More

    ಬಿಳಗಿ ಜಾತ್ರೆಯಲ್ಲಿ ಪ್ಲಾಸ್ಟಿಕ್ ಮುಕ್ತ ಪರಿಸರ

    ವಿಜಯವಾಣಿ ಸುದ್ದಿಜಾಲ ಸಿದ್ದಾಪುರ: ವಿಶೇಷವಾಗಿ ಈ ವರ್ಷದ ಜಾತ್ರೆ ಮಾದರಿಯಾಗಿಸಬೇಕೆನ್ನುವ ಉದ್ದೇಶದಿಂದ ದೇವಸ್ಥಾನದ ಆಡಳಿತ ಮಂಡಳಿ, ಜಾತ್ರಾ ಕಮಿಟಿ ಹಾಗೂ ಊರವರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತ ಪ್ಲಾಸ್ಟಿಕ್ ಮುಕ್ತ ಪರಿಸರ ಸ್ನೇಹಿ ಜಾತ್ರೆ ನಡೆಸುವುದಕ್ಕೆ ಮುಂದಾಗಿದೆ.

    ಸ್ವಚ್ಛತೆಯ ದೃಷ್ಟಿಯಿಂದ ಎಲ್ಲ ಅಂಗಡಿಗಳ ಮುಂದೆ ಕಸ ಹಾಕುವುದಕ್ಕೆ ಚೀಲ ಇಡಲಾಗಿದೆ. ಇದನ್ನು ನಿತ್ಯ ವಿಲೇವಾರಿ ಮಾಡುವುದಕ್ಕೆ ಚಂದ್ರಹಾಸ ಚನ್ನಯ್ಯ ಹೂವಿನಮನೆ ಅವರಿಗೆ ವಹಿಸಿದ್ದು ಅವರು 8 ತಂಡಗಳಲ್ಲಿ ಜಾತ್ರಾ ಕಮಿಟಿ ನಿಗದಿಪಡಿಸಿದಲ್ಲಿ ಕಸ ವಿಲೇವಾರಿ ಮಾಡುತ್ತಿದ್ದಾರೆ.

    ಇನ್ನು ಜಾತ್ರೆಗೆ ಜಿಲ್ಲೆಯ ಹಾಗೂ ವಿವಿಧ ಕಡೆಗಳಿಂದ ಭಕ್ತರು ಆಗಮಿಸಿ ವಿಶೇಷ ಪೂಜೆ. ಹರಕೆ ಸಲ್ಲಿಸುತ್ತಿದ್ದಾರೆ. ನಿತ್ಯ ಬೆಳಗ್ಗೆ 8ರಿಂದ ರಾತ್ರಿ 9ರವರೆಗೆ ಭಕ್ತರಿಗೆ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ನಿತ್ಯ ದೇವಿಯ ಸನ್ನಿದಿಯಲ್ಲಿ ಪಾರಾಯಣ, ಕುಂಕುಮಾರ್ಚನೆ ನಡೆಯಲಿದೆ.

    ಮನರಂಜನೆ: ಜಾತ್ರೆಯಲ್ಲಿ ದೇವಿಯ ದರ್ಶನ ಪಡೆದು ನಂತರ ಮನರಂಜನೆಗೆ ಹೆಚ್ಚು ಅವಕಾಶ ಇದೆ. ತೊಟ್ಟಿಲು, ಬಾವಿಯಲ್ಲಿ ಬೈಕ್, ಸೈಕಲ್, ಕಾರು ಓಡಿಸುವುದು, ಸಂಗೀತ ಖುರ್ಚಿ ಸೇರಿ ಮಕ್ಕಳ ಆಟಿಕೆ ಯಂತ್ರಗಳು ಗಮನಸೆಳೆಯುತ್ತಿವೆ.

    ಜಾತ್ರಾ ಗದ್ದುಗೆ ಸಿದ್ದಾಪುರ- ಕುಮಟಾ ರಸ್ತೆಯ ಪಕ್ಕದಲ್ಲಿಯೇ ಇರುವು ದರಿಂದ ವಾಹನ ಸಂಚಾರಕ್ಕೆ ತೊಂದರೆ ಆಗದಂತೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡಿದೆ. ಜಾತ್ರೆಗಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿದೆ. | ಪ್ರಕಾಶ ಸಿಪಿಐ ಸಿದ್ದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts