More

    ಬಸವನಬಾಗೇವಾಡಿಯಲ್ಲಿ ಮಂತ್ರಾಕ್ಷತೆ ಕಲಶದ ಶೋಭಾಯಾತ್ರೆ

    ಬಸವನಬಾಗೇವಾಡಿ: ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಶ್ರೀರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ನಿಮಿತ್ತ ಪಟ್ಟಣಕ್ಕೆ ಅಯೋಧ್ಯೆಯಿಂದ ಆಗಮಿಸಿದ ಮಂತ್ರಾಕ್ಷತೆ ಕಲಶದ ಬೃಹತ್ ಶೋಭಾಯಾತ್ರೆ ಪಟ್ಟಣದಲ್ಲಿ ಶನಿವಾರ ಸಂಜೆ ಅದ್ದೂರಿಯಾಗಿ ಜರುಗಿತು.

    ಪಟ್ಟಣದ ವಿಠ್ಠಲ ಮಂದಿರದಲ್ಲಿ ಶ್ರೀರಾಮ ಪಲ್ಲಕ್ಕಿ, ಮಂತ್ರಾಕ್ಷತೆ ಕಲಶ, ವೀಣಾ ಪೂಜೆ ಸಲ್ಲಿಸಲಾಯಿತು. ಪಟ್ಟಣದ ವಿರಕ್ತಮಠದ ಸಿದ್ಧಲಿಂಗ ಶ್ರೀಗಳು, ಮಹಾರಾಜರಮಠದ ಅಭಿಯಾನಂದ ಸ್ವಾಮೀಜಿ, ಈರಣ್ಣ ಪಟ್ಟಣಶೆಟ್ಟಿ ಅವರು ಶೋಭಾಯಾತ್ರೆಗೆ ಚಾಲನೆ ನೀಡಿದರು.

    ವಿಶ್ವ ಹಿಂದು ಪರಿಷದ್ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಜರುಗಿದ ಶೋಭಾಯಾತ್ರೆಯ ವೀಣೆ, ವಾರಿಕೆ, ಡೊಳ್ಳು, ಬ್ಯಾಂಡ್‌ಬಾಜಿ ಹಾಗೂ ಸಕಲವಾದ್ಯಗಳೊಂದಿಗೆ ಬಸವಜನ್ಮ ಸ್ಮಾರಕದ ಮಹಾದ್ವಾರದ ಮುಖಾಂತರ ಸಂಚರಿಸಿತು. ಪಲ್ಲೇದಕಟ್ಟಿ, ಗೊಳಸಂಗಿಯವರ ಓಣಿ, ಪತ್ತಾರ ಓಣಿ, ಹಾರಿವಾಳರ ಓಣಿ, ಅಗಸಿ, ಬಸವೇಶ್ವರ ವೃತ್ತ, ಸತ್ಯನಾರಾಯಣ ದೇವಸ್ಥಾನ, ವಿವೇಕಾನಂದ ಗಲ್ಲಿ, ದ್ಯಾಮವ್ವದೇವಿ ದೇವಸ್ಥಾನ, ಮಹಾರಾಜರಮಠ ಮುಂಭಾಗದಲ್ಲಿ ಹಾಯ್ದು ವಿರಕ್ತಮಠದಲ್ಲಿ ಶೋಭಾಯಾತ್ರೆ ಸಂಪನ್ನಗೊಂಡಿತು.

    ಎಸ್.ವಿ.ಪಟ್ಟಣಶೆಟ್ಟಿ, ಸಂಗನಗೌಡ ಚಿಕ್ಕೊಂಡ, ಪಂಚಾಕ್ಷರಿ ಕಾಳಹಸ್ತೇಶ್ವರಮಠ, ವಿಎಚ್‌ಪಿ ಪ್ರಧಾನ ಕಾರ್ಯದರ್ಶಿ ಆಶ್ವಿನ್‌ಕುಮಾರ ಪಟ್ಟಣಶೆಟ್ಟಿ, ಜಿಲ್ಲಾ ಸೇವಾ ಪ್ರಮುಖ ಡಾ.ಬಸವರಾಜ ಚವ್ಹಾಣ, ಎ.ಬಿ.ವಿ.ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಚೀನ ಕುಳಗೇರಿ, ಎಚ್.ಎಸ್.ಗುರಡ್ಡಿ, ರಾಚಯ್ಯ ಗಣಕುಮಾರ, ಮನೋಜ ಕದಂ, ದಯಾನಂದ ಆದಿಗೊಂಡ, ಈಶ್ವರ ಪರಮಗೊಂಡ, ವಿನೂತ ಕಲ್ಲೂರ, ಮಹೇಶ ಸಾಲವಾಡಗಿ, ಬಸವರಾಜ ಗೊಳಸಂಗಿ, ಬಸವರಾಜ ಮುಕಾರ್ತಿಹಾಳ, ಕಲ್ಲು ಸೊನ್ನದ, ಎಸ್.ಎ.ದೇಗಿನಾಳ, ಅಶೋಕ ಹಾರಿವಾಳ, ವಿವೇಕಾನಂದ ಕಲ್ಯಾಣಶೆಟ್ಟಿ, ರಾಜಶೇಖರ ಪಾಟೀಲ, ಬಾಬು ದುಂಬಾಳಿ, ಸಂಗಮೇಶ ನಾಯ್ಕೋಡಿ, ಅಮೃತ ಯಾದವ, ಮಣಿಕಂಠ ಕಲ್ಲೂರ, ಸಾವಿತ್ರಿ ಕಲ್ಯಾಣಶೆಟ್ಟಿ, ಸ್ವರೂಪರಾಣಿ ಬಿಂಜಲಬಾವಿ, ಹನಮೇಶ ಕಲಾಲ, ಮುತ್ತು ಹಾಲಿಹಾಳ, ಅಮರೇಶಗೌಡ ಪಾಟೀಲ, ಡಾ.ವೀಣಾ ಗುಳೇದಗುಡ್ಡ, ಮಹಾದೇವಿ ಬಿರಾದಾರ, ನಾಗಮ್ಮ ಗುಂಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts