More

    ಬಿತ್ತನೆ ಬೀಜದ ಕೊರತೆ ನೀಗಿಸಿ

    ಕಲಬುರಗಿ: ಜಿಲ್ಲಾಧ್ಯಂತ ಎರಡು ದಿನದಿಂದ ಮಳೆಯಾಗುತ್ತಿದೆ. ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಇಂಥ ಸಂದರ್ಭದಲ್ಲಿ ಬಿತ್ತನೆ ಬೀಜ ಸಿಗುತ್ತಿಲ್ಲ ಎಂದು ಆರೋಪಿಸಿ ಪ್ರಾಂತ ರೈತ ಸಂಘದ ಕಾರ್ಯಕರ್ತರು ಅಧ್ಯಕ್ಷ ಮಾರುತಿ ಮಾನ್ಪಡೆ ನೇತೃತ್ವದಲ್ಲಿ ಕೃಷಿ ಇಲಾಖೆ ಬಳಿ ಗುರುವಾರ ಪ್ರತಿಭಟನೆ ನಡೆಸಿದರು.
    ಜಿಲ್ಲೆಯಲ್ಲಿ ಸೋಯಾಬೀನ್, ಹೆಸರು, ತೊಗರಿ ಬೀಜಗಳ ಕೊರತೆ ಎದ್ದು ಕಾಣುತ್ತಿದೆ. ಕೃಷಿ ಸಚಿವರು ಬಿತ್ತನೆ ಬೀಜದ ಕೊರತೆ ಇಲ್ಲ ಎಂದು ಹೇಳಿಕೆ ಕೊಡುತ್ತಾರೆ. ಆದರೆ ರೈತರಿಗೆ ಬೀಜ ಸಿಗುತ್ತಿಲ್ಲ ಎಂದು ಮಾನ್ಪಡೆ ದೂರಿದರು.
    ರೈತ ಸಂಪರ್ಕ ಕೇಂದ್ರಗಳಲ್ಲಿ 1200 ರೂ. ಸೋಯಾಬೀನ್ ಬೀಜ ಸಿಗುತ್ತದೆ. ಅಲ್ಲಿ ಸಮರ್ಪಕವಾಗಿ ಸಿಗದ ಕಾರಣ 2500 ರೂ.ನೀಡಿ ಮಾರುಕಟ್ಟೆಯಲ್ಲಿ ಖರೀದಿಸುತ್ತಿದ್ದಾರೆ. ತಿಂಗಳ ಮೊದಲೇ ಸೋಯಾಬೀನ್ ಬೀಜ ಸಂಗ್ರಹಿಸಿ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಇಡಲಾಗಿತ್ತು. ಬಿತ್ತಣಿಕೆ ಶುರುವಾಗುವ ಸಂದರ್ಭದಲ್ಲಿ ಬೀಜಗಳನ್ನು ವಾಪಸ್ ಪಡೆದಿದೆ ಸಕರ್ಾರ. ಕಳಪೆಮಟ್ಟದ ಬೀಜ ಸಕರ್ಾರ ಖರೀದಿಸಿದೆಯಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಸಕರ್ಾರ ಕೂಡಲೇ ರೈತರಿಗೆ ಗುಣಮಟ್ಟದ ಬೀಜ ವಿತರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
    ಮುಖಂಡರಾದ ವಿಠ್ಠಲ್ ಆಲಗೂಡ, ಶಾಂತಪ್ಪ ಪಾಟೀಲ್, ಮಲ್ಲನಗೌಡ ಪಾಟೀಲ್, ಆರ್.ಬಿ.ಪಾಟೀಲ್, ಸುಧಾಮ್ ಧನ್ನಿ, ಶರಣಬಸಪ್ಪ ಗಣಜಲಖೇಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts