More

    ಬಿಡ್ಕಿಬಯಲಿನಲ್ಲಿ ತಮಟೆ ಚಳವಳಿ

    ಶಿರಸಿ: ಘಟ್ಟದ ಮೇಲಿನ ತಾಲೂಕುಗಳನ್ನು ಒಳಗೊಂಡು ಶಿರಸಿ ಪ್ರತ್ಯೇಕ ಜಿಲ್ಲೆ ರಚನೆ ಮಾಡುವಂತೆ ಆಗ್ರಹಿಸಿ ಶಿರಸಿ ಜಿಲ್ಲಾ ಹೋರಾಟ ಸಮಿತಿ ವತಿಯಿಂದ ಶುಕ್ರವಾರ ನಗರದ ಬಿಡ್ಕಿಬಯಲಿನಲ್ಲಿ ತಮಟೆ ಚಳವಳಿ ನಡೆಸಲಾಯಿತು.

    ಗಾಂಧಿ ಪ್ರತಿಮೆ ಬಳಿ ಚಂಡೆ ವಾದಕ ವಿಘ್ನೕಶ್ವರ ಗೌಡ ಚಂಡೆ ಭಾರಿಸುವ ಮೂಲಕ ಚಾಲನೆ ನೀಡಿದರು. ಈ ವೇಳೆ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ ಮಾತನಾಡಿ, ಈಗಾಗಲೇ ರಾಜ್ಯ ಸರ್ಕಾರಕ್ಕೆ 65 ಸಾವಿರ ಪತ್ರ ಬರೆಯಲಾಗಿದೆ. ನ.1 ರೊಳಗೆ ಜಿಲ್ಲೆ ರಚನೆ ಮಾಡದಿದ್ದರೆ ಶಿರಸಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸದೆ ಕರಾಳ ದಿನ ಆಚರಿಸಲಾಗುವುದು ಎಂದು ಎಚ್ಚರಿಸಿದರು.

    ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಚಂದ್ರು ದೇವಾಡಿಗ ಮಾತನಾಡಿ, ಜಿಲ್ಲಾ ಕೂಗಿಗೆ ನ್ಯಾಯ ಒದಗಿಸಬೇಕಾಗಿದ್ದು ಈಗಿನ ಸರ್ಕಾರದ ಕರ್ತವ್ಯವಾಗಿದೆ. ಆಡಳಿತಾತ್ಮಕ ವ್ಯವಸ್ಥೆ ಸರಿಯಾಗಲು ಶಿರಸಿ ಜಿಲ್ಲೆ ರಚನೆಯಾಗಲೇಬೇಕು. ಈ ಹೋರಾಟಕ್ಕೆ ಎಲ್ಲರ ಜೊತೆ ಕೈಜೋಡಿಸಬೇಕು ಎಂದರು.

    ಈ ವೇಳೆ ವರ್ತಕರ ಸಂಘದ ಅಧ್ಯಕ್ಷ ಪ್ರೇಮಕುಮಾರ ಮಾಳವದೆ, ಕೆನರಾ ಬಾರ್ ಬೆಂಡಿಂಗ್ ಅಸೋಸಿಯೇಶನ್ ಅಧ್ಯಕ್ಷ ವೆಂಕಟೇಶ ನಾಯ್ಕ, ಕರವೆ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ನಾಯ್ಕ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಹೋರಾಟ ಸಮಿತಿಯ ಮೋಹನ ಶಿರೂರು, ದಿಲೀಪ್ ಆರ್. ಯಲ್ಲಾಪುರ, ಮಂಜು ಮೊಗೇರ, ಎಂ.ಎಂ.ಭಟ್ಟ, ಬನವಾಸಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಉದಯಕುಮಾರ ಕಾನಳ್ಳಿ, ಸಾಮಾಜಿಕ ಕಾರ್ಯಕರ್ತ ಪರಮಾನಂದ ಹೆಗಡೆ, ಪ್ರಮುಖರಾದ ನಜೀರ್​ವುೂಡಿ, ರಾಘು ಶೆಟ್ಟಿ, ಮಹೇಶ ನಾಯ್ಕ ಸೇರಿದಂತೆ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts