More

    ಬಿಳಗಿಯ ಮಾರಿಕಾಂಬಾದೇವಿ ಜಾತ್ರೆ 28ರಿಂದ

    ಸಿದ್ದಾಪುರ: ತಾಲೂಕಿನ ಐತಿಹಾಸಿಕ ಕ್ಷೇತ್ರ ಬಿಳಗಿಯ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆ ಜ. 28ರಿಂದ ಫೆ.5ರವರೆಗೆ ವಿಜೃಂಭಣೆಯಿಂದ ಪರಿಸರ ಸ್ನೇಹಿ, ಪ್ಲಾಸ್ಟಿಕ್ ಮುಕ್ತ ಜಾತ್ರೆಯನ್ನಾಗಿ ಆಚರಿಸಲು ತೀರ್ವನಿಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಡಾ. ರವಿ ಆರ್.ಹೆಗಡೆ ಹೂವಿನಮನೆ ಹೇಳಿದರು.

    ಬಿಳಗಿಯ ಮಾರಿಕಾಂಬಾ ದೇವಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಜಾತ್ರೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಪ್ಲಾಸ್ಟಿಕ್ ಬಳಸುವುದಿಲ್ಲ. ಅದರಂತೆ ಯಾವುದೇ ಅಂಗಡಿಕಾರರು ಪ್ಲಾಸ್ಟಿಕ್ ಬಳಸದಂತೆ ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಅನೈತಿಕ ಹಾಗೂ ಅಶ್ಲೀಲ ಚಟುವಟಿಕೆಗೆ ಕಟ್ಟುನಿಟ್ಟಾಗಿ ಕಡಿವಾಣ ಹಾಕಲಾಗುತ್ತದೆ. ಎಲ್ಲ ಕಡೆ ಸಿ.ಸಿ ಟಿವಿ ಕ್ಯಾಮರಾ ಅಳವಡಿಸಲಾಗುತ್ತದೆ. ಮುಖ್ಯವಾಗಿ ದೇವಾಲಯಕ್ಕೆ ಸಂಬಂಧಪಟ್ಟ 4 ಸಾವಿರ ಕುಟುಂಗಳಿಂದ ವರಾಡ ಪೂಜೆ ನಡೆಸಿ ಅವರಿಗೆ ಪ್ರಸಾದ ನೀಡಲಾಗುತ್ತದೆ. ವಾಹನ ನಿಲುಗಡೆಗೆ ಐದು ಕಡೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತದೆ ಎಂದರು. ಜಾತ್ರೆ ನಡೆಯುವ ಎಲ್ಲ ದಿನ ರಾತ್ರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ವಿಧಾನಸಭಾಧ್ಯಕ್ಷರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಾತ್ರೆಗೆ ಆಗಮಿಸುವಂತೆ ವಿನಂತಿಸಿಕೊಳ್ಳಲಾಗಿದೆ.

    ಧಾರ್ವಿುಕ ಕಾರ್ಯಕ್ರಮ: ಜ.28ರಂದು ರಾತ್ರಿ ಹೊಳೆ ಚಪ್ಪರದಲ್ಲಿ ಮಾರಿಕಾಂಬಾ ದೇವಿಯ ಧಾರ್ವಿುಕ ಕಾರ್ಯಕ್ರಮ ಆರಂಭಗೊಂಡು ರಾತ್ರಿ 12ಕ್ಕೆ ಮೆರವಣಿಗೆಯೊಂದಿಗೆ ಜಾತ್ರಾ ಗದ್ದುಗೆಗೆ ತರಲಾಗುತ್ತದೆ. 29ರಂದು ಬೆಳಗ್ಗೆ 6ಕ್ಕೆ ಮೊಕ್ತೇಸರರ ಯಜಮಾನತ್ವದಲ್ಲಿ ಪುರೋಹಿತರಿಂದ ಪೂಜಾ ವಿಧಿ-ವಿಧಾನ ಪ್ರಾರಂಭವಾಗಿ 11ರಿಂದ ಗ್ರಾಮಸ್ಥರ ಪೂಜೆ ನಂತರ ಭಕ್ತರಿಂದ ಸೇವೆ ಪ್ರಾರಂಭ. ಪ್ರತಿ ದಿನ ಬೆಳಗ್ಗೆ ದೇವಿ ಸಪ್ತಶತಿ ಪಾರಾಯಣ, ಬೆಳಗ್ಗೆ 8ರಿಂದ ರಾತ್ರಿ 9ರವರೆಗೆ ದೇವಿಯ ದರ್ಶನ. ಫೆ.4ರಂದು ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ. ಫೆ.5ರಂದು ಬೆಳಗ್ಗೆ 9ರವರೆಗೆ ಭಕ್ತರಿಂದ ಸೇವೆಗೆ ಅವಕಾಶ ಇದ್ದು ನಂತರ ದೇವಿಯ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ.

    ಜಾಗ ಲೀಲಾವು 19ರಂದು
    ಜ.19ರಂದು ಬೆಳಗ್ಗೆ 9ಕ್ಕೆ ಜಾಗ ಲೀಲಾವು ನಡೆಯಲಿದ್ದು ಆಸಕ್ತರು ಪಾಲ್ಗೊಳ್ಳಬಹುದಾಗಿದೆ. ಮಾಹಿತಿಗಾಗಿ 94480 76609, 94821 89253 ಅಥವಾ 80883 11803ಗೆ ಸಂರ್ಪಸುವಂತೆ ಡಾ. ರವಿ ಹೆಗಡೆ ತಿಳಿಸಿದರು. ದೇವಾಲಯದ ಮೊಕ್ತೇಸರ ಶ್ರೀಧರ ಎನ್. ಹೆಗಡೆ ನೀರಗಾರ, ಪ್ರಧಾನ ಕಾರ್ಯದರ್ಶಿ ದಯಾನಂದ ಚಿನಿವಾರ, ಗೌರೀಶ ಹೆಗಡೆ, ಗೋಪಿಚಂದ ಮಡಗಾಂವಕರ್, ಗಜಾನನ ನಾಯ್ಕ, ಲಕ್ಷ್ಮಣ ಜಿ.ನಾಯ್ಕ, ಮಹಾಬಲೇಶ್ವರ ಆರ್.ನಾಯ್ಕ, ಜಯಪ್ರಕಾಶ ನಾಯ್ಕ, ನಾರಾಯಣ ಮಡಗಾಂವಕರ್, ವೀರಭದ್ರ ಆರ್.ಹೆಗಡೆ, ಅನಂತ ವಿ.ಗೌಡ, ವೀರೇಶ ನಾಯ್ಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts