More

    ಬಿಜೆಪಿಯಿಂದ ಪಾರದರ್ಶಕ, ಜನಪರ ಆಡಳಿತ

    ಗಜೇಂದ್ರಗಡ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 2ನೇ ಆಡಳಿತಾವಧಿಯ ಮೊದಲ ವರ್ಷದ ಸಾಧನೆ ತಿಳಿಸುವ ಕರಪತ್ರಗಳನ್ನು ಶಾಸಕ ಕಳಕಪ್ಪ ಬಂಡಿ ಭಾನುವಾರ ಪಟ್ಟಣದ ವಿವಿಧ ಬಡಾವಣೆಗಳ ಮನೆಮನೆಗೆ ತೆರಳಿ ವಿತರಿಸಿದರು.

    ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪಾರದರ್ಶಕ ಹಾಗೂ ಜನಪರ ಆಡಳಿತದ ನಡೆಸುತ್ತಿದೆ. 70 ವರ್ಷಗಳಿಂದ ಕಾಶ್ಮೀರ ಸಮಸ್ಯೆ, 700 ವರ್ಷಗಳ ರಾಮಮಂದಿರ ಸಮಸ್ಯೆಗಳನ್ನು ನ್ಯಾಯಾಂಗದ ಚೌಕಟ್ಟಿನಲ್ಲಿ ಇತ್ಯರ್ಥ ಮಾಡಲಾಗಿದೆ. ತ್ರಿವಳಿ ತಲಾಖ್​ಗೆ ಅಂತ್ಯ ಹಾಡಿ ಅಲ್ಪಸಂಖ್ಯಾತ ಮಹಿಳೆಯರಿಗೆ ನ್ಯಾಯ ಒದಗಿಸಲಾಗಿದೆ. ಇಡೀ ಜಗತ್ತನ್ನೇ ತಲ್ಲಣಗೊಳಿಸಿದ ಕರೋನಾ ವೈರಸ್ ಹರಡದಂತೆ ಲಾಕ್​ಡೌನ್​ನಂತಹ ಮಹತ್ವದ ನಿರ್ಧಾರ ತೆಗೆದುಕೊಂಡು ನಿಯಂತ್ರಣಕ್ಕೆ ಮುಂದಾಗಿದೆ. ಅಲ್ಲದೆ, ಹಲವು ಯೋಜನೆಗಳನ್ನು ಕೇಂದ್ರ ಸರ್ಕಾರ ಯಶಸ್ವಿಯಾಗಿ ಜಾರಿಗೆ ತಂದಿದೆ ಎಂದು ಕಳಕಪ್ಪ ಬಂಡಿ ಹೇಳಿದರು.

    ರೋಣ ಮಂಡಲದ ಅಧ್ಯಕ್ಷ ಮುತ್ತಣ್ಣ ಕಡಗದ ಮಾತನಾಡಿ, ದೇಶದ ಸರ್ವಾಂಗೀಣ ಅಭಿವೃದ್ಧಿಯ ಜೊತೆಗೆ ಕೇಂದ್ರ ಸರ್ಕಾರದ ಪಾರದರ್ಶಕ ಆಡಳಿತದಿಂದಾಗಿ ರೈತರು ಹಾಗೂ ಜನಸಾಮಾನ್ಯರಿಗೆ ಸರ್ಕಾರದ ಸೌಲಭ್ಯಗಳು ನೇರ ಹಾಗೂ ಸಕಾಲದಲ್ಲಿ ದೊರೆಯುವಂತಾಗಿದೆ ಎಂದರು.

    ಪುರಸಭೆ ಸದಸ್ಯ ಶರಣಪ್ಪ ಉಪ್ಪಿನಬೆಟಗೇರಿ, ಬಿಜೆಪಿ ನಗರ ಘಟಕದ ಅಶೋಕ ವನಾಲ, ಶರಣಪ್ಪ ದೊಣ್ಣೆಗುಡ್ಡ, ಸಂಜು ದೇಸಾಯಿ, ಯಲ್ಲಪ್ಪ ಅಬ್ಬಿಗೇರಿ, ಬಾಳು ಗೌಡರ, ಅಮರೇಶ ನಾಯಕ, ಪರಶುರಾಮ ಚಿಲಝುರಿ, ಪೃತ್ವಿರಾಜ ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts