More

    ಬಿಂಕದಕಟ್ಟೆ ಮೃಗಾಲಯಕ್ಕೆ ಮತ್ತೆರಡು ಸಿಂಹಗಳ ಸೇರ್ಪಡೆ

    ಗದಗ: ರಾಜ್ಯದಲ್ಲಿಯೇ ಏಕೖಕ ಕಿರು ಮೃಗಾಲಯ ಹಾಗೂ ಉತ್ತರ ಕರ್ನಾಟಕದ ಪ್ರಮುಖ ಪ್ರವಾಸಿ ಕೇಂದ್ರವಾಗಿ ಬೆಳೆಯುತ್ತಿರುವ ಗದಗ ತಾಲೂಕಿನ ಬಿಂಕದಕಟ್ಟಿ ಮೃಗಾಲಯಕ್ಕೆ ಗುರುವಾರ ಮತ್ತೆರೆಡು ಸಿಂಹಗಳ ಆಗಮನವಾಗಿದೆ.

    ಕಳೆದ ವರ್ಷ ರಾಷ್ಟ್ರೀಯ ಸಿಂಹ ದಿನದ ಅಂಗವಾಗಿ ಮಾ. 18ರಂದು ಬನ್ನೇರುಘಟ್ಟ ಜೖವಿಕ ಉದ್ಯಾನದಿಂದ ಗದಗ ಬಿಂಕದಕಟ್ಟಿ ಕಿರು ಮೃಗಾಲಯಕ್ಕೆ 11 ವರ್ಷದ ಧರ್ಮ ಹಾಗೂ ಅರ್ಜುನ ಎಂಬ ಎರಡು ಗಂಡು ಸಿಂಹಗಳನ್ನು ಕರೆತರಲಾಗಿತ್ತು. ಇದೀಗ ಜೋಡಿ ಸಿಂಹಗಳ ಆಗಮನದಿಂದ ಮೃಗಾಲಯ ಕಳೆಗಟ್ಟಿದ್ದು, ಸಿಂಹಗಳ ಸಂಖ್ಯೆ ನಾಲ್ಕಕ್ಕೇರಿದೆ. ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.

    1972ರಲ್ಲಿ ಪ್ರಾರಂಭವಾದ ಬಿಂಕದಕಟ್ಟಿ ಕಿರು ಮೃಗಾಲಯ ಈಗ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಈ ನಿಮಿತ್ತ ಪ್ರಸಕ್ತ ಸಾಲಿನಲ್ಲಿ ನಾನಾ ಜಾಗೃತಿ ಕಾರ್ಯಕ್ರಮವನ್ನು ಮೃಗಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದರ ಅಂಗವಾಗಿ, ಕೇಂದ್ರೀಯ ಮೃಗಾಲಯ ಪ್ರಾಧಿಕಾರ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಮಧ್ಯಪ್ರದೇಶದ ಇಂಧೋರಿನ ಕಮಲಾ ಮೃಗಾಲಯದಿಂದ ಶಿವ ಎಂಬ ಹೆಸರಿನ ಮೂರು ವರ್ಷದ ಗಂಡು ಸಿಂಹ ಹಾಗೂ ಗಂಗಾ ಎಂಬ ಹೆಸರಿನ ಹೆಣ್ಣು ಮರಿ ಸಿಂಹವನ್ನು ಗುರುವಾರ ಮೃಗಾಲಯಕ್ಕೆ ಕರೆತರಲಾಯಿತು. ಶಾಸಕ ಎಚ್.ಕೆ. ಪಾಟೀಲ ಸಿಂಹದ ಮರಿಗಳನ್ನು ಸ್ವಾಗತಿಸಿದರು.

    ಗದಗ ಮೃಗಾಲಯದಿಂದ ಕಪಿಲ ಎಂಬ ಗಂಡು ತೋಳ ಹಾಗೂ ಮೖಸೂರು ಮೃಗಾಲಯದಿಂದ ಕಸ್ತೂರಿ ಎಂಬ ಹೆಣ್ಣು ತೋಳವನ್ನು ಇಂಧೋರ್ ಕಮಲಾ ಮೃಗಾಲಯಕ್ಕೆ ಹಸ್ತಾಂತರಿಸಲಾಗಿದೆ.

    ಸಿಂಹ ಮತ್ತು ತೋಳ ವಿನಿಮಿಯ ಕುರಿತು ಹಲವು ದಿನಗಳಿಂದ ಮಾತುಕತೆ ನಡೆದಿತ್ತು. ಬಿಂಕದಕಟ್ಟಿ ಮೃಗಾಯಲದಲ್ಲಿ ಸಿಂಹಗಳಿಗೆ ಅನುಕೂಲಕರ ವಾತಾವರಣ ಇದೆ. ಶಿವ-ಗಂಗಾ ಸಿಂಹಗಳಿಗೆ ಅಗತ್ಯ ಸಿದ್ಧತೆಗಳನ್ನು ಕೖಗೊಳ್ಳಲಾಗಿದೆ. ಮೃಗಾಲಯದ ಮುಡಿಗೆ ಮತ್ತೊಂದು ಗರಿ ಬಂದಂತಾಗಿದೆ.
    | ದೀಪಿಕಾ ಬಾಜಪೇಯಿ, ಅರಣ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts