More

    ಫೋಟೋ ಸ್ಟುಡಿಯೋ ತೆರೆಯಲು ಅವಕಾಶ ಕಲ್ಪಿಸಿ

    ಬೆಳಗಾವಿ: ಲಾಕ್‌ಡೌನ್ ಸಮಯದದಲ್ಲಿ ಫೋಟೋ ಸ್ಟುಡಿಯೋ ತೆರೆಯಲು ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಮಂಗಳವಾರ ಫೋಟೋ ಮತ್ತು ವಿಡಿಯೋಗ್ರಾಫರ್ ಅಸೋಸಿಯೇಷನ್ ನಗರ ಮತ್ತು ತಾಲೂಕು ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

    ಕಳೆದ ವರ್ಷ ಲಾಕ್‌ಡೌನ್ ಸಂದರ್ಭದಲ್ಲಿ ಆದಾಯ ಇಲ್ಲದೆ ಸಾಕಷ್ಟು ನಷ್ಟ ಅನುಭವಿಸಿದ್ದೇವೆ. ಇದರಿಂದಾಗಿ ಬದುಕು ನಿರ್ವಹಣೆ ಕಷ್ಟವಾಗುತ್ತಿದೆ. ಇದೀಗ ಮದುವೆ, ಸಮಾರಂಭ ಕಾರ್ಯಕ್ರಮಗಳು ನಡೆಯುವ ಸಮಯದಲ್ಲಿ ಸರ್ಕಾರವು ಲಾಕ್‌ಡೌನ್ ಘೋಷಿಸಿದೆ. ಇದರಿಂದಾಗಿ ವೃತ್ತಿ ನಂಬಿಕೊಂಡಿದ್ದ ನೂರಾರು ಕುಟುಂಬಗಳು ಇದೀಗ ಉದ್ಯೋಗ, ಆದಾಯ ಇಲ್ಲದೆ ಸಂಕಷ್ಟಕ್ಕೆ ಒಳಗಾಗಿವೆ.

    ಈಗಾಗಲೇ ಸರ್ಕಾರವು ಸಾರ್ವಜನಿ ಕರಿಗೆ ಷರತ್ತುಬದ್ಧವಾಗಿ ಮದುವೆ, ಸಮಾರಂಭ ಜರುಗಿಸಲು ಅವಕಾಶ ಕಲ್ಪಿಸಿದೆ. ಅದೇ ಮಾದರಿಯಲ್ಲಿ ಫೋಟೋ ಗ್ರಾಪರ್‌ಗಳಿಗೆ ಅವಕಾಶ ಕಲ್ಪಿಸಿಕೊಡಲು ಕ್ರಮ ವಹಿಸಬೇಕು. ಇಲ್ಲದಿದ್ದರೆ ವರ್ಷ ಪೂರ್ತಿ ಉದ್ಯೋಗ ಇಲ್ಲದೆ ನಾನಾ ರೀತಿಯ ಸಮಸ್ಯೆ ಎದುರಿಸಬೇಕಾಗುತ್ತದೆ. ಮಾನವೀಯತೆ ಆಧಾರದ ಮೇಲೆ ಅವಕಾಶ ನೀಡಬೇಕು ಎಂದು ಮನವಿ ಮೂಲಕ ವಿನಂತಿಸಿದರು. ಸಂಘದ ಅಧ್ಯಕ್ಷ ಡಿ.ಬಿ.ಪಾಟೀಲ, ಸುರೇಶ ಮುರಕುಂಬಿ, ಶೇಖರ ಅಂಬೇವಾಡಿಕರ್, ಸಂತೋಷ ಪಾಟೀಲ, ಗಣೇಶ ಹೊನಗೇಕರ್, ಮಂಜು ಕುಂದರಗಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts