More

    ಬಿಎಸ್​ಎನ್​ಎಲ್ ಪುನಶ್ಚೇತನ ಚುರುಕುಗೊಳಿಸಲು ಒತ್ತಾಯ

    ಕಾರವಾರ: ಬಿಎಸ್​ಎನ್​ಎಲ್ ಪುನಶ್ಚೇತನ ಯೋಜನೆಗಳನ್ನು ಚುರುಕು ಮಾಡುವಂತೆ ಆಗ್ರಹಿಸಿ ನಿಗಮದ ಜಿಲ್ಲೆಯ ನಿವೃತ್ತ ನೌಕರರು ಸೋಮವಾರ ಧರಣಿ ನಡೆಸಿದರು.

    ಭಾರತ ಸಂಚಾರ ನಿಗಮದ ಎಲ್ಲ ಯೂನಿಯನ್ ಹಾಗೂ ಸಂಘಟನೆಗಳ ಒಕ್ಕೂಟ (ಎಯುಎಬಿ) ದೇಶಾದ್ಯಂತ ಕರೆ ನೀಡಿದ ಒಂದು ದಿನದ ಉಪವಾಸ ಸತ್ಯಾಗ್ರಹಕ್ಕೆ ಸ್ಪಂದಿಸಿ ಜಿಲ್ಲೆಯ ನಿವೃತ್ತ ನೌಕರರು ನಗರ ಬಿಎಸ್​ಎನ್​ಎಲ್ ಜಿಎಂ ಕಚೇರಿಯ ಎದುರು ಸಾಂಕೇತಿಕ ಧರಣಿ ಕೈಗೊಂಡರು.

    ಬಿಎಸ್​ಎನ್​ಎಲ್ ಮತ್ತು ಎಂಟಿಎನ್​ಎಲ್ ಪುನಶ್ಚೇತನಕ್ಕಾಗಿ ಸರ್ಕಾರ 69 ಸಾವಿರ ಕೋಟಿ ರೂ. ಬಿಡುಗಡೆ ಮಾಡುವುದಾಗಿ ಘೊಷಿಸಿದೆ. ಪುನಶ್ಚೇತನದ ಭಾಗವಾಗಿ 4ಜಿ ತರಂಗಾಂತರ ಗುಚ್ಛ ವಿತರಣೆ, ನಿಗಮದ ಆಸ್ತಿಗಳ ಮಾಪನ, ಹಾಗೂ 15 ಸಾವಿರ ಕೋಟಿಗಳ ಭರವಸೆಯ ಬಾಂಡ್ ನೀಡುವುದು, ನೌಕರರಿಗೆ ಸ್ವಯಂ ನಿವೃತ್ತಿ ಜಾರಿಗೊಳಿಸುವ ಬಗ್ಗೆ ಕೇಂದ್ರ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು.

    ಆದರೆ, 4ಜಿ ತರಂಗಾಂತರ ಗುಚ್ಛ ವಿತರಣೆಯಾಗಿಲ್ಲ. ಆಸ್ತಿಗಳ ಮಾಪನ ಕುಂಟುತ್ತ ಸಾಗಿದೆ. 78 ಸಾವಿರ ನೌಕರರಿಂದ ಸ್ವಯಂ ನಿವೃತ್ತಿ ಪಡೆಯಲಾಗಿದೆ. ಆದರೆ, ಅವರಿಗೆ ನಿವೃತ್ತಿ ಸೌಲಭ್ಯ ನೀಡಿಲ್ಲ. ಈ ಎಲ್ಲ ಅಂಶಗಳನ್ನು ಟೆಲಿಕಾಂ ಮಂತ್ರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇದರಿಂದ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ನೌಕರರು ತಿಳಿಸಿದರು. ನೌಕರರ ಸಂಘಟನೆಗಳ ಮುಖಂಡರಾದ ಎಂ.ಎಂ. ಹೆಗಡೆ, ಪಿ.ಎಸ್. ಭಟ್, ಎಂ.ಜಿ. ನಾಯ್ಕ, ಪ್ರದೀಪ ಹುಲಸ್ವಾರ, ಕೃಷ್ಣ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts