More

    ಬಂಡಿಯ ಎರಡು ಗಾಲಿಗಳಂತೆ ಕಾರ್ಯನಿರ್ವಹಿಸಿ

    ಐನಾಪುರ: ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸದಸ್ಯರು ಒಂದೇ ಬಂಡಿಯ ಎರಡು ಗಾಲಿಗಳಂತೆ ಕಾರ್ಯನಿರ್ವಹಿಸಿದಾಗ ಮಾತ್ರ ಸಂಘವು ಹೆಮ್ಮರವಾಗಿ ಬೆಳೆಯಲು ಸಾಧ್ಯ ಎಂದು ಐನಾಪುರ ಪಿಕೆಪಿಎಸ್ ಅಧ್ಯಕ್ಷ ಕುಮಾರ ಅಪರಾಜ ಹೇಳಿದರು. ಸ್ಥಳೀಯ ಪಿಕೆಪಿಎಸ್ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಐನಾಪುರ ಪಿಕೆಪಿಎಸ್ ಸಂಘವು 3140 ಸದಸ್ಯರನ್ನು ಹೊಂದಿದ್ದು, 2.13 ಕೋಟಿ ರೂ. ಷೇರು ಬಂಡವಾಳ, 14.67 ಕೋಟಿ ರೂ. ಠೇವು ಹೊಂದಿದೆ. 18.45 ಕೋಟಿ ಸಾಲ ವಿತರಿಸಿದ್ದು, 36.88 ಕೋಟಿ ದುಡಿಯುವ ಬಂಡವಾಳವಿದೆ. 72.17 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಶೇ. 99.59 ಸಾಲ ವಸೂಲಾತಿ ಹಾಗೂ ಶೇ. 16 ಡಿವಿಡೆಂಡ್ ವಿತರಿಸಲಾಗುವುದು. ಸಂಸ್ಥೆಯ ವತಿಯಿಂದ ಗ್ಯಾಸ್ ಮತ್ತು ಪೆಟ್ರೋಲ್ ಪಂಪ್ ಮಾಡುವ ಗುರಿ ಹೊಂದಿದ್ದೇವೆ ಎಂಬ ಭರವಸೆ ವ್ಯಕ್ತಪಡಿಸಿದರು. ನಿವೃತ್ತಿ ಹೊಂದಿದ ವಿರೂಪಾಕ್ಷ ಡುಗನವರ ಅವರನ್ನು ಸತ್ಕರಿಸಲಾಯಿತು. ಪಿಕೆಪಿಎಸ್ ಉಪಾಧ್ಯಕ್ಷ ಸತೀಶ ಗಾಣಿಗೇರ, ನಿರ್ದೇಶಕ ಭೂಪಾಲ ಮಾನಗಾವೆ, ರಾಜೇಂದ್ರ ಪೋತದಾರ, ಆದಿನಾಥ ದಾನೋಳಿ, ಅನ್ನಸಾಬ್ ಡುಗನವರ, ಪ್ರವೀಣ ಕುಲಕರ್ಣಿ, ತಮ್ಮನ್ನ ಪಾರಶೆಟ್ಟಿ, ರಾವಸಾಬ್ ಹರಳೆ, ಮಹದೇವ ಬೇಡರ, ಲಕ್ಷ್ಮಿಬಾಯಿ ಖೋತ, ವರ್ಷಾ ಪಾಟೀಲ, ವ್ಯವಸ್ಥಾಪಕ ಅಣ್ಣಾಸಾಬ ಜಾಧವ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts