More

    ಬಸವಕಲ್ಯಾಣದಲ್ಲಿ ಛತ್ರಪತಿ ಶಿವಾಜಿ ಪಾರ್ಕ್​ಗೆ 8 ಎಕರೆ ಜಾಗ ಮಂಜೂರು

    ಬಸವಕಲ್ಯಾಣ: ಛತ್ರಪತಿ ಶಿವಾಜಿ ಮಹಾರಾಜ ಪಾರ್ಕ್​ ನಿರ್ಮಾಣಕ್ಕಾಗಿ ಸರ್ಕಾರದಿಂದ 8 ಎಕರೆ ಜಮೀನು ಒದಗಿಸುವ ಮೂಲಕ ಶಿವಾಜಿ ಜಯಂತಿ ಮುನ್ನಾ ದಿನ ಕಲ್ಯಾಣಕ್ಕೆ ಕೊಡುಗೆ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಯರಂಡಗಿ ಗ್ರಾಮದ ಎಆರ್ಟಿಒ ಕಚೇರಿ ಬಳಿಯ ಜಮೀನು ಒದಗಿಸಿದ್ದರಿಂದ ಸರ್ಕಾರದ ಈ ನಡೆ ಜನರಲ್ಲಿ ಭರವಸೆ ಮೂಡಿಸಿದೆ.

    ತಾಲೂಕಿನ ರಾಜೇಶ್ವರ ಹೋಬಳಿ ಯರಂಡಿಗಿ ಗ್ರಾಮದ ವ್ಯಾಪ್ತಿಯ ಸರ್ವೆ ನಂ. 36//ರಲ್ಲಿ 38 ಎಕರೆ ಜಮೀನಿನ ಪೈಕಿ 8 ಎಕರೆ ಜಮೀನು ನಗರಸಭೆ ಉದ್ಯಾನ ನಿರ್ಮಿಸಲು ಷರತ್ತುಗಳೊಂದಿಗೆ ಕಾಯ್ದಿರಿಸಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.

    ಛತ್ರಪತಿ ಶಿವಾಜಿ ಮಹಾರಾಜ ಪಾರ್ಕ್​ ನಿರ್ಮಾಣ ಮತ್ತು ಪುತ್ಥಳಿ ಸ್ಥಾಪನೆಗಾಗಿ ಕಾಯ್ದಿರಿಸಲು ತಹಸೀಲ್ದಾರ್ ಸಹಾಯಕ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಕುರಿತು ಎಸಿ ಅವರು ಸಲ್ಲಿಸಿದ ಪ್ರಸ್ತಾವನೆ ಪರಿಶೀಲಿಸಿ ಉದ್ಯಾನ ನಿರ್ಮಿಸಲು ಕಾಯ್ದಿರಿಸಲು ಪರಿಗಣಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

    ಕ್ಷೇತ್ರದಲ್ಲಿ ನಡೆದ ಉಪಚುನಾವಣೆಗೂ ಮುನ್ನ 10 ಎಕರೆ ಪ್ರದೇಶದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಶಿವಾಜಿ ಪಾರ್ಕ್​ ನಿರ್ಮಾಣ ಮಾಡುವುದಾಗಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವ ವಿ.ಸೋಮಣ್ಣ ಭರವಸೆ ನೀಡಿದ್ದರು. ಈ ಕುರಿತು ಶಾಸಕರಾಗಿ ಆಯ್ಕೆಯಾದ ಶರಣು ಸಲಗರ ಅವರು ಜಮೀನು ಮಂಜೂರಿಗಾಗಿ ಪ್ರಯತ್ನಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts