More

    ಬಂಗಾರ ಸಾಲದ ಬಡ್ಡಿ ಕಡಿತ

    ಧಾರವಾಡ: ಕರೊನಾ ವೈರಸ್ ಸೃಷ್ಟಿಸಿರುವ ಈ ಸಂಕ್ರಮಣ ಸ್ಥಿತಿಯಲ್ಲಿ ರೈತರ ಮತ್ತು ವ್ಯಾಪಾರಸ್ಥರ ಆರ್ಥಿಕ ಅಗತ್ಯಗಳನ್ನು ಗುರುತಿಸಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಶೇ. 7.25ರಷ್ಟು ಕಡಿಮೆ ಬಡ್ಡಿ ದರದಲ್ಲಿ ವಿಕಾಸ್ ಲಘು ಸುವರ್ಣ ಎಂಬ ಹೆಸರಿನಲ್ಲಿ ವಿಶೇಷ ಚಿನ್ನದ ಸಾಲ ಯೋಜನೆಯನ್ನು ಶುಕ್ರವಾರ ಪ್ರಕಟಿಸಿದೆ.

    ನೂತನ ಬಂಗಾರದ ಸಾಲ ಯೋಜನೆಯನ್ನು ಬಿಡುಗಡೆಗೊಳಿಸಿದ ಬ್ಯಾಂಕ್ ಅಧ್ಯಕ್ಷ ಪಿ. ಗೋಪಿಕೃಷ್ಣ ಮಾತನಾಡಿ, ಸದ್ಯದ ಸ್ಥಿತಿ ಗಮನದಲ್ಲಿಟ್ಟುಕೊಂಡು ಅಗತ್ಯವಿರುವ ಗ್ರಾಹಕರಿಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಸಾಲ ಒದಗಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ. ವೈರಸ್ ಪಿಡುಗಿನಿಂದ ದೇಶದ ಸಾಮಾಜಿಕ-ಆರ್ಥಿಕ ಕ್ರಮ ಬದಲಾವಣೆಗೆ ಒಳಪಡುತ್ತಿದ್ದು, ನಿತ್ಯದ ಖರ್ಚುಗಳನ್ನು ನಿರ್ವಹಿಸುವುದು, ವ್ಯವಹಾರದ ಮುಂದುವರಿಕೆ, ಆರೋಗ್ಯ ಮತ್ತು ಕುಟುಂಬ ನಿರ್ವಹಣೆ ಸವಾಲಾಗಿ ಪರಿಣಮಿಸುತ್ತಿದೆ. ಈ ಸಮಸ್ಯೆಗಳನ್ನು ಪರಿಹರಿಸಲು, ಜೀವನೋಪಾಯ ಬೆಂಬಲಿಸಲು ಬ್ಯಾಂಕಿನ ಇತ್ತೀಚಿನ ವ್ಯವಹಾರ ಕ್ರಮಗಳು ಪೂರಕವಾಗಿವೆ ಎಂದರು.

    ಕನಿಷ್ಠ ಕಾರ್ಯವಿಧಾನದೊಂದಿಗೆ ತುರ್ತು ಸಂದರ್ಭದಲ್ಲಿ ಚಿನ್ನದ ಸಾಲ ಪಡೆಯಬಹುದು. ಈ ಹೊಸ ಚಿನ್ನದ ಸಾಲ ಯೋಜನೆಯಡಿ ಬ್ಯಾಂಕ್ ಮಾರುಕಟ್ಟೆ ಮೌಲ್ಯದ ಶೇ. 80 ಅಥವಾ ಪ್ರತಿ ಗ್ರಾಂ ಗೆ ಗರಿಷ್ಠ 3200 ರೂ. ನಿಗದಿಪಡಿಸಿದೆ. 15 ಲಕ್ಷ ರೂ. ವರೆಗೆ ಗರಿಷ್ಠ ಸಾಲ ನೀಡಲಾಗುವುದು. ಪ್ರಸ್ತುತ ಚಿನ್ನದ ಸಾಲ ಯೋಜನೆಯಡಿ 410 ಕೋಟಿ ರೂಪಾಯಿ ಹಣ ಮೀಸಲಿಡಲಾಗಿದ್ದು, ಯೋಜನೆ ಡಿ. 31ಕ್ಕೆ ಮುಕ್ತಾಯಗೊಳ್ಳುವುದರಿಂದ ಕನಿಷ್ಠ 100 ಕೋಟಿ ರೂ. ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದರು.

    ಬ್ಯಾಂಕಿನ ಮಹಾಪ್ರಬಂಧಕರಾದ ಚಂದ್ರಶೇಖರ ಮೊರೊ, ಬಿ.ಸಿ. ರವಿಚಂದ್ರ, ಪಿ.ನಾಗೇಶ್ವರ ರಾವ್, ಮುಖ್ಯ ವ್ಯವಸ್ಥಾಪಕ ವಿ.ವಿ. ಯಾಜಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts