More

    ಬಡವರಿಗೆ ವೈದ್ಯಕೀಯ ನೆರವು ನೀಡಿ

    ಹುಬ್ಬಳ್ಳಿ: ವೈದ್ಯಕೀಯ ವಿಜ್ಞಾನದಲ್ಲಿ ಸಂಶೋಧನೆ ಮತ್ತು ನವೀನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಜೀವನ ದುದ್ದಕ್ಕೂ ಕಲಿಯುತ್ತಲೇ ಬಡವರಿಗೆ ವೈದ್ಯಕೀಯ ನೆರವು ನೀಡಬೇಕು ಎಂದು ಕೊಯಮತ್ತೂರಿನ ಜಿಇಎಂ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸ್ತ್ರೀರೋಗ ತಜ್ಞ ಡಾ. ಸಿ. ಪಳನಿವೇಲು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

    ನಗರದ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್್ಸ)ಯ ಆಡಿಟೋರಿಯಂ ಹಾಲ್​ನಲ್ಲಿ ಶನಿವಾರ ಏರ್ಪಡಿಸಿದ್ದ ಎಂಬಿಬಿಎಸ್ ವಿದ್ಯಾರ್ಥಿಗಳ 57ನೇ ಘಟಿಕೋತ್ಸವ (ಉತ್ಕರ್ಷ) ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸಲು ಹಣದ ಹಿಂದೆ ಬೀಳಬಾರದು ಎಂದರು.

    ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ತಜ್ಞ ಡಾ. ಅಶೋಕ ಕುಮಾರ ಕೆ.ವಿ., ಪ್ರಭಾರ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಸಿ., ಪ್ರಭಾರ ಪ್ರಾಚಾರ್ಯ ಡಾ. ಕೆ.ಎಫ್. ಕಮ್ಮಾರ, ಡಾ. ಪುರುಷೋತ್ತಮ ರೆಡ್ಡಿ, ಡಾ. ಈಶ್ವರ ಹಸಬಿ, ಡಾ. ಸುನೀಲ ಬಿರಾದಾರ, ಡಾ. ಆಶಾ ಪಾಟೀಲ, ಡಾ.ಎಸ್.ಎಫ್. ಕಮ್ಮಾರ, ಡಾ. ರಾಮಚಂದ್ರ ಅಳ್ನಾವರ, ಡಾ. ಸೂರ್ಯಕಾಂತ ಕಲೂರಾಯ, ಡಾ. ಗುರುಶಾಂತಪ್ಪ ಯಲಗಚ್ಚಿನ, ಡಾ. ಕಸ್ತೂರಿ ಡೋಣಿಮಠ, ಡಾ. ವಿಜಯ ಕಾಮತ್, ಡಾ. ಈಶ್ವರ ಹೊಸಮನಿ ಇತರರು ಇದ್ದರು.

    ಡಾ. ಅಮಿತ್​ಗೆ ಐದು ಚಿನ್ನ: ಡಾ. ನಝಿಮಾ ಜಾವೇದ್ ಖಾನ್, ಡಾ. ನೇಹಾ ಯಲಗಚ್ಚಿನ ಅವರು ‘ಬೆಸ್ಟ್ ಔಟ್​ಗೋಯಿಂಗ್ ಸ್ಟುಡೆಂಟ್ಸ್’ ಪ್ರಶಸ್ತಿ, ಡಾ. ಅಮಿತ್ ಚವ್ಹಾಣ 5 ಚಿನ್ನ, ಡಾ. ಶಿವಾನಿಸಿಂಗ್ 4 ಚಿನ್ನ, ಡಾ. ಪವನ್ ದೇಶೆಟ್ಟಿ 3 ಚಿನ್ನ, ಡಾ. ಶುಭಾ ಮತ್ತು ಡಾ. ಅನುಶ್ರೀ ತಲಾ 2 ಚಿನ್ನ ಪಡೆದರು. ಒಟ್ಟು 149 ವಿದ್ಯಾರ್ಥಿಗಳು ಎಂಬಿಬಿಎಸ್ ಪದವೀಧರರಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts