More

    ‘ಅರಮನೆ’ ಸ್ವೀಟ್ಸ್ ಆಫ್ ಪ್ಯಾಲೇಸ್

    ಚಿತ್ರದುರ್ಗ: ದಾವಣಗೆರೆ ಹಾಗೂ ಚಿತ್ರದುರ್ಗದಲ್ಲಿ ಆರಂಭವಾದ ಕೆಲವೇ ದಿನಗಳಲ್ಲಿ ತಿನಿಸುಪ್ರಿಯರ ನೆಚ್ಚಿನ ತಾಣವಾಗಿ ಗುರುತಿಸಿಕೊಂಡಿದೆ.
    ‘ಅರಮನೆ’ ಭಂಡಾರದಲ್ಲಿರುವ ಸಿಹಿ, ಖಾರ, ಬೇಕರಿ ಉತ್ಪನ್ನ, ಐಸ್‌ಕ್ರೀಂಗಳು ಗ್ರಾಹಕರನ್ನು ಮಂತ್ರ ಮುಗ್ಧರಾಗಿಸಿವೆ. ಶುದ್ಧತೆ ಮತ್ತು ಗುಣಮಟ್ಟ, ಅರಮನೆಯ ಐಕಾನ್ ಎನಿಸುವಂಥ ವಿಶೇಷ ತಿನಿಸುಗಳ ಭರ್ಜರಿ ಮಾರಾಟ ಈ ಮಾತಿಗೆ ಇಂಬು ಕೊಡುತ್ತಿವೆ.

    ದಾವಣಗೆರೆ ರಾಮ್ ಆ್ಯಂಡ್ ಕೋ ಸರ್ಕಲ್ ಹಾಗೂ ಚಿತ್ರದುರ್ಗ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಇರುವ ಮಳಿಗೆಗಳಲ್ಲಿ ತಿನಿಸುಪ್ರಿಯರ ಜಾತ್ರೆ ನೆರೆದಿರುತ್ತದೆ. ತಾಜಾ ತಿನಿಸುಗಳ ಮಾರಾಟ ಅರಮನೆ ಹೆಗ್ಗಳಿಕೆ. ವಾರದ ಎಲ್ಲ ದಿನ ಮುಂಜಾನೆ 8.30 ರಿಂದ ರಾತ್ರಿ 10 ರವರೆಗೂ ವಹಿವಾಟು ನಡೆಯುತ್ತದೆ.

    ಈ ರುಚಿಯನ್ನು ಶಿವಮೊಗ್ಗ, ಚಿಕ್ಕಮಗಳೂರು, ಹೊಸಪೇಟೆ, ಹಾಸನ, ತುಮಕೂರು, ಬಳ್ಳಾರಿ, ಹಾವೇರಿ, ಹುಬ್ಬಳ್ಳಿ-ಧಾರವಾಡ ಮೊದಲಾದ ಜಿಲ್ಲಾ ಕೇಂದ್ರಗಳಿಗೆ ಕೊಂಡೊಯ್ಯಲು ಮಾಲೀಕರು ಅತ್ಯಾಸಕ್ತರಾಗಿದ್ದಾರೆ. ಹಿರಿಯೂರು ತಾಲೂಕು ಐಮಂಗಲ ಉಪಾಧ್ಯ ರುಚಿ ಹೋಟೆಲ್ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳ ಪ್ರಮುಖ ಹೋಟೆಲ್‌ಗಳಲ್ಲಿ ಅರಮನೆ ಔಟ್‌ಲೇಟ್‌ಗಳನ್ನೂ ಆರಂಭಿಸಲಾಗುತ್ತಿದೆ.

    ಪ್ರತ್ಯೇಕ ಬಾಣಸಿಗರು: ಆಂಧ್ರ ಪ್ರದೇಶ ಮತ್ತಿತರ ರಾಜ್ಯಗಳು, ಬಂಗಾಲಿ, ನಾರ್ಥ್‌ಇಂಡಿಯನ್‌ನ ಪ್ರಸಿದ್ಧ ಸಿಹಿಗಳಿವೆ. ಪ್ರತಿ ಉತ್ಪನ್ನಗಳೂ ತಯಾರಿಕೆಗೆ ನುರಿತ ಪ್ರತ್ಯೇಕ ಬಾಣಸಿಗರಿದ್ದಾರೆ.

    ಮೋತಿಚೂರು ಲಡ್ಡು, ಲೋಟಸ್ ಬಿಸ್ಕಾಪ್ ಚೀಸ್ ಕೇಕ್, ವಿಭಿನ್ನ ಬಂಗಾಲಿ ಸಿಹಿ ತಿನಿಸುಗಳಿಗಾಗಿ ಗ್ರಾಹಕರು ಹುಡುಕಿಕೊಂಡು ಬರುತ್ತಾರೆ. ಕಾಜುಕಟ್ಲಿ ದಿನವೊಂದಕ್ಕೆ 30 ಕೆಜಿಗೂ ಅಧಿಕ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. 30 ವಿವಿಧ ಡ್ರೈಪ್ರೂಟ್ಸ್ ಹಾಗೂ ತುಪ್ಪ ಬಳಸಿದ 40 ಉತ್ಪನ್ನಗಳು, ಅರಮನೆ ಸ್ಪೆಷಲ್ ಬರ್ಫಿ, ಬಿಸಿಯಾದ ಮೈಸೂರು ಪಾಕ್ ಇಲ್ಲಿ ಲಭ್ಯ. ಮಧ್ಯಾಹ್ನ 2 ರಿಂದ ರಾತ್ರಿ 10 ರವರೆಗೆ ಸ್ನಾೃಕ್ಸ್ ಮಾರಾಟ ಇರುತ್ತದೆ.

    ಇಲ್ಲಿನ ಕೇಕ್‌ಗಳಲ್ಲಿ ಮೊಟ್ಟೆ ಬಳಸುವುದಿಲ್ಲ. ಶೇ.100 ಎಗ್‌ಫ್ರೀ ಉತ್ಪನ್ನಗಳು ಲಭ್ಯ. ರಿಫೈನ್ಡ್ ಸನ್‌ಪ್ಲವರ್ ಆಯಿಲ್, ಶುದ್ಧ ಹಸು ಹಾಗೂ ಎಮ್ಮೆ ತುಪ್ಪ, ಬೆಲ್ಲ, ಸಕ್ಕರೆ, ಒರಿಜನಲ್ ಕೇಸರಿ ಬಳಸಲಾಗುತ್ತದೆ. ರುಚಿಗೆ ಧಕ್ಕೆಯಾಗದಂತೆ ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಹಾಕಿದರೆ, ಡಾಲ್ಡಾಕ್ಕೆ ಇಲ್ಲಿ ಪ್ರವೇಶವಿಲ್ಲ.

    ಆಲೂ ಸಮೋಸ, ನೂಡಲ್ ಸಮೋಸ, ಸ್ಕಾೃಂಡ್‌ವಿಚ್ ಸಮೋಸ, ದೋಕ್ಲಾ, ಗಾರ್ಲಿಕ್‌ಮಿಕ್ಸರ್, ನವರತ್ನ ಮಿಕ್ಸರ್ ಸೇರಿದಂತೆ 150 ಕ್ಕೂ ಹೆಚ್ಚು ಉತ್ಪನ್ನಗಳು ಇಲ್ಲಿವೆ. ಖಾರದ ಉತ್ಪನ್ನಗಳನ್ನು ಒಂದು ತಿಂಗಳಿಗೂ ಅಧಿಕ ಕಾಲ ಉಪಯೋಗಿಸಬಹುದು ಎನ್ನುತ್ತಾರೆ ಮಾಲೀಕರು.

    ಸ್ಪೆಷಲ್ ಆರ್ಡರ್: 5 ರಿಂದ 8 ಸಾವಿರ ಕೆಜಿ ಉತ್ಪನ್ನಗಳ ಮಾರಾಟ ಸಾಮರ್ಥ್ಯ ಹೊಂದಿದ್ದು, ಮದುವೆ, ಜನ್ಮದಿನ, ಹಬ್ಬ ಹರಿದಿನಗಳಿಗೆ ಸ್ಪೆಷಲ್ ಆರ್ಡರ್ ಮಾಡಬಹುದು. ಉಡುಗೊರೆ ಕೊಡಲು ಅತ್ಯಾಕರ್ಷಕ ಗಿಫ್ಟ್‌ಪ್ಯಾಕ್ ಮೇಲೆ, ಕೊಡುವವರ ಹೆಸರು ಮುದ್ರಿಸಿ ಕೊಡಲಾಗುತ್ತದೆ.

    ಸಹಾಯಹಸ್ತ: ಕೆಲವೊಂದು ಆಹಾರ ಪದಾರ್ಥಗಳನ್ನು ಅಗತ್ಯವಿದ್ದವರಿಗೆ ಉಚಿತವಾಗಿ ಕೊಡಲು ಸಹಾಯ ಹಸ್ತದ ವಿಭಾಗ ಪ್ರತ್ಯೇಕವಾಗಿ ಮಳಿಗೆಯಲ್ಲಿದೆ. ಇದು ಅರಮನೆ ಮಾಲೀಕರು ಮತ್ತು ಪಾಲುದಾರರ ಸಾಮಾಜಿಕ ಕಾಳಜಿಗೆ ಸಾಕ್ಷಿಯಾಗಿದೆ.

    ಸೆಲ್ಫಿ ಪಾಯಿಂಟ್: ಚಿತ್ರದುರ್ಗ ಅರಮನೆ ಮಳಿಗೆ ಗ್ರಾಹಕರ ಸೆಲ್ಫಿ ಪಾಯಿಂಟ್ ಕೂಡ ಆಗಿದೆ. ತಿನಿಸು ಖರೀದಿಸಿ, ಸವಿದ ಬಳಿಕ ಕುಟುಂಬ ವರ್ಗದವ ರೊಟ್ಟಿಗೆ ಇಲ್ಲಿ ಸೆಲ್ಫಿ ತೆಗೆದುಕೊಳ್ಳುವ ಕ್ರೇಜ್ ಇದೆ.

    ಕೋವಿಡ್ ಸಮಯದ ಸದುಪಯೋಗ: ಅರಮನೆ ಆರಂಭಕ್ಕೂ ಮುನ್ನ ಪಾಲುದಾರರಾದ ಬಿ.ಎಲ್.ಅಮೋಘ್ ಮತ್ತು ಬಾಲಕೃಷ್ಣ ಅವರು ಕೋವಿಡ್ ಅವಧಿಯಲ್ಲಿ 2 ವರ್ಷಗಳ ಕಾಲ ವಿವಿಧ ರಾಜ್ಯಗಳ ಪ್ರಸಿದ್ಧ ಉತ್ಪನ್ನಗಳ ಕುರಿತಂತೆ ಅಧ್ಯಯನ ನಡೆಸಿದ್ದಾರೆ. ಹಲವು ರಾಜ್ಯಗಳ ಪ್ರಸಿದ್ಧ ಮಳಿಗೆಗಳಿಗೂ ಭೇಟಿ ನೀಡಿದ್ದಾರೆ.

    ಖುದ್ದು ಉಸ್ತುವಾರಿ: ‘ಅರಮನೆ’ ಮಾಲೀಕರಾದ ಲಿಖಿತಾ ಅಮೋಘ್ ಹಾಗೂ ಶ್ರೇಯಾ ಬಾಲಕೃಷ್ಣ ಅವರ ಖುದ್ದು ಉಸ್ತುವಾರಿಯಲ್ಲಿ ಉತ್ಪನ್ನಗಳ ತಯಾರಿಸಲಾಗುತ್ತದೆ. ಶುದ್ಧತೆ ಮತ್ತು ಗುಣಮಟ್ಟದಲ್ಲಿ ಲೋಪವಾಗದಂತೆ ಕಟ್ಟೆಚ್ಚರ ವಹಿಸುತ್ತಿದ್ದೇವೆ ಎನ್ನುತ್ತಾರೆ ಲಿಖಿತಾ ಮತ್ತು ಅಮೋಘ್.

    ಗ್ರಾಹಕರ ಪ್ರೋತ್ಸಾಹದಿಂದಾಗಿ ಮಳಿಗೆ ಜಾಲವನ್ನು ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಿಗೆ ವಿಸ್ತರಿಸಲಾಗುತ್ತಿದೆ. ಶೀಘ್ರದಲ್ಲೇ ಹೊಸಪೇಟೆ, ತುಮಕೂರಲ್ಲಿ ಅರಮನೆ ಆರಂಭವಾಗಲಿದೆ. ಸಿಹಿ ತಿನಿಸುಗಳಿಗೆ ಶುದ್ಧ ತುಪ್ಪವನ್ನೇ ಬಳಸುತ್ತೇವೆ. ಇದು ಕೂಡ ನಮ್ಮ ಉತ್ಪನ್ನಗಳ ಬೇಡಿಕೆಗೆ ಪ್ರಮುಖ ಕಾರಣವಾಗಿದೆ.
    ಬಿ.ಎಲ್.ಅಮೋಘ್, ಪಾಲುದಾರರು.

    ಶುದ್ಧತೆ, ಕ್ವಾಲಿಟಿಯಲ್ಲಿ ರಾಜಿಗೆ ನಾವು ಸಿದ್ಧರಿಲ್ಲ. ನಮ್ಮಲ್ಲಿ ನಿಪುಣ ಬಾಣಸಿಗರಿದ್ದಾರೆ. ಹೀಗಾಗಿ ಸ್ವೀಟ್, ಖಾರ, ಬೇಕರಿ ಐಟಂಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಸಾಂಪ್ರದಾಯಿಕತೆಗೆ ಒತ್ತು ಕೊಟ್ಟು ಮಳಿಗೆಗಳಿಗೆ ಅರಮನೆ ಎಂದು ಹೆಸರಿಡಲಾಗಿದೆ.
    ಬಾಲಕೃಷ್ಣ, ಪಾಲುದಾರರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts