More

    ಬಾಗಿಲು ತೆರೆದ ದೇಗುಲಗಳು

    ವಿಜಯವಾಣಿ ಸುದ್ದಿಜಾಲ ಹೊನ್ನಾವರ: ದೇವಸ್ಥಾನಗಳ ಬಾಗಿಲು ತೆರೆಯಲು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಸೋಮವಾರ ತಾಲೂಕಿನ ಇಡಗುಂಜಿ ಶ್ರೀವಿನಾಯಕ ದೇವರಿಗೆ ಅಭಿಷೇಕ, ಪೂಜೆ ನಡೆಸಲಾಯಿತು. ಸರ್ಕಾರದ ಆದೇಶದಂತೆ ಬೆಳಗ್ಗೆ 8 ರಿಂದ 11 ಗಂಟೆವರೆಗೆ ಹಾಗೂ ಮಧ್ಯಾಹ್ನ 3 ರಿಂದ 7 ಗಂಟೆಯವರೆಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

    ಸಂಕಷ್ಟಹರ ಚತುರ್ಥಿ ಆಗಿದ್ದರಿಂದ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು. ಹೂವು, ಹಣ್ಣುಕಾಯಿ, ತೀರ್ಥ, ಪ್ರಸಾದ, ಪಂಚಕಜ್ಜಾಯ, ಗಣಹೋಮ ಮತ್ತಿತರ ಸೇವೆಗಳಿಗೆ ಅವಕಾಶವಿರಲಿಲ್ಲ.

    ಭಕ್ತರ ಸಂಖ್ಯೆ ತೀರ ಕಡಿಮೆ: ಕಾರವಾರ ನಗರದ ವಿವಿಧ ದೇವಸ್ಥಾನಗಳು ಸೋಮವಾರದಿಂದ ಭಕ್ತರ ದರ್ಶನಕ್ಕೆ ತೆರೆದುಕೊಂಡಿವೆ.

    ನಗರದ ಹಬ್ಬುವಾಡ ಗಣಪತಿ ದೇವಸ್ಥಾನ, ಮಾರುತಿ ದೇವಸ್ಥಾನಗಳಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಯಾವುದೇ ಸೇವೆಗಳು, ತೀರ್ಥ ಪ್ರಸಾದ ವಿತರಣೆ ಇರಲಿಲ್ಲ. ಈ ನಡುವೆ ಭಕ್ತರ ಸಂಖ್ಯೆ ತೀರ ಕಡಿಮೆ ಇತ್ತು. ಬಾಡ ಮಹಾದೇವ ದೇವಸ್ಥಾನದಲ್ಲಿ ಮಂಗಳವಾರದಿಂದ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

    ಮಾಸ್ಕ್ ಇಲ್ಲದವರಿಗೆ ಇಲ್ಲ ಪ್ರವೇಶ: ಪವಿತ್ರ ಯಾತ್ರಸ್ಥಳ ಮುರ್ಡೆಶ್ವರದಲ್ಲಿ ಸೋಮವಾರದಿಂದ ಭಕ್ತರ ಪ್ರವೇಶ ಆರಂಭಗೊಂಡಿದ್ದು ತಪಾಸಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

    ದೇವಾಲಯಕ್ಕೆ ಆಗಮಿಸುವ ಭಕ್ತರು ಗುರುತು ಹಾಕಿದ ಜಾಗದಲ್ಲಿ ನಿಂದು ಸರತಿ ಸಾಲಿನಲ್ಲಿ ಸಾಗಬೇಕಾಗಿದೆ. ಮಾಸ್ಕ್ ಇಲ್ಲದ ಭಕ್ತರನ್ನು ಕಡ್ಡಾಯಾಗಿ ಒಳಬಿಡುತ್ತಿಲ್ಲ. ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಕಡ್ಡಾಯವಾಗಿ ಕೈಕಾಲು ತೊಳೆದುಕೊಂಡು ನಂತರ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗುತ್ತಿದೆ. ಸೋಮವಾರ ದರ್ಶನಕ್ಕೆ ಜನಜಂಗುಳಿ ಇರಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts