜಾಗ ಬಿಟ್ಟು ಕೊಡಬೇಕು. ಇದರಿಂದ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಅನುಕೂಲವಾಗುತ್ತದೆ. ಸಾರ್ವಜನಿಕ ಸ್ಥಳ, ಮಂದಿರದ ಮುಂದೆ ಹಾಗೂ ಎಲ್ಲೆಡೆ ಪ್ರಾಣಿ, ಪಕ್ಷಿ ಬಲಿ ನಿಷೇಧಿಸಲಾಗಿದೆ ಎಂದರು. ಮಂದಿರದ ಅಧ್ಯಕ್ಷ ಕಾರ್ತಿಕ ಅಂಬೋಜಿ ಮಾತನಾಡಿದರು. ಬೀಡಿ ಉಪ ತಹಸೀಲ್ದಾರ್ ಶಿವಾನಂದ ಘೋನಸಗಿ, ಕಂದಾಯ ನಿರೀಕ್ಷಕ ಬಿ.ಎನ್. ಸೀಮಾಣಿ, ಶಿರಸ್ತೆದಾರ ಕಲ್ಲಪ್ಪ ಕೋಲಕಾರ, ಗ್ರಾಮ ಲೆಕ್ಕಾಧಿಕಾರಿ ರಾಜೇಶ ಯು, ಪಿಡಿಒ ಸಂಜೀವ ಬೊಂಗಾಳೆ, ಗ್ರಾಪಂ ಅಧ್ಯಕ್ಷ ಭೀಮಪ್ಪ ಅಂಬೋಜಿ, ರಮೇಶ ಕುಚೇರಿ, ಪಿ.ಕೆ. ಫಿರೋಜಿ, ಗೌಸಲಾಲ ಪಟೇಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts