More

    ಬಣಗಳು ಒಗ್ಗೂಡಿದರೆ ಹೋರಾಟ ಸಫಲ

    ಎಚ್.ಡಿ. ಕೋಟೆ: ಹೋರಾಟ ಸಫಲವಾಗಬೇಕಾದರೆ ಒಡೆದು ಹೋಗಿರುವ ದಸಂಸ ಎಲ್ಲ ಬಣಗಳು ಒಂದಾಗಿ ಹೋರಾಟ ನಡೆಸಿದರೆ ಮಾತ್ರ ಸಾಧ್ಯ ಎಂದು ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಅಭಿಪ್ರಾಯಪಟ್ಟರು.


    ದಸಂಸ ಐಕ್ಯ ಹೋರಾಟ ಸಮಿತಿ ವತಿಯಿಂದ ಡಿ.6 ರಂದು ಬೆಂಗಳೂರಿನಲ್ಲಿ ನಡೆಯುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಪರಿನಿರ್ವಾಣ ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು.


    ದಸಂಸ ಎಪ್ಪತ್ತರ ದಶಕದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದವು. ಆದರೆ, ಬೇರೆ ಬೇರೆ ಕಾರಣಗಳಿಂದ ಆನೇಕ ಬಣಗಳಾಗಿ ಬೇರ್ಪಟ್ಟು ಸಮುದಾಯದ ಹಕ್ಕುಗಳನ್ನು ಪಡೆಯಲು ವಿಫಲವಾಗಿವೆ. ಪ್ರಸ್ತುತ ದಿನದಲ್ಲಿ ನಮ್ಮ ಹೋರಾಟ ಸಫಲವಾಗಬೇಕಾದರೆ ನಾವು ಒಂದಾಗುವುದು ಅನಿವಾರ್ಯವಾಗಿದೆ. ಆದ್ದರಿಂದ ಅಂಬೇಡ್ಕರ್ ಪರಿನಿರ್ವಾಣ ಕಾರ್ಯಕ್ರಮಕ್ಕೆ ನಾವೆಲ್ಲರೂ ಒಂದಾಗಿ ಹೋಗುವ ಮುಖಾಂತರ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.


    ಐಕ್ಯತಾ ಸಮಾವೇಶಕ್ಕೆ ತಾಲೂಕಿನಿಂದ 3 ಸಾವಿರ ಜನರನ್ನು ಕರೆದುಕೊಂಡು ಹೋಗಲು ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
    ಐಕ್ಯ ಸಮಿತಿ ಜಿಲ್ಲಾ ಅಧ್ಯಕ್ಷ ಶಿವಲಿಂಗಯ್ಯ ಮಾತನಾಡಿ, ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸರ್ಕಾರ ದಿಂದ ಪ್ರಜಾಪ್ರಭುತ್ವ, ಸಂವಿಧಾನ, ಮೀಸಲಾತಿ ಹಾಗೂ ದಲಿತರ ಬದುಕು ಅಪಾಯದಲ್ಲಿ ಇದ್ದು ರಕ್ಷಣೆ ಮಾಡಬೇಕಾದ ಜವಾಬ್ದಾರಿ ಸಂಘಟನೆಗಳ ಮೇಲಿದೆ. ಬಣಗಳು ಒಗ್ಗೂಡುವ ಕೆಲಸ ಮೊದಲಿನಿಂದಲೂ ನಡೆಯುತ್ತಿದೆ. ಪ್ರಸ್ತುತ ಹಿಂದಿನ ದಸಂಸ ಶಕ್ತಿಯನ್ನು ಪ್ರಸ್ತುತ ಮರುಕಳಿಸಬೇಕು. ಎಲ್ಲ ಬಣಗಳು ಒಂದಾದರೆ ಮಾತ್ರ ನಮ್ಮ ವಿರೋಧಿಗಳಿಗೆ ಸರಿಯಾದ ಉತ್ತರ ನೀಡಲು ಸಾಧ್ಯ ಎಂದು ತಿಳಿಸಿದರು.


    ಸಭೆಯಲ್ಲಿ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಸಮಿತಿ ಹೊರತಂದಿರುವ ಕರಪತ್ರ ಬಿಡುಗಡೆ ಮಾಡಲಾಯಿತು. ಮಲ್ಲೇಶ ಚುಂಚನಹಳ್ಳಿ, ಪುಟ್ಟಮಾದಯ್ಯ, ಕುಪ್ಪೆ ನಾಗರಾಜು, ವರದಯ್ಯ, ಕಾರ್ಯ ಬಸವಣ್ಣ, ಆಲಗೂಡು ಶಿವಕುಮಾರ್, ಶಂಭುಲಿಂಗಸ್ವಾಮಿ, ಮಣಿಯಯ್ಯ, ಶಿವಬುದ್ಧಿ, ಸರಗೂರು ಶಿವಣ್ಣ, ಹೆಗ್ಗನೂರು ನಿಂಗರಾಜು, ಸಣ್ಣಕುಮಾರ್, ಪುಟ್ಟಮಾದು ಕೋಟೆ, ಮುತ್ತು, ಇಟ್ನ ರಾಜಣ್ಣ, ನೂರಲಕುಪ್ಪೆ ಶಿವಣ್ಣ ಹಾಗೂ ಎಲ್ಲ ಬಣಗಳ ಸಂಚಾಲಕರು, ಕಾರ್ಯಕರ್ತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts