More

    ಬಚ್ಚಾಖಾನ್ ನ್ಯಾಯಾಂಗ ಬಂಧನಕ್ಕೆ

    ಧಾರವಾಡ: ಜೈಲಿನಲ್ಲಿದ್ದುಕೊಂಡೇ ಉದ್ಯಮಿಗಳಿಗೆ ಬೆದರಿಕೆ ಹಾಕುತ್ತಿದ್ದ ಆರೋಪದಡಿ ಉಪನಗರ ಠಾಣೆ ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದ ಪಾತಕಿ ಯೂಸುಫ್ ಬಚ್ಚಾಖಾನ್​ನ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

    ಮೈಸೂರು ಜೈಲಿನಲ್ಲಿದ್ದ ಬಚ್ಚಾಖಾನ್​ನನ್ನು ಉಪನಗರ ಠಾಣೆ ಪೊಲೀಸರು ಕರೆತಂದು ಡಿ. 28ರಂದು ಪ್ರಧಾನ ದಿವಾಣಿ ಮತ್ತು ಜೆಎಂಎಫ್​ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಡಿ. 31ರವೆಗೆ ಪೊಲೀಸ್ ವಶಕ್ಕೆ ನೀಡಿ ಆದೇಶಿಸಿತ್ತು. 3 ದಿನಗಳ ಕಾಲ ವಿಚಾರಣೆ ನಡೆಸಿದ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆತನಿಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶಿಸಿತು.

    ನ್ಯಾಯಾಲಯ ಪ್ರವೇಶಿಸುವ ವೇಳೆ ಹಾಗೂ ಹೊರಬಂದ ವೇಳೆ ಬಚ್ಚಾಖಾನ್ ‘ಜೈ ಹಿಂದ್ ಜೈ ಭಾರತ್’ ಎಂದು ಘೋಷಣೆ ಕೂಗಿದ. ನಗರದ ರೌಡಿಶೀಟರ್ ಫ್ರೂಟ್ ಇರ್ಫಾನ್ ಕೊಲೆ ಪ್ರಕರಣದಲ್ಲೂ ವಿಚಾರಣೆಗೆ ಎದುರಿಸುತ್ತಿರುವ ಬಚ್ಚಾಖಾನ್, ತನ್ನ ಸಹಚರರೊಂದಿಗೆ ಕೆಲವರಿಗೆ ಬೆದರಿಕೆ ಹಾಕಿ ಹಫ್ತಾ ವಸೂಲಿ ಮಾಡುತ್ತಿದ್ದ. ಈ ಕುರಿತು ಕೆಲವರು ಉಪನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts