More

    ಬಗರ್‍ಹುಕುಂ ರೈತರ ಒಕ್ಕಲೆಬ್ಬಿಸಲು ಬಿಡಲ್ಲ

    ಸೊರಬ: ಹನ್ನೊಂದು ವರ್ಷಗಳ ಹಿಂದೆಯೂ ಅಂದಿನ ಬಿಜೆಪಿ ಶಾಸಕರು ಅಡಕೆ ಮರಗಳನ್ನು ಕಡಿದು ರೈತರನ್ನು ಬೀದಿಪಾಲು ಮಾಡಿದ್ದರು. ಅದೇ ಮನೋಭಾವ ಈಗಿನ ಬಿಜೆಪಿ ಶಾಸಕರಲ್ಲೂ ಮತ್ತೆ ಮುಂದುವರಿದಿದೆ. ಇನ್ನು ಮುಂದೆ ಬಗರ್‍ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಲು ಮುಂದಾದರೆ ಸುಮ್ಮನೆ ಕೂರುವುದಿಲ್ಲ , ತೋಟಗಳನ್ನು ನಾಶ ಮಾಡಲು ಅವಕಾಶ ನೀಡುವುದಿಲ್ಲ. ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಗುಡುಗಿದ್ದಾರೆ.
    ತಾಲೂಕಿನ ತಾಳಗುಪ್ಪದಲ್ಲಿ ಅರಣ್ಯ ಇಲಾಖೆ ಬಗರ್‍ಹುಕುಂ ಜಮೀನಿನಲ್ಲಿದ್ದ ಅಡಕೆ ತೋಟ ನಾಶಪಡಿಸಿರುವುದನ್ನು ಖಂಡಿಸಿ ಸೋಮವಾರ ಪಟ್ಟಣದಲ್ಲಿ ತಾಲೂಕು ಕಾಂಗ್ರೆಸ್ ಘಟಕ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಶಾಸಕರು ಇರುವ ಅವ„ಯಲ್ಲೇ ತಾಲೂಕಿನಲ್ಲಿ ಅಡಕೆ ತೋಟಗಳನ್ನು ಕಡಿಯಲಾಗುತ್ತಿದೆ. ರೈತ ವಿರೋ„ ಬಿಜೆಪಿ ಸರ್ಕಾರಕ್ಕೆ ಹಾಗೂ ಶಾಸಕರಿಗೆ ಮುಂದಿನ ದಿನದಲ್ಲಿ ತಕ್ಕಪಾಠ ಕಲಿಸಲಿದ್ದಾರೆ ಎಂದರು.
    ತಾಳಗುಪ್ಪದಲ್ಲಿ ಅಡಕೆ ಮರ ಕಡಿದು ಒಕ್ಕಲೆಬ್ಬಿಸಿದ ರೈತರಿಗೆ ಪರ್ಯಾಯ ವ್ಯವಸ್ಥೆ ಮಾಡಿಸಿಕೊಡಬೇಕು. ಬಗರ್‍ಹುಕುಂ ಸಾಗುವಳಿ ರೈತರ ಪರವಾಗಿ ಅರಣ್ಯ ಕಾಯ್ದೆಗೆ ಸೂಕ್ತ ತಿದ್ದುಪಡಿ ತಂದು ಅರಣ್ಯ ಜಮೀನನ್ನು ರೈತರಿಗೆ ಮಂಜೂರು ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಲಹೆ ಮತ್ತು ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
    ಬಡವರ ಮತ್ತು ರೈತರಿಗೆ ಧ್ವನಿಯಾದ ಬಂಗಾರಪ್ಪ ಇದ್ದಿದ್ದರೆ ಬಗರ್‍ಹುಕುಂ ಸಾಗುಳಿದಾರರಿಗೆ ರಕ್ಷಣೆ ನೀಡುತ್ತಿದ್ದರು ಎಂದು ರೈತರು ಕಣ್ಣೀರು ಇಡುತ್ತಿದ್ದಾರೆ. ಅಂತಹವರ ಹೊಟ್ಟೆಯಲ್ಲಿ ಹುಟ್ಟಿದ ನಾನು ಏನೂ ಮಾಡಿಲ್ಲ ಎಂದರೆ ಹೇಗೆ. ನಾನು ಅರಣ್ಯಾ„ಕಾರಗಳ ಜತೆ ಮಾತನಾಡಿದಾಗ ಅವರು ಕೇವಲ ಅಗಳು ತೋಡಿ ಗಡಿ ಗುರುತಿಸುವುದಾಗಿ ಹೇಳಿದ್ದರು. ಆದರೆ ಶಾಸಕ ಕುಮಾರ್ ಬಂಗಾರಪ್ಪ ಅ„ಕಾರಿಗಳನ್ನು ಮುಂದಿಟ್ಟುಕೊಂಡು ತೋಟ ಕಡಿಯಲು ಮುಂದಾಗುವ ಮೂಲಕ ಬಡವರ ಅನ್ನ ಕಸಿದುಕೊಂಡಿದ್ದಾರೆ. ಒಂದು ಕಡೆ ಮುಖ್ಯಮಂತ್ರಿಗಳು ಸದನದಲ್ಲಿ ಬಗರ್‍ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವುದಿಲ್ಲ. ಅವರಿಗೆ ಭದ್ರತೆ ಒದಗಿಸಲಾಗುವುದು ಎಂದು ಹೇಳುತ್ತಾರೆ. ಆದರೆ ರೈತರನ್ನು ಒಕ್ಕಲೆಬ್ಬಿಸುತ್ತಿದ್ದಾರೆ ಎಂದು ದೂರಿದರು.
    ಶ್ರೀ ರಂಗನಾಥಸ್ವಾಮಿ ದೇವಸ್ಥಾನದಿಂದ ಆರಂಭವಾದ ಬೃಹತ್ ಮೆರವಣಿಗೆ ತಹಸೀಲ್ದಾರ್ ಕಚೇರಿಯವರೆಗೂ ತೆರಳಿ ಮನವಿ ಸಲ್ಲಿಸಲಾಯಿತು. ಕಾಂಗ್ರೆಸ್ ಜಿಲ್ಲಾ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎನ್.ರಮೇಶ್, ಬ್ಲಾಕ್ ಅಧ್ಯಕ್ಷರಾದ ಅಣ್ಣಪ್ಪ ಹಾಲಘಟ್ಟ., ಸದಾನಂದ ಗೌಡ ಬಿಳಗಲಿ, ಮಹಿಳಾ ಅಧ್ಯಕ್ಷರಾದ ಸುಜಾತಾ ಜೋತಾಡಿ, ವಿಶಾಲಾಕ್ಷಿ, ಮಾಜಿ ಜಿಪಂ ಸದಸ್ಯರಾದ ತಬಲಿ ಬಂಗಾರಪ್ಪ, ಶಿವಲಿಂಗೇಗೌಡ, ವೀರೇಶ್ ಕೊಟಗಿ, ತಾರಾ ಶಿವಾನಂದ್, ರಾಜೇಶ್ವರಿ, ಸುರೇಶ್ ಹಾವಣ್ಣನವರ್, ಮುಖಂಡರಾದ ಎಚ್.ಗಣಪತಿ, ಎಂ.ಡಿ ಶೇಖರ್, ಕೆ.ವಿ.ಗೌಡ, ಆರ್.ಸಿ.ಪಾಟೀಲ್, ಕೆ.ಮಂಜಣ್ಣ, ಚಿಕ್ಕಸವಿ ನಾಗರಾಜ ಸೇರಿದಂತೆ ಸಾವಿರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
    ಸ್ಥಳದಲ್ಲೇ 2.58 ಲಕ್ಷ ರೂ. ಸಂಗ್ರಹ: ಪ್ರತಿಭಟನಾ ವೇದಿಕೆಗೆ ಸಂತ್ರಸ್ತೆ ಗಂಗಮ್ಮ ಅವರÀನ್ನು ಅಹ್ವಾನಿಸಿದಾಗ ಅವರು ತಮ್ಮ ನೋವನ್ನು ಜನರ ಮುಂದೆ ಬಿಚ್ಚಿಟ್ಟರು. ನಂತರ ಸ್ಥಳದಲ್ಲಿಯೇ ನೆರದ ಜನರಿಂದ 1 ರೂಪಾಯಿಯಿಂದ 5 ಸಾವಿರ ರೂಪಾಯಿಯವರೆಗೂ ಹಣ ಸಂಗ್ರಹಿಸಲಾಯತು. ಹೀಗೆ ಸಂಗ್ರಹವಾದ 1,58,010 ರೂ.ಗಳಿಗೆ ಮಧು ಬಂಗಾರಪ್ಪ ವೈಯಕ್ತಿಕವಾಗಿ ಒಂದು ಲಕ್ಷ ರೂ ಸೇರಿಸಿ ಸಂಕಷ್ಟದಲ್ಲಿ ಇದ್ದ ಗಂಗಮ್ಮನ ಕುಟುಂಬಕ್ಕೆ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts