More

    ಫೆ.3ರಂದು ಕಲ್ಲಕೆರೆ ಮಾದೇವಿ ಸಿನಿಮಾ ತೆರೆಗೆ

    ವಿರಾಜಪೇಟೆ: ಕೊಡವ ಸಿನಿಮಾಗಳಲ್ಲಿ ಮೊದಲ ಬಾರಿಗೆ ಪೌರಾಣಿಕ ಹಿನ್ನೆಲೆ ಹೊಂದಿರುವ ಕೊಡವ ಪೌರಾಣಿಕ ಸಿನಿಮಾ ಕಲ್ಲಕೆರೆ ಮಾದೇವಿ ಸಿನಿಮಾ ಫೆ.3ರಂದು ವಿರಾಜಪೇಟೆ ಕೊಡವ ಸಮಾಜದಲ್ಲಿ ತೆರೆ ಕಾಣಲಿದ್ದು, 3 ರಿಂದ 5ರವರೆಗೆ ಚಿತ್ರ ಪ್ರದರ್ಶನಗೊಳ್ಳಲಿದೆ ಎಂದು ಚಿತ್ರ ನಿರ್ಮಾಪಕಿ ಪಟ್ಟಡ ರೀನಾ ಪ್ರಕಾಶ್ ಹೇಳಿದರು.

    ಪಿ.ಅಂಡ್.ಜಿ ಕ್ರಿಯೇಷನ್ಸ್‌ನ ಚಿತ್ರ ಸಂಸ್ಥೆಯ ಮೂಲಕ ನಿರ್ಮಾಣಗೊಂಡಿದ್ದು, ಕೊಡವರ ಪವಿತ್ರ ಗ್ರಂಥ ಎಂದು ಭಾವಿಸಿರುವ ಪಟ್ಟೋಳೆ ಪಳಮೆಯಲ್ಲಿರುವ ಹಾಡನ್ನು ಚಿತ್ರವನ್ನಾಗಿ ಮಾಡಲಾಗಿದೆ. 600 ವರ್ಷಗಳ ಹಿಂದಿನ ಇತಿಹಾಸದ ಘಟನೆಗಳನ್ನು ಯಥಾವತ್ತಾಗಿ ತೆಗೆದುಕೊಳ್ಳಲಾಗಿದೆ. ಕೊಡವ ಮಹಿಳೆಯರು ಬಳಸುವ ಪತ್ತಾಕ್ ಹೇಗೆ ಬಂತು, ಆ ಪತ್ತಾಕಿನಲ್ಲಿರುವ ನಾಗಮಣಿ, ಅದರ ವೈಶಿಷ್ಟತೆ, ಶುಭ-ಅಶುಭ ಸಮಾರಂಭಗಳಲ್ಲಿ ಬಳಸುವ ದುಡಿ, ಜನಾಂಗದ ಆಚಾರ-ವಿಚಾರ, ಪದ್ಧತಿ-ಪರಂಪರೆ ಯಾವ ಕಾರಣಕ್ಕಾಗಿ ಇದೆ ಎಂಬಿತ್ಯಾದಿಗಳನ್ನು ಚಿತ್ರಿಸಲಾಗಿದೆ ಎಂದು ಹೇಳಿದರು.

    ಚಿತ್ರ ನಿದೇರ್ಶಕ ಬಾಳೆಯಡ ಪ್ರತಿಶ್ ಪೂವಯ್ಯ ಮಾತನಾಡಿ, ಕೊಡವ ಭಾಷೆಯಲ್ಲಿ ಹಲವಾರು ಚಿತ್ರಗಳು ನಿರ್ಮಾಣವಾಗಿವೆ. ಆದರೆ, ಪೌರಾಣಿಕ ಹಿನ್ನೆಲೆ ಹೊಂದಿರುವ ಪ್ರಥಮ ಚಿತ್ರ ಇದಾಗಿದೆ. ಅಂದಿನ ಸನ್ನಿವೇಶಕ್ಕೆ ತಕ್ಕಂತೆ ಸೆಟ್ ಅಳವಡಿಸಲಾಗಿದ್ದು ಉತ್ತಮ ತಾಂತ್ರಿಕತೆ ಇದೆ ಎಂದು ಹೇಳಿದರು.
    ಕ್ರಿಯೇಷನ್ಸ್‌ನ ಪಾಲುದಾರ ಆಚಿಯಡ ಗಗನ್ ಗಣಪತಿ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts