More

    ಬರಡು ಭೂಮಿಯಲ್ಲಿ ಚಿನ್ನದ ಬೆಳೆ, ನೀಲಗಿರಿ ಜಮೀನಿನಲ್ಲಿ ರಾಗಿ, 6 ಸಾವಿರ ಹೆಕ್ಟೇರ್‌ನಲ್ಲಿ ಹೆಚ್ಚುವರಿ ಬೆಳೆ

    ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
    ಜಿಲ್ಲಾದ್ಯಂತ ಅಭಿಯಾನದ ಮಾದರಿಯಲ್ಲಿ ಜಾರಿಯಾದ ನೀಲಗಿರಿ ತೆರವು ಕಾರ್ಯಾಚರಣೆ ಲ ನೀಡಿದೆ. ಬರಡು ಭೂಮಿಯೆಂಬ ಉದಾಸೀನದಿಂದಲೇ ನೀಲಗಿರಿ ಕಟಾವು ಮಾಡಿದ್ದ ಜಮೀನುಗಳಲ್ಲಿ ರಾಗಿ ಬಿತ್ತನೆಯಾಗಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ 6 ಸಾವಿರ ಹೆಕ್ಟೇರ್ ಹೆಚ್ಚುವರಿ ಪ್ರದೇಶದಲ್ಲಿ ರಾಗಿ ಬಿತ್ತನೆ ಕಂಡುಬರುತ್ತಿದೆ.

    ಬರಪೀಡಿತ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಜಿಲ್ಲೆಗೆ ನೀಲಗಿರಿ ಮರಗಳೇ ಕಂಟಕವಾಗಿವೆ. ಅಂತರ್ಜಲ ಬತ್ತಿಸಿ ಬರಡು ಭೂಮಿಯನ್ನಾಗಿಸುತ್ತಿದ್ದ ನೀಲಗಿರಿ ತೆರವಿಗೆ ಜಿಲ್ಲಾಡಳಿತ ನಡೆಸಿದ ಅವಿರತ ಶ್ರಮಕ್ಕೆ ಸ್ವಲ್ಪಮಟ್ಟಿಗಿನ ಯಶಸ್ಸು ಸಿಕ್ಕಿದೆ. ಕಳೆದೊಂದು ವರ್ಷದಲ್ಲಿ ಸುಮಾರು 12 ಸಾವಿರ ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ನೀಲಗಿರಿ ತೆರವುಗೊಂಡಿದ್ದು, ಇದೇ ಭೂಮಿಯಲ್ಲಿ ರಾಗಿ ಬೆಳೆಯಲು ರೈತರು ಉತ್ಸುಕರಾಗಿದ್ದಾರೆ.

    52,920 ಹೆಕ್ಟರ್‌ನಲ್ಲಿ ಬಿತ್ತನೆ ಪೂರ್ಣ: ಕಳೆದ ಸಾಲಿನಲ್ಲಿ 44 ಸಾವಿರ ಹೆಕ್ಟೇರ್‌ನಲ್ಲಿ ರಾಗಿ ಬೆಳೆದಿದ್ದ ರೈತರು ಉತ್ತಮ ಸಲಿನಿಂದ ಸಂತಸಗೊಂಡಿದ್ದರು. ಈ ಬಾರಿ ನಿರೀಕ್ಷೆಯಷ್ಟು ಮಳೆ ಇಲ್ಲದಿದ್ದರೂ 51,849 ಹೆಕ್ಟೇರ್‌ನಲ್ಲಿ ಬಿತ್ತನೆ ಪೂರ್ಣಗೊಳಿಸಿದ್ದಾರೆ. ದೇವನಹಳ್ಳಿ 10,842, ದೊಡ್ಡಬಳ್ಳಾಪುರ 16280, ಹೊಸಕೋಟೆ 9,712 ಹಾಗೂ ನೆಲಮಂಗಲ ತಾಲೂಕಿನಲ್ಲಿ 16,086 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆಯಾಗಿದೆ.

    ಬೆಂಬಲ ಬೆಲೆಯೂ ಕಾರಣ: ಜಿಲ್ಲೆಯ ರೈತರು ರಾಗಿಯಷ್ಟೇ ಮುಸುಕಿನ ಜೋಳವನ್ನೂ ಬೆಳೆಯುತ್ತಿದ್ದರು. ಆದರೆ ಕಳೆದ ಸಾಲಿನಲ್ಲಿ ಜೋಳದ ಬೆಳೆಗೆ ಲದ್ದಿ ಹುಳು ಕಾಟದಿಂದ ನಿರೀಕ್ಷೆಯಷ್ಟು ಸಲು ಕೈಸೇರಲಿಲ್ಲ. ಜತೆಗೆ ಸರ್ಕಾರದಿಂದ ಬೆಂಬಲ ಬೆಲೆ ದೊರಕದ ಕಾರಣ ಮುಸುಕಿನ ಜೋಳ ಬೆಳೆದ ರೈತರು ಕೈಸುಟ್ಟುಕೊಂಡಿದ್ದರು. ಆದರೆ ಕಳೆದ ಸಾಲಿನಲ್ಲಿ ಸರ್ಕಾರ ರಾಗಿ ಬೆಳೆಗೆ ೋಷಿಸಿದ್ದ 3,295 ರೂ. ಬೆಂಬಲ ಬೆಲೆ ರಾಗಿ ಬೆಳೆದ ರೈತರಿಗೆ ವರದಾನವಾಗಿತ್ತು. ಪ್ರಸಕ್ತ ಸಾಲಿನಲ್ಲಿ ಕ್ವಿಂಟಾಲ್ ರಾಗಿಗೆ 3,377 ರೂ. ಬೆಂಬಲ ಬೆಲೆ ಹೆಚ್ಚಿಸಿರುವುದರಿಂದ ರೈತರು ರಾಗಿ ಬೆಳೆಯಲು ಉತ್ಸುಕರಾಗಿದ್ದಾರೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.

    ನೀಲಗಿರಿ ತೆರವಾದ ಭೂಮಿಯಲ್ಲಿ ರಾಗಿ ಬೆಳೆದಿರುವುದು, ಸರ್ಕಾರದ ಬೆಂಬಲ ಬೆಲೆ ಮತ್ತಿತರ ಕಾರಣಗಳಿಂದ ಈ ಬಾರಿ ಜಿಲ್ಲೆಯಲ್ಲಿ ರಾಗಿ ಉತ್ತಮವಾಗಿ ಬಂದಿದೆ. ಕೆಲವೊಂದು ಭಾಗದಲ್ಲಿ ರಾಗಿಗೆ ಬೆಂಕಿ ರೋಗ ಕಾಣಿಸಿಕೊಂಡಿರುವುದು ಗಮನಕ್ಕೆ ಬಂದಿದೆ. ತಕ್ಷಣ ರೈತರು ರೈತ ಸಂಪರ್ಕ ಕೇಂದ್ರಕ್ಕೆ ಧಾವಿಸಿ ಬೆಳೆ ಸಂರಕ್ಷಕ ಔಷಧ ಪಡೆದು ಬೆಳೆ ರಕ್ಷಿಸಿಕೊಳ್ಳಬೇಕು.
    ಜಯಸ್ವಾಮಿ, ಜಂಟಿ ನಿರ್ದೇಶಕ, ಕೃಷಿ ಇಲಾಖೆ ಬೆಂ.ಗ್ರಾಮಾಂತರ

    ಬೆಳೆ ಸರ್ವೇ ಮರೆಯಬೇಡಿ: ಕಳೆದ ಸಾಲಿನಲ್ಲಿ ಬೆಳೆ ಸರ್ವೆ ಆ್ಯಪ್‌ನಲ್ಲಿ ರೈತರು ಸಮರ್ಪಕವಾಗಿ ದಾಖಲಿಸದೆ ಸಾಕಷ್ಟು ಗೊಂದಲಕ್ಕೆ ಕಾರಣವಾಗಿತ್ತು, ಇದರಿಂದ ಬೆಳೆನಷ್ಟ ಪರಿಹಾರ, ಬೆಂಬಲ ಬೆಲೆ ನೀಡಲು ಸಾಕಷ್ಟು ಸಮಸ್ಯೆ ಎದುರಾಗಿತ್ತು. ಆದ್ದರಿಂದ ರೈತರು ಮೊಬೈಲ್‌ಗಳ ಮೂಲಕ ಬೆಳೆ ಸರ್ವೇ ಮಾಡಬೇಕು, ತಿಳಿಯದಿದ್ದರೆ ಸ್ಥಳೀಯರ ಸಹಾಯ ಪಡೆಯಬಹುದು. ಅಥವಾ ಅಧಿಕಾರಿಗಳ ನೆರವು ಪಡೆಯಬಹುದು. ಬೆಳೆ ಸರ್ವೇ ಮೂಲಕ ಸರ್ಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಯಸ್ವಾಮಿ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts