More

    ಬಾರದ ಬ್ಯಾಡಗಿ ವರ್ತಕರು

    ಗದಗ: ನಗರದ ಎಪಿಎಂಸಿಯಲ್ಲಿ ಶನಿವಾರ ನಡೆದ ಒಣಮೆಣಸಿನಕಾಯಿ ಆನ್​ಲೈನ್ ಟೆಂಡರ್ ಮಾರಾಟ ಪ್ರಕ್ರಿಯೆಯಲ್ಲಿ ಸ್ಥಳೀಯ ಖರೀದಿದಾರರು ಮಾತ್ರ ಪಾಲ್ಗೊಂಡಿದ್ದರು. ಬ್ಯಾಡಗಿ ಒಣಮೆಣಸಿನಕಾಯಿ ವರ್ತಕರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸದಿರುವುದು ಕಂಡುಬಂದಿತು.

    ಶುಕ್ರವಾರ ಸ್ಥಳೀಯ ಎಪಿಎಂಸಿ ಅಧ್ಯಕ್ಷ ಹಾಗೂ ಸದಸ್ಯರು ಬ್ಯಾಡಗಿಗೆ ತೆರಳಿ ಅಲ್ಲಿನ ಖರೀದಿದಾರರನ್ನು ಭೇಟಿ ಮಾಡಿ ಗದಗ ಮಾರ್ಕೆಟ್​ಗೂ ಆಗಮಿಸಿ ಉತ್ಪನ್ನ ಖರೀದಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು. ಆದರೂ ಸಹ ಶನಿವಾರ ನಡೆದ ಆನ್​ಲೈನ್ ಟೆಂಡರ್ ಪ್ರಕ್ರಿಯೆಯಲ್ಲಿ ಬ್ಯಾಡಗಿಯ ಖರೀದಿದಾರರು ಪಾಲ್ಗೊಂಡಿಲ್ಲ. ಹೀಗಾಗಿ ದರ ಕೊಂಚ ಇಳಿಮುಖವಾಗಿದೆ. ಶನಿವಾರದ ದರ ಪ್ರತಿ ಕ್ವಿಂಟಾಲ್ ಗೆ ಕನಿಷ್ಠ 2,000 ರೂ., ಗರಿಷ್ಠ 22,000 ರೂ. ಇತ್ತು. ಕಳೆದ ಬುಧವಾರ ಪ್ರತಿ ಕ್ವಿಂಟಾಲ್​ಗೆ 27,99 ರೂ. ಮಾರಾಟವಾಗಿತ್ತು.

    ರೈತರು-ಖರೀದಿದಾರರ ಮಧ್ಯೆ ಮಾತಿನ ಚಕಮಕಿ

    ಗದಗ: ಇಲ್ಲಿನ ಎಪಿಎಂಸಿಯಲ್ಲಿ ಒಣ ಮೆಣಸಿನಕಾಯಿ ಖರೀದಿಯಲ್ಲಿ ವ್ಯತ್ಯಾಸವಾಗಿದ್ದರಿಂದ ಶನಿವಾರ ರೈತರು ಮತ್ತು ಖರೀದಿದಾರರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಎಪಿಎಂಸಿಯ ಎಂ.ಎಂ. ಕನವಳ್ಳಿ ಅಂಗಡಿಯವರು ಇ- ಟೆಂಡರ್​ನ ಬೆಲೆಗಿಂತ ಕಡಿಮೆ ಬೆಲೆ ನೀಡುತ್ತಿದ್ದಾರೆ ಎಂದು ರೋಣ ತಾಲೂಕಿನ ಚಿಕ್ಕಮಣ್ಣೂರಿನ ರೈತ ಎಂದು ರೋಣ ತಾಲೂಕಿನ ಚಿಕ್ಕಮಣ್ಣೂರು ಗ್ರಾಮದ ರೈತ ಬಸವಲಿಂಗಪ್ಪ ಈಶ್ವರಪ್ಪ ಮೇಟಿ ಆರೋಪಿಸಿದ್ದಾರೆ.

    ಇ-ಟೆಂಡರ್​ನಲ್ಲಿ 13,175 ರೂ. ದರ ಸಿಕ್ಕಿತ್ತು. ಆದರೆ, ಅಂಗಡಿಯವರು 12, 170 ರೂ. ಹಣ ನೀಡಲು ಮುಂದೆ ಬಂದಿದ್ದಾರೆ. ಇ-ಟೆಂಡರ್ ಪರಿಶೀಲಿಸಿದಾಗ ದರ ಕಡಿಮೆ ಆಗಿರುವುದು ಗಮನಕ್ಕೆ ಬಂದಿದೆ ಎಂದು ರೈತ ತಿಳಿಸಿದರು. ಈ ಸಂದರ್ಭದಲ್ಲಿ ರೈತರು ಮತ್ತು ಖರೀದಿದಾರರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸರು ಆಗಮಿಸಿ ಸಮಾಧಾನ ಪಡಿಸಿದರು.

    ನಂತರ ಎಪಿಎಂಸಿ ಅಧಿಕಾರಿಗಳ ಮಧ್ಯಪ್ರವೇಶಿಸಿ ಟೆಂಡರ್ ದರ ಪರಿಶೀಲಿಸಿದರು. ಖರೀದಿದಾರರು ಕಣ್ತಪ್ಪಿನಿಂದ ದರ ಏರುಪೇರಾಗಿತ್ತು ಎಂದು ತಪ್ಪು ಒಪ್ಪಿಕೊಂಡ ನಂತರ ಸಮಸ್ಯೆ ಬಗೆಹರಿಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts