More

    ಬಳ್ಳಾರಿ ಮಹಾನಗರ ಪಾಲಿಕೆಯಿಂದ ಫಂಕ್ಷನ್‌ಹಾಲ್ ಕಟ್ಟಡ ತೆರವು

    ಬಳ್ಳಾರಿ: ಎಂಟು ವರ್ಷಗಳ ಹಿಂದೆ ರಸ್ತೆ ಅತಿಕ್ರಮಣ ಮಾಡಿ ಕಟ್ಟಲಾಗಿದ್ದ ನಗರದ ಬಂಡಿಹಟ್ಟಿ ರಸ್ತೆಯ 3 ಕೋಟಿ ರೂ.ಬೆಲೆ ಬಾಳುವ ಸಪ್ತಗಿರಿ ಫಂಕ್ಷನ್ ಹಾಲ್‌ಅನ್ನು ಗುರುವಾರ ಬೆಳಗ್ಗೆ ಮಹಾನಗರ ಪಾಲಿಕೆ ಸಿಬ್ಬಂದಿ ಪೊಲೀಸ್ ಬಿಗಿ ಭದ್ರತೆಯಲ್ಲಿ ತೆರವುಗೊಳಿಸಿದರು.

    ಈ ಫಂಕ್ಷನ್ ಹಾಲ್ಅನ್ನು 150*150 ಅಡಿ ಜಾಗದಲ್ಲಿ 2015ರಲ್ಲಿ ಕಟ್ಟಲಾಗಿತ್ತು. ಆ ಸಮಯದಲ್ಲಿ ಎರಡೂ ಬದಿಯ ರಸ್ತೆಯನ್ನು ಅತಿಕ್ರಮಿಸಲಾಗಿತ್ತು. ಈ ಬಗ್ಗೆ ಸಾರ್ವಜನಿಕರು ಪಾಲಿಕೆಗೆ ದೂರು ನೀಡಿದ್ದರು.

    ಜನರು ನೀಡಿದ ದೂರು ಆಧರಿಸಿ ಪಾಲಿಕೆ ಅಧಿಕಾರಿಗಳು ಕಟ್ಟಡದ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿದ್ದರು. ಪಾಲಿಕೆ ಕ್ರಮ ಪ್ರಶ್ನಿಸಿ ಕಟ್ಟಡ ಮಾಲೀಕರು ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಕಟ್ಟಡ ತೆರವು ಮಾಡಲು ಮೂರು ತಿಂಗಳು ಗಡುವು ನೀಡಿತ್ತು. ಗಡುವು ಮುಗಿದ ಕಾರಣ ಕಟ್ಟಡ ನೆಲಸಮ ಮಾಡಲಾಗಿದೆ ಎಂದು ಪಾಲಿಕೆ ಆಯುಕ್ತ ಎಸ್.ಎನ್.ರುದ್ರೇಶ್ ತಿಳಿಸಿದರು.

    ಇದರ ನಿವೇಶನ ಮೂಲತಃ ಏಕತಾ ಎಚ್.ಡಿ. ಅವರ ಕುಟುಂಬಕ್ಕೆ ಸೇರಿದ್ದು. ಫಂಕ್ಷನ್ ಹಾಲ್ ಕಟ್ಟಲು ಬೇರೆಯವರಿಗೆ ಗುತ್ತಿಗೆ ನೀಡಲಾಗಿತ್ತು. ಕಟ್ಟಡ ತೆರವಿಗೆ ಪಾಲಿಕೆ ಜತೆ ತಾವು ಸಹಕರಿಸುತ್ತಿರುವುದಾಗಿ ಏಕತಾ ಎಚ್.ಡಿ. ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts