More

    ಬಂಕಾಪುರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರ

    ಬಂಕಾಪುರ: ಗುರುವಾರ ಸಂಜೆ ಸುರಿದ ಭಾರಿ ಗಾಳಿ-ಮಳೆಗೆ ವಿದ್ಯುತ್ ಕಂಬಗಳು ನೆಲಕ್ಕುರುಳಿದ ಪರಿಣಾಮ ಬಂಕಾಪುರ ಸುತ್ತಲಿನ ಗ್ರಾಮಗಳಲ್ಲಿ ಎರಡು ದಿನಗಳಿಂದ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದೆ.

    ಗುಡ್ಡದ ಚನ್ನಾಪುರ, ಹಳೇಬಂಕಾಪುರ, ಹುಲಿಕಟ್ಟಿ, ಶಿಡ್ಲಾಪುರ, ಹುನಗುಂದ, ಬಾಡ, ನಾರಾಯಣಪುರ, ಮೂಕಬಸರಿಕಟ್ಟಿ, ಮಲ್ಲನಾಯ್ಕನಹಳ್ಳಿ ಸೇರಿ ಅನೇಕ ಗ್ರಾಮಗಳಲ್ಲಿ ಗಾಳಿ ಮಳೆಗೆ ವಿದ್ಯುತ್ ಕಂಬ ನೆಲಕ್ಕುರುಳಿವೆ. ಆದರೆ, ಇನ್ನೂ ಕಂಬ, ತಂತಿ ಮಾರ್ಗ ದುರಸ್ತಿಯಾಗದೆ ವಿದ್ಯುತ್ ಸರಿಯಾಗಿ ಸರಬರಾಜಾಗುತ್ತಿಲ್ಲ. ಇದರಿಂದ ಕೊಳವೆ ಬಾವಿಗಳಿಂದ ನೀರೆತ್ತಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅನೇಕ ಗ್ರಾಮಗಳಲ್ಲಿ ಜನರು ಕುಡಿಯುವ ನೀರಿಗೆ ಪರದಾಡುವಂತಾಗಿದೆ.

    ಗುಡ್ಡದ ಚನ್ನಾಪುರ ಗ್ರಾ.ಪಂ. ಆಡಳಿತ ಮಂಡಳಿ ತಮ್ಮ ವ್ಯಾಪ್ತಿಯ ಹುಲಿಕಟ್ಟಿ, ಗುಡ್ಡದಚನ್ನಾಪುರ, ಜಾಲಿಕಟ್ಟಿ (ಪ್ಲಾಟ್)ಗ್ರಾಮಗಳಲ್ಲಿ ಟ್ರ್ಯಾಕ್ಟರ್ ಜನರೇಟರ್ ಬಾಡಿಗೆ ಪಡೆದು ಕುಡಿಯುವ ನೀರಿನ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿಕೊಂಡಿದ್ದಾರೆ. ಇನ್ನುಳಿದ ಗ್ರಾಮದ ಜನರು ಕೈ ಚಾಲಿತ ಬೋರ್​ವೆಲ್ ಮೊರೆ ಹೋಗಿದ್ದಾರೆ. ವಿದ್ಯುತ್ ದುರಸ್ತಿ ಕೆಲಸ ಶೀಘ್ರ ಆಗದಿದ್ದಲ್ಲಿ ಜನರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ.

    ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಕುಡಿಯುವ ನೀರಿಗಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾ.ಪಂ. ಅಧ್ಯಕ್ಷ ಷಣ್ಮುಖ ಕಾಳಣ್ಣವರ, ಅನ್ನದಾತ ರೈತ ಹೊರಾಟ ಸಮಿತಿ ಅಧ್ಯಕ್ಷ ಗಂಗಾಧರ ಗಡ್ಡೆ ಆಗ್ರಹಿಸಿದ್ದಾರೆ.

    ಪಟ್ಟಣದಿಂದ ಗ್ರಾಮೀಣ ಭಾಗಕ್ಕೆ ವಿದ್ಯುತ್ ಕಲ್ಪಿಸುವ ಸುಮಾರು 40ಕ್ಕೂ ಅಧಿಕ ಕಂಬಗಳು ನೆಲಕ್ಕುರುಳಿರುವುದರಿಂದ ಸಮಸ್ಯೆಯಾಗಿದೆ. ಕಂಬ ಬದಲಿಸುವ ಕಾರ್ಯ ಮುಕ್ತಾಯದ ಹಂತದಲ್ಲಿದ್ದು, ನಾಳೆಯಿಂದ ಕುಡಿಯುವ ನೀರಿನ ಪಂಪ್​ಸೆಟ್​ಗಳಿಗೆ ವಿದ್ಯುತ್ ಒದಗಿಸಲಾಗುವುದು.
    | ಕೆ. ನಾಗರಾಜ, ಹೆಸ್ಕಾ ಅಧಿಕಾರಿ ಬಂಕಾಪುರ (ಗ್ರಾಮೀಣ ಭಾಗ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts