More

    ಬಂಡೆ ಸಮಸ್ಯೆಯಲ್ಲಿ ಆರಗ ಜ್ಞಾನೇಂದ್ರ ಪಾತ್ರವಿಲ್ಲ; ರಾಜಕೀಯ ಕಾರಣಕ್ಕೆ ಕಿಮ್ಮನೆ ರತ್ನಾಕರ್ ಪ್ರತಿಭಟನೆ: ಕಲ್ಲು ಕುಟಿಗರ ಸಂಘದ ಕಾರ್ಯದರ್ಶಿ

    ತೀರ್ಥಹಳ್ಳಿ: ಕುರುವಳ್ಳಿ ಬಂಡೆ ವಿಚಾರದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನಡೆಸುತ್ತಿರುವ ಪ್ರತಿಭಟನೆಯ ಹಿಂದೆ ರಾಜಕೀಯ ಉದ್ದೇಶವಿದೆ. ಅವರು ವಿನಾಕಾರಣ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಮೇಲೆ ಆರೋಪ ಮಾಡುತ್ತಿದ್ದಾರೆ. ಈಗ ಉಧ್ಭವಿಸಿರುವ ಸಮಸ್ಯೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಪಾತ್ರ ಇಲ್ಲ ಎಂದು ಪೃಥ್ವಿ ಶ್ರಮ ಕಲ್ಲು ಕುಟಿಕರ ಸಂಘದ ಕಾರ್ಯದರ್ಶಿ ಎಸ್.ಮಂಜುನಾಥ್ ಹೇಳಿದರು.
    ಅನುದೀಪ್ ಎಂಬುವವರು ಗಣಿ ಇಲಾಖೆಗೆ ಬರೆದಿರುವ ಪತ್ರ ಆಧರಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಇಲಾಖೆಯ ಅಧಿಕಾರಿಗಳು ಬಂಡೆಗೆ ಹೋಗುವ ಮಾರ್ಗದಲ್ಲಿ ಟ್ರೆಂಚ್ ಹೊಡೆದಿದ್ದಾರೆ. ಕುರುವಳ್ಳಿ ಬಂಡೆಯಲ್ಲಿ ಸ್ಫೋಟಕಗಳನ್ನು ಬಳಸುತ್ತಿರುವುದಲ್ಲದೆ ಅಕ್ರಮ ಗಣಿಗಾರಿಕೆಯೂ ನಡೆಯುತ್ತಿದೆ ಎಂದು ಇಲಾಖೆಗೆ ಬಂದಿದ್ದ ಪತ್ರದಲ್ಲಿ ಮಾಹಿತಿ ಇತ್ತು ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಅನುದೀಪ್ ಬರೆದಿರುವ ಪತ್ರ ಲೋಕಾಯುಕ್ತಕ್ಕೂ ಹೋಗಿದೆ. ಹೀಗಾಗಿ ಕಾರ್ಮಿಕರ ಬಗ್ಗೆ ಕಳಕಳಿ ಹೊಂದಿದ್ದರೂ ಗಣಿ ಇಲಾಖೆಯ ಅಧಿಕಾರಿಗಳು ಅನಿವಾರ್ಯತೆಯಿಂದ ಅಂತಿಮವಾಗಿ ಕ್ರಮ ಕೈಗೊಂಡಿದ್ದಾರೆ. ಇದರಲ್ಲಿ ಗೃಹ ಸಚಿವರ ಪಾತ್ರ ಇಲ್ಲ. ದಶಕಗಳಿಂದ ನಡೆದಿರುವ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಸಲುವಾಗಿ ಅವರೇ ನಮ್ಮ ನಿಯೋಗವನ್ನು ಗಣಿ ಸಚಿವರ ಬಳಿ ಕರೆದೊಯ್ದಿದ್ದರು. ಅಂದು ನಮ್ಮ ಜತೆ ಬೆಂಗಳೂರಿಗೆ ಬಂದಿದ್ದ ವ್ಯಕ್ತಿಗಳೇ ಈಗ ತಿರುಗಿ ಬಿದ್ದಿದ್ದಾರೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ ಈ ಬೆಳವಣಿಗೆ ಗಮನಕ್ಕೆ ಬಾರದೆಯೂ ಇರಬಹುದು ಎಂದು ಹೇಳಿದರು.
    ಬಂಡೆ ಕಾರ್ಮಿಕರ ಬಗ್ಗೆ ಕಳಕಳಿ ಹೊಂದಿರುವ ಆರಗ ಜ್ಞಾನೇಂದ್ರ ಅವರ ನೆರವಿನಿಂದ ಕಲ್ಲು ಕುಟಿಕರ ಸಂಘದ ಸದಸ್ಯರ ಮಕ್ಕಳ ವಿಧ್ಯಾಭ್ಯಾಸಕ್ಕೆ ಕಾರ್ಮಿಕ ಇಲಾಖೆಯಿಂದ ಕಳೆದ ಎರಡು ವರ್ಷಗಳಲ್ಲಿ ಸುಮಾರು 40 ಲಕ್ಷ ರೂ. ಸ್ಕಾಲರ್‌ಶಿಪ್ ಬಂದಿದೆ. ಕರೊನಾ ಅವಧಿಯಲ್ಲಿ 800 ಕಿಟ್‌ಗಳನ್ನು ಕೂಡ ವಿತರಿಸಿದ್ದರು. ಇ- ಟೆಂಡರ್ ಪ್ರಕ್ರಿಯೆಯಲ್ಲಿ ಮೇಲಿನಕುರುವಳ್ಳಿಯಲ್ಲಿ ಇರುವ ಮೂರು ಕಾರ್ಮಿಕರ ಸಂಘಕ್ಕೆ ತಲಾ ಎರಡು ಎಕರೆಯನ್ನು ಗುತ್ತಿಗೆ ಕೊಡಿಸುವಂತೆಯೂ ಆಗ್ರಹಿಸಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts