More

    ಬಸವಕಲ್ಯಾಣ ಪರುಷಕಟ್ಟೆ ಜೀರ್ಣೋದ್ಧಾರಕ್ಕೆ ಚಾಲನೆ

    ಬಸವಕಲ್ಯಾಣ: ಬಸವಕಲ್ಯಾಣ ಅಭಿವೃದ್ಧಿ ಮಂಡಳಿ(ಬಿಕೆಡಿಬಿ) ವತಿಯಿಂದ 1.18 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಇಲ್ಲಿನ ಐತಿಹಾಸಿಕ ಪರುಷ ಕಟ್ಟೆ ಜೀರ್ಣೋದ್ಧಾರ ಕಾಮಗಾರಿಗೆ ಬುಧವಾರ ಚಾಲನೆ ನೀಡಲಾಯಿತು. ಬಸವ ಜೈಕಾರಗಳ ಮಧ್ಯೆ ಶಾಸಕ ಶರಣು ಸಲಗರ ಭೂಮಿ ಪೂಜೆ ನೆರವೇರಿಸಿದರು.

    12ನೇ ಶತಮಾನದಲ್ಲಿ ಗುರು ಬಸವಣ್ಣನವರು ನಾಡಿನ ಜನರ ಸಮಸ್ಯೆ, ಕಷ್ಟ, ಕಾರ್ಪಣ್ಯಗಳನ್ನು ಆಲಿಸಿ ಪರಿಹಾರ ಕಲ್ಪಿಸುತ್ತಿದ್ದ ಪವಿತ್ರ ಸ್ಥಳ ಇದಾಗಿದೆ. ಇದನ್ನು ಜೀರ್ಣೋದ್ಧಾರಗೊಳಿಸಬೇಕು ಎನ್ನುವುದು ಬಸವ ಭಕ್ತರ ಬಹು ವರ್ಷಗಳ ಬೇಡಿಕೆಯಿತ್ತು. ಈಗ ಕಾಮಗಾರಿಗೆ ಚಾಲನೆ ನೀಡಿರುವುದು ಜನರಲ್ಲಿ ಸಂತಸ ತರುವ ಜತೆಗೆ ಕಲ್ಯಾಣದ ಅಭಿವೃದ್ಧಿ ಸಂಬಂಧ ಸಾಕಷ್ಟು ಭರವಸೆ ಮೂಡಿಸಿದೆ.

    ಭೂಮಿಪೂಜೆ ನೆರವೇರಿಸಿ ಶಾಸಕ ಶರಣು ಸಲಗರ ಮಾತನಾಡಿ, ಜಗತ್ತಿನ ಪಾವನ ಭೂಮಿ ಬಸವಕಲ್ಯಾಣ. ಪರುಷ ಕಟ್ಟೆಯು ಇಡೀ ಜಗತ್ತಿಗೆ, ಮಾನವ ಕುಲಕ್ಕೆ ಉತ್ತಮ ಸಂದೇಶ ಸಾರಿದ ಪವಿತ್ರ ಸ್ಥಳ. ಇದರ ಜೀಣರ್ೋದ್ಧಾರ ಮೂಲಕ ಮತ್ತೆ 12ನೇ ಶತಮಾನದ ಪರುಷ ಕಟ್ಟೆಯ ಮೆಲುಕು ಹಾಕುವ ದಿನಗಳು ಪ್ರಾರಂಭವಾಗಲಿರುವುದು ಸಂತೋಷದ ಸಂಗತಿಯಾಗಿದೆ ಎಂದರು.

    ವಿಶ್ವಗುರು ಬಸವಣ್ಣನವರು ತಮ್ಮ ನಿತ್ಯದ ಕೆಲಸ ಕಾರ್ಯ ಮುಗಿಸಿದ ನಂತರ ಪರುಷ ಕಟ್ಟೆಗೆ ಆಗಮಿಸಿ ಕಲ್ಯಾಣ ನಾಡಿನ ಜನತೆಯ, ಶೋಷಿತರ, ದಮನಿತರ ಸಮಸ್ಯೆಗಳು ಆಲಿಸಿ, ಸ್ಥಳದಲ್ಲೆ ಪರಿಹಾರ ಕಲ್ಪಿಸುತ್ತಿದ್ದರು. ನಾನು ಶಾಸಕನಾಗಿ ಆಯ್ಕೆಯಾದ ದಿನ ಬೀದರ್ನಿಂದ ನೇರವಾಗಿ ಪರುಷ ಕಟ್ಟೆಗೆ ಬಂದು ದರ್ಶನ ಪಡೆದಿರುವೆ. ಅನುಭವ ಮಂಟಪ ಕಾಮಗಾರಿ ಆರಂಭವಾಗಲು ಕೆಲ ದಿನ ತಡವಾದರೂ ಪರವಾಗಿಲ್ಲ, ಪರುಷ ಕಟ್ಟೆ ಕೆಲಸ ಮೊದಲು ಆರಂಭವಾಗಲಿ ಎನ್ನುವುದು ಬಸವ ಭಕ್ತರ ಬೇಡಿಕೆಯಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾಳಜಿ, ಡಾ.ಬಸವರಾಜ ಪಾಟೀಲ್ ಸೇಡಂ ಅವರ ಪ್ರಯತ್ನದ ಫಲವಾಗಿ ನಿಮ್ಮೆಲ್ಲರ ಆಶಯದಂತೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು.

    ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ (ಬಿಡಿಪಿಸಿ) ಅಧ್ಯಕ್ಷ ಅನೀಲಕುಮಾರ ರಗಟೆ, ಉಪಾಧ್ಯಕ್ಷ ಅಶೋಕ ನಾಗರಾಳೆ, ಕಾರ್ಯದರ್ಶಿ ರೇವಣಪ್ಪ ರಾಯವಾಡೆ, ಸಹ ಕಾರ್ಯದರ್ಶಿ ಬಸವರಾಜ ಬಾಲಿಕಿಲೆ, ಕೋಶಾಧ್ಯಕ್ಷ ಸುಭಾಷ ಹೊಳಕುಂದೆ, ವಿಶ್ವಸ್ಥ ಸಮಿತಿ ಅಧ್ಯಕ್ಷ ಮಲ್ಲಯ್ಯ ಸ್ವಾಮಿ, ತಹಸೀಲ್ದಾರ್ ಸಾವಿತ್ರಿ ಸಲಗರ, ಬಿಕೆಡಿಬಿ ತಾಂತ್ರಿಕ ಸಲಹೆಗಾರ ಬಸವರಾಜ ಗದ್ವಾಲ, ಪೌರಾಯುಕ್ತ ಶಿವಕುಮಾರ, ನಗರಸಭೆ ಸದಸ್ಯ ದೀಪಕ ಗಾಯಕವಾಡ, ಪ್ರಮುಖರಾದ ಸುರೇಶ ಸ್ವಾಮಿ, ಮಲ್ಲಿಕಾರ್ಜುನ ಕುರಕೋಟೆ, ಬಸವರಾಜ ಕೊರಕೆ, ಜಗನ್ನಾಥ ಖೂಬಾ, ಕಾಶಪ್ಪ ಸಕ್ಕರಬಾವಿ, ಭದ್ರನಾಥ ಪಾಟೀಲ್, ಅನೀಲಕುಮಾರ ಮೆಟಗೆ, ಸೋಮಶೇಖರ ವಸ್ತ್ರದ, ಸಂಜುಕುಮಾರ ಸುಗರೆ, ರಾಜಕುಮಾರ ಸಿರಗಾಪುರ, ಸುನೀಲ ರಾಯವಾಡೆ, ಬಸವರಾಜ ಚಿರಡೆ ಇತರರಿದ್ದರು. ನಗರಸಭೆ ಸದಸ್ಯ ಸಿದ್ದು ಬಿರಾದಾರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಬಿಡಿಪಿಸಿ ನಿದರ್ೇಶಕಿ ವಿಜಯಲಕ್ಷ್ಮೀ ಗಡ್ಡೆ ನಿರೂಪಣೆ ಮಾಡಿದರು.

    ಕಲ್ಯಾಣದ ಕನಸು ಸಾಕಾರವಾಗುವತ್ತ…
    ಐತಿಹಾಸಿಕ ಪರುಷ ಕಟ್ಟೆ ಜೀರ್ಣೋದ್ಧಾರ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿರುವುದು ಇತಿಹಾಸದಲ್ಲಿ ಬರೆದಿಡುವಂಥ ದಿನ. 1.18 ಕೋಟಿ ರೂ. ವೆಚ್ಚದಲ್ಲಿ ಈ ಕೆಲಸ ನಡೆಯಲಿದೆ. ಪೂರ್ಣವಾಗುವವರೆಗೆ ಎಲ್ಲ ಸಮಾಜದ ಜನರು ಸಹಕಾರ ನೀಡಬೇಕು ಎಂದು ಶಾಸಕ ಶರಣು ಸಲಗರ ಮನವಿ ಮಾಡಿದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕಾಳಜಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಸಕ್ತಿಯಿಂದಾಗಿ 650 ಕೋಟಿ ರೂ. ವೆಚ್ಚದಲ್ಲಿ ನೂತನ ಅನುಭವ ಮಂಟಪ ಕಾಮಗಾರಿ ಆರಂಭವಾಗಲಿದೆ. 10 ಎಕರೆ ಪ್ರದೇಶದಲ್ಲಿ ಛತ್ರಪತಿ ಶಿವಾಜಿ ಪಾರ್ಕ್​ ನಿರ್ಮಾಣಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಸ್ಥಳ ಗುರುತಿಸಿದ ನಂತರ ಆದೇಶ ಬರಲಿದೆ. ತ್ರಿಪುರಾಂತ ಕೆರೆ ಆಧುನೀಕರಣ, ಸುಂದರೀಕರಣ ಕಾಮಗಾರಿ ನಡೆಯಲಿದೆ. ಕಲ್ಯಾಣ ಹೇಗಿರಬೇಕು? ಎನ್ನುವ ಕಲ್ಪನೆಯ ಕನಸು ಸಾಕಾರವಾಗುವ ದಿನ ಬರುತ್ತಿವೆ ಎಂದು ಸಂತಸ ವ್ಯಕ್ತಪಡಿಸಿದರು. ಬಸವಕಲ್ಯಾಣ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿಗಳು ನಿರಂತರ ಅಧಿಕಾರಿಗಳೊಂದಿಗೆ ಮಾತನಾಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದರು.

    ವಾರದರನ್ನು ಸ್ಮರಿಸಿದ ಶಾಸಕರು: ಪರುಷ ಕಟ್ಟೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಸಂದರ್ಭದಲ್ಲಿ ದಿ. ಬಾಬಾಸಾಹೇಬ ವಾರದ ಅವರನ್ನು ಶಾಸಕ ಸಲಗರ ನೆನಪಿಸಿಕೊಂಡರು. ಇಂದು ಅವರನ್ನು ನೆನಪಿಸಿಕೊಳ್ಳಲೇಬೇಕು. ಅವರ ಆತ್ಮಕ್ಕೆ ಇಂದು ಬಹಳ ಖುಷಿಯಾಗುವ ದಿನ. 70-80 ವರ್ಷ ಹಿಂದೆಯೇ ಅವರು ಕಲ್ಯಾಣದಲ್ಲಿ ಪರುಷ ಕಟ್ಟೆ ಹೆಸರಿನಲ್ಲಿ ಪ್ರಾಥಮಿಕ ಶಾಲೆ ಆರಂಭಿಸಿದ್ದರು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts