More

    ಬಂಜಾರ ವಿರೋಧಿ ಎಂದು ಬಿಂಬಿಸಲು ಯತ್ನ

    ವಾಡಿ (ಕಲಬುರಗಿ): ಕೆಲವರು ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ನನ್ನನ್ನು ಬಂಜಾರ ಸಮುದಾಯದ ವಿರೋಧಿ ಎಂದು ಬಿಂಬಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇದ್ಯಾವುದು ಸಫಲವಾಗಲ್ಲ, ಕ್ಷೇತ್ರದ ಜನರು ಬುದ್ಧಿವಂತರಿದ್ದಾರೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.

    ಬೆಂಗಳೂರಿನಲ್ಲಿ ಬಿಜೆಪಿಯ ಹಲವು ಕಾರ್ಯಕರ್ತರನ್ನು ಸೋಮವಾರ ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿ, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದೇನೆ. ಕೆಲ ನಾಯಕರು ಕೆಳಮಟ್ಟದ ಕಾರ್ಯಕರ್ತರು ತಮಗಿಷ್ಟದಂತೆ ಬಳಸಿಕೊಂಡು, ಬಳಿಕ ನಡು ನೀರಿನಲ್ಲಿ ಕೈಬಿಟ್ಟಿದ್ದಾರೆ. ಆದರೆ ನಮ್ಮ ತತ್ವ ಬೇರೆಯಾಗಿದೆ, ನಮ್ಮನ್ನು ನಂಬಿದವರ ಕೈ ಎಂದಿಗೂ ಬಿಡುವುದಿಲ್ಲ. ನನ್ನ ಕೆಲಸ ನಾನು ಅಚ್ಚುಕಟ್ಟಾಗಿ ಮಾಡುತ್ತಿದ್ದೇನೆ, ಎಲ್ಲವೂ ಕ್ಷೇತ್ರದ ಮತದಾರರು ನಿರ್ಧರಿಸುತ್ತಾರೆ ಎಂದರು.

    ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮೂದ್ ಸಾಹೇಬ್, ಜಿಪಂ ಮಾಜಿ ಅಧ್ಯಕ್ಷ ರಮೇಶ ಮರಗೋಳ, ಮಾಜಿ ಸದಸ್ಯ ಶಿವಾನಂದ ಪಾಟೀಲ್ ಮರತೂರ, ಪುರಸಭೆ ಸದಸ್ಯ ಶರಣು ನಾಟೇಕರ್, ಪ್ರಮುಖರಾದ ಪೃಥ್ವಿರಾಜ ಸೂರ್ಯವಂಶಿ, ನಾಮದೇವ ರಾಠೋಡ್, ಭೀಮಗೌಡ ಹೊನಗುಂಟ, ಮಹಾಂತಗೌಡ ಪಾಟೀಲ್, ರಾಹುಲ್ ಮೀನಗಾರ, ಸುನೀಲ ಗುತ್ತೇದಾರ್, ಸಂದೀಪ ಚಿತ್ತಾರೆ ಇತರರಿದ್ದರು.

    ಪ್ರತಿಪಕ್ಷಗಳ ಪಿತೂರಿಯನ್ನು ಅರಿತು ಇಂದು ಸಾಕಷ್ಟು ಜನರು ಕಾಂಗ್ರೆಸ್ ಸೇರುತ್ತಿದ್ದಾರೆ. ಎಲ್ಲರನ್ನು ಪ್ರೀತಿಯಿಂದ ಪಕ್ಷಕ್ಕೆ ಸ್ವಾಗತಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾರ್ಯಕರ್ತರ ಎಲ್ಲ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.

    | ಪ್ರಿಯಾಂಕ್ ಖರ್ಗೆ, ಶಾಸಕ

    ಕಮಲ ಬಿಟ್ಟು ಕೈ ಹಿಡಿದವರು: ಶಾಸಕ ಪ್ರಿಯಾಂಕ್ ಖರ್ಗೆ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರ ಸಮ್ಮುಖದಲ್ಲಿ ಇಂಗಳಗಿ ಗ್ರಾಪಂ ಮಾಜಿ ಉಪಾಧ್ಯಕ್ಷ, ಬಿಜೆಪಿ ಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ಬಸವಂತರಾವ ಪಾಟೀಲ್, ಕಡಬೂರ ಗ್ರಾಪಂ ಮಾಜಿ ಅಧ್ಯಕ್ಷ ಹಣಮಂತ ಚವ್ಹಾಣ್, ಅಖಿಲ ಭಾರತ ಬಂಜಾರ ಸಮಾಜದ ವಾಡಿ ವಲಯ ಅಧ್ಯಕ್ಷ ಶಂಕರ್ ಜಾಧವ್, ಬಿಜೆಪಿ ಹಿಂದುಳಿದ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಶೈಲ್ ನಾಟೇಕರ್ ಸೇರಿ ಪ್ರಮುಖ ಕಾರ್ಯಕರ್ತರು ಬೆಂಗಳೂರಿನಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts