More

    ಬಿಜಿನೆಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ

    ಬೆಳಗಾವಿ: ಬೆಳಗಾವಿ ರಾಯಲ್ಸ್ ರೌಂಡ್ ಟೇಬಲ್ 205 ವತಿಯಿಂದ ವ್ಯಾಪಾರ ಸಂಸ್ಥೆಗಳ ಪ್ರತಿನಿಧಿಗಳಿಗೆ ತಾಲೂಕಿನ ಮಂಡೋಳಿ ರಸ್ತೆಯಲ್ಲಿ ಫೆ.4 ಮತ್ತು 5ರಂದು ಬಿಜಿನೆಸ್ ಪ್ರೀಮಿಯರ್ ಲೀಗ್ಸ್-2023 ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಈ ಬಾಕ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಒಟ್ಟು 24 ವ್ಯಾಪಾರ ಸಂಸ್ಥೆಗಳು ನೋಂದಣಿ ಮಾಡಿಸಿವೆ. ಪಂದ್ಯಾವಳಿಯ ಪ್ರಾಯೋಜಕತ್ವವನ್ನು ಟೆಕ್ನೋಮೆಟ್ ಎಂಟರ್‌ಪ್ರೈಸಸ್ (ಫೌಂಡ್ರಿ ಉತ್ಪನ್ನಗಳ ವಿತರಕರು), ಪ್ರದೀಪ್ ಹೊಸಮನಿ ಹಣಕಾಸು ಸೇವೆಗಳು, ಸುಲಕ್ಷ್ಮೀ ಎಂಟರ್‌ಪ್ರೈಸೀಸ್ (ಫೌಂಡ್ರಿ ಕಚ್ಚಾ ವಸ್ತುಗಳ ಡೀಲರ್) ಮತ್ತು ಇನ್ನೂ ಅನೇಕರು ಬೆಂಬಲ ನೀಡಿದ್ದಾರೆ. ಕಾರ್ಯಕ್ರಮದ ಮೂಲಕ ಸಂಗ್ರಹವಾಗುವ ಹಣವನ್ನು ರೌಂಡ್ ಟೇಬಲ್ ಇಂಡಿಯಾ ರಾಷ್ಟ್ರೀಯ ಯೋಜನೆಯಡಿ ಮಾರ್ಕಂಡೇಯ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ 4 ತರಗತಿ ಕೊಠಡಿ ನಿರ್ಮಿಸಲು ಬಳಸಲಾಗುತ್ತದೆ.

    ಬೆಳಗ್ಗೆ 10ರಿಂದ ರಾತ್ರಿ 9 ರವರೆಗೆ ಪಂದ್ಯಗಳು ನಡೆಯಲಿವೆ. 7 ಓವರ್‌ಗಳ ಪಂದ್ಯಾವಳಿಯಾಗಿದ್ದು, ಪ್ರತಿ ಬದಿಯಲ್ಲಿ 7 ಆಟಗಾರರು ಆಡುತ್ತಾರೆ. ಲೈವ್ ಸ್ಕೋರಿಂಗ್ ‘ಕ್ರಿಚೆರೋಸ್ ಆ್ಯಪ್’ನಲ್ಲಿ ಲಭ್ಯವಿರುತ್ತದೆ. ಅಲ್ಲದೆ ಲೈವ್ ವೀಡಿಯೋ ಸ್ಟ್ರೀಮಿಂಗ್‌‘ಯೂಟ್ಯೂಬ್ ಸ್ಪೋಟ್ಸ್ ಆನ್’ ಚಾನೆಲ್‌ನಲ್ಲಿ ಲಭ್ಯವಿರುತ್ತದೆ. ಈ ಪಂದ್ಯಾವಳಿ ನಿಮಿತ್ತ ನಗರದ ಹೋಟೆಲ್ ‘ನೇಟಿವ್’ನಲ್ಲಿ ಶನಿವಾರ ಟಿ-ಶರ್ಟ್ ಹಾಗೂ ಟ್ರೋಫಿ ಬಿಡುಗಡೆ ಮಾಡಲಾಯಿತು. ಎಲ್ಲ ತಂಡದ ಮಾಲೀಕರು, ತಂಡದ ನಾಯಕರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts