More

    ಬಡ ಕುಟುಂಬಗಳು ಬೀದಿ ಪಾಲು


    ವಾದಿರಾಜ ವ್ಯಾಸಮುದ್ರ ಕಲಬುರಗಿ
    ಅಳ್ಳಗಿ(ಬಿ) ಅಫಜಲಪುರ ತಾಲೂಕಿನಲ್ಲಿ 3000 ಜನಸಂಖ್ಯೆಯ ಚಿಕ್ಕ ಗ್ರಾಮ. ಭೀಮಾ ಪ್ರವಾಹದಲ್ಲಿ ಇಡೀ ಊರು ಜಲಾವೃತಗೊಂಡಿದೆ. ಬಡವರೇ ಹೆಚ್ಚಿರುವ ಊರಿನಲ್ಲಿದ್ದ ಚಿಕ್ಕ-ಪುಟ್ಟ ಆಸ್ತಿ ಎಲ್ಲ ನೀರಲ್ಲಿ ಹರಿದು ಹೋಗಿದೆ. ಕಬ್ಬು, ಹತ್ತಿ ಸೇರಿ ಪ್ರಮುಖ ಬೆಳೆಗಳು ನೀರುಪಾಲಾಗಿವೆ.
    ಊರಿನ ಪರಿಶಿಷ್ಟರ ಮತ್ತು ಅಲ್ಪಸಂಖ್ಯಾತರ ಕೇರಿಗಳ ಮನೆಗಳೆಲ್ಲ ನೀರಲ್ಲಿ ಮುಳುಗಿವೆ. 20ಕ್ಕೂ ಹೆಚ್ಚು ಮನೆಗಳು ನೆಲಸಮವಾಗಿದ್ದು, ಈ ಮನೆಯವರಿಗೆ ಕಾಳಜಿ ಕೇಂದ್ರಗಳೇ ಆಧಾರವಾಗಿವೆ. ನಮ್ಮ ಜೀವನಾನ್ ಮುಗಿತ್ರಿ ಎಂದು ದಲಿತ ಮಹಿಳೆಯೊಬ್ಬರು ಹೇಳುತ್ತಲೇ ಕಣ್ಣೀರು ಹಾಕಿದಳು. ಭೀಮಾ ಹಿನ್ನೀರಿನಿಂದ ತುಂಬಿದ ಬೋರಿ ಹಳ್ಳದ ನೀರು ಗ್ರಾಮಕ್ಕೆ ಹೊಕ್ಕಿದೆ.
    ಸದ್ಯಕ್ಕೆ ಮೇಲ್ಭಾಗದಲ್ಲಿರುವ ಅಂಗನವಾಡಿ ಕೇಂದ್ರ, ಸಕರ್ಾರಿ ಶಾಲೆಗಳು ಸೇರಿ ಹಲವೆಡೆ ಕಾಳಜಿ ಕೇಂದ್ರಗಳನ್ನು ಆರಂಭಿಸಿದ್ದು, ಇಲ್ಲಿ ನಿರಾಶ್ರಿತ ಗ್ರಾಮಸ್ಥರಿಗೆ ಊಟ ಮತ್ತಿತರ ವ್ಯವಸ್ಥೆ ಮಾಡಲಾಗಿದೆ. ಬೋರಿ ಹಳ್ಳದ ನೀರಿನ ರಭಸಕ್ಕೆ ಮನೆಗಳಲ್ಲಿದ್ದ ದವಸ-ಧಾನ್ಯ ಸೇರಿ ಎಲ್ಲವೂ ಹರಿದು ಹೋಗಿವೆ. ಬೆಳೆಗಳು ಸಂಪೂರ್ಣ ನೀರುಪಾಲಾಗಿವೆ. ಗ್ರಾಮದ ದಲಿತ ಕೇರಿ ಜನಕ್ಕೆ ನೆಲೆಸಲು ಮನೆಯಿಲ್ಲ, ಊಟಕ್ಕೆ ಆಹಾರ ಇಲ್ಲದಂತಾಗಿದೆ.
    ಮನೆಗಳನ್ನು ಕಟ್ಟಿಕೊಡುವವರೆಗೆ ಕಾಳಜಿ ಕೇಂದ್ರಗಳಿಂದ ತೆರಳುವುದಿಲ್ಲ ಎಂದು ದಲಿತ ಕೇರಿ ಜನತೆ ಪಟ್ಟು ಹಿಡಿದಿದ್ದಾರೆ. ಆದರೆ ಸದ್ಯ ಸಕರ್ಾರಕ್ಕೆ ಯಾವುದೇ ನಿಧರ್ಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಮನೆಗಳ ಜತೆ ಹಿರೇಮಠ ಸಹ ಬಿದ್ದಿದ್ದು, ದುರಸ್ತಿ ಮಾಡಬೇಕಾಗಿದೆ.

    ಸಮೀಕ್ಷೆಗೆ ಹಿನ್ನಡೆ ತಂದ
    ತಹಸೀಲ್ದಾರ್ ಬದಲಾವಣೆ
    ಅಫಜಲಪುರ ತಾಲೂಕಿನ ಬಹುತೇಕ ಕಡೆ ಪ್ರವಾಹ ಮತ್ತು ಮಳೆಯಿಂದ ಪರಿಸ್ಥಿತಿ ಬಿಗಡಾಯಿಸಿದ್ದು, ಇಂಥ ಸಮಯದಲ್ಲಿ ತಹಸೀಲ್ದಾರರನ್ನು ಬದಲಿಸಲಾಗಿದೆ. ಇದುವರೆಗೆ ಪ್ರಭಾರ ತಹಸೀಲ್ದಾರ್ ಇದ್ದರು. ಶುಕ್ರವಾರ ಹೊಸ ತಹಸೀಲ್ದಾರ್ ಅಧಿಕಾರ ವಹಿಸಿಕೊಂಡಿದ್ದಾರೆ. ಹೀಗಾಗಿ ಪ್ರವಾಹ ಸಮೀಕ್ಷೆ ಕಾರ್ಯಕ್ಕೆ ಮತ್ತೆ ಹಿನ್ನಡೆ ಉಂಟಾಗಿದೆ. ಗ್ರಾಮಕ್ಕೆ ಜಿಪಂ ಸದಸ್ಯ ಅರುಣಕುಮಾರ ಪಾಟೀಲ್, ಮಾಜಿ ಅಧ್ಯಕ್ಷ ನಿತೀನ್ ಗುತ್ತೇದಾರ್ ಅಲ್ಲದೆ ಅಧಿಕಾರಿಗಳು ತೆರಳಿ ಜನರಿಗೆ ಸಾಂತ್ವನ ಹೇಳಿದ್ದನ್ನು ಬಿಟ್ಟರೆ ಮತ್ತೇನೂ ಮಾಡಿಲ್ಲ. ಶಾಸಕ ಎಂ.ವೈ. ಪಾಟೀಲ್ ಬಂದು ಸಂತ್ರಸ್ತರ ಗೋಳು ಆಲಿಸಿಲ್ಲ. ಇದು ಬಡ ಸಂತ್ರಸ್ತರನ್ನು ಮತ್ತಷ್ಟು ಹತಾಶರಾಗುವಂತೆ ಮಾಡಿದೆ.

    ಕೋಟ್
    ಬೋರಿ ಹಳ್ಳದ ನೀರು ಗ್ರಾಮಕ್ಕೆ ನುಗ್ಗಿದ್ದರಿಂದ ಅಳ್ಳಗಿ(ಬಿ) ಸಂಪೂರ್ಣ ಜಲಾವೃತವಾಗಿದೆ. ದಲಿತ ಕೇರಿಯ ಕೆಲ ಮನೆಗಳು ಬಿದ್ದಿವೆ. ಕಬ್ಬು ಮತ್ತು ಹತ್ತಿ ಕೊಚ್ಚಿ ಹೋಗಿವೆ. ಹೊಸ ಮನೆ ಕಟ್ಟಿಸಿಕೊಡುವ ತನಕ ಹಳೇ ಮನೆಗಳಿಗೆ ತೆರಳುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಒಟ್ಟಾರೆ ಸ್ಥಿತಿ ಡೋಲಾಯಮಾನವಾಗಿದೆ. ಸಕರ್ಾರ ಕೂಡಲೇ ನೆರವಿಗೆ ಧಾವಿಸಬೇಕು.
    | ಸಂಕಷ್ಟದಲ್ಲಿರುವ ಗ್ರಾಮಸ್ಥರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts