More

    ಫಸಲು ಕೊಡುವ ಮರಕ್ಕೆ ಕೊಡಲಿ ಏಟು ಬೇಡ

    ರಿಪ್ಪನ್‍ಪೇಟೆ: ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ಮತದಾರರ ಬಳಿ ತೆರಳಲು ಹಲವು ಮಾರ್ಗಗಳನ್ನು ಅನುಸರಿಸುತ್ತಾರೆ. ಮತಭಿಕ್ಷೆ ಕೇಳಲು ಹಲವು ಮಾರ್ಗಗಳ ಮೊರೆ ಹೋಗುತ್ತಾರೆ. ಈ ಬಾರಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೊಸ ರೀತಿಯಲ್ಲಿ ಮತ ಕೇಳುತ್ತಿದ್ದಾರೆ ನೀರು, ಗೊಬ್ಬರ ಹಾಕಿ ಸಲುಹಿದ ಮರವನ್ನು ಫಸಲು ಬರುವ ಸಂದರ್ಭದಲ್ಲಿ ಕಡಿಯಬಾರದು ಎಂದು ಹೇಳಿದ್ದಾರೆ.
    ತೀರ್ಥಹಳ್ಳಿ ಕ್ಷೇತ್ರಕ್ಕೆ ಕರೊನಾ ಸಂಕಷ್ಟದ ನಂತರ 3,254 ಕೋಟಿ ರೂ. ಅನುದಾನ ತಂದಿದ್ದು ಸಮಗ್ರ ಅಭಿವೃದ್ಧಿ ಕೈಗೊಳ್ಳಲಾಗಿದೆ. ಕ್ಷೇತ್ರದ ಇತಿಹಾಸದಲ್ಲಿ ಇಷ್ಟೊಂದು ಅನುದಾನ ತಂದಿರುವುದು ಇದೇ ಮೊದಲು. ಇಷ್ಟೊಂದು ದಾಖಲೆ ಪ್ರಮಾಣ ಅನುದಾನ ತಂದಿರಲು ಸಾಧ್ಯವಾಗಿರುವುದು ನೀವು ನನಗೆ ನೀಡಿರುವ ಮತದಿಂದ. ನಾನು ಗೊಡ್ಡು ಮರವಲ್ಲ ಫಸಲು ಕೊಡುವ ಮರ. ಈ ಫಸಲು ಬರುವ ಮರವನ್ನು ಕಡಿಯದೆ, ನನಗೆ ಆಶೀರ್ವಾದ ಮಾಡಿ. ಮುಂದೆ ಇನ್ನೂ ಹೆಚ್ಚಿನ ಅಭಿವೃದ್ಧಿಯನ್ನು ಮಾಡುತ್ತೇನೆ ಎಂದರು.
    ಚಿಕ್ಕಜೇನಿ ಗ್ರಾಪಂ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ನನ್ನನ್ನು ಮತ ಹಾಕಿ ಗೆಲ್ಲಿಸಿ ಕಳುಹಿಸಿದ್ದೀರಿ. ನಿಮ್ಮ ಅಪೇಕ್ಷೆಯಂತೆ ಸರ್ಕಾರ ನನ್ನ ಸಚಿವನನ್ನಾಗಿಯೂ ಮಾಡಿದೆ. ನೀವು ಕೊಟ್ಟ ಅ„ಕಾರವನ್ನು ನನ್ನ ಸುಖಕ್ಕಾಗಿ ಎಂದೂ ದುರ್ಬಳಕೆ ಮಾಡಿಕೊಂಡಿಲ್ಲ ಎಂದು ತಿಳಿಸಿದರು.
    ಕ್ಷೇತ್ರದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿಪಡಿಸಿದ್ದೇನೆ. ಚಿಕ್ಕಜೇನಿ ಪಂಚಾಯಿತಿ ಒಂದಕ್ಕೆ 4.5 ಕೋಟಿ ರೂ. ಅನುದಾನ ತಂದು ರಸ್ತೆ, ಅಂಗನವಾಡಿ ಇತರ ಅಭಿವೃದ್ಧಿಯನ್ನು ಮಾಡಿದ್ದೇನೆ. ಹೊಸನಗರ ತಾಲೂಕಿನ ಜನತೆಗೆ ಶುದ್ಧ ಕುಡಿಯುವ ನೀರಿನ ಯೋಜನೆಗಾಗಿ 422 ಕೋಟಿ ರೂ. ಅನುದಾನ ಮಂಜೂರಾಗಿದೆ. ಮುಂದಿನ ಒಂದು ವರ್ಷದಲ್ಲಿ ತಾಲೂಕಿನ ಪ್ರತಿ ಮನೆಗೂ 24 ಗಂಟೆಯೂ ನೀರು ಒದಗಿಸುವ ಯೋಜನೆಯನ್ನು ರೂಪಿಸಲಾಗಿದೆ ಎಂದರು.
    ಹಿರೇಜೇನಿ, ಕಾರೆಮಟ್ಟಿ, ಚಿಕ್ಕಜೇನಿ ಗ್ರಾಮಗಳ ಅಂಗನವಾಡಿ ಕಟ್ಟಡ ಉದ್ಘಾಟನೆ, ಚಿಕ್ಕಜೇನಿ-ಕಾರೆಮಟ್ಟಿ ರಸ್ತೆ, ಬಾಕ್ಸ್ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಗ್ರಾಪಂ ಸದಸ್ಯರಾದ ಎನ್.ಪಿ.ರಾಜು, ಅರುಣಾಚಲ, ಅಣ್ಣಪ್ಪ ಶೆಟ್ಟಿ, ಮುಖಂಡರಾದ ಅರವಿಂದ ಭಟ್, ವೆಂಕಟರಮಣ, ಸು„ೀಂದ್ರ, ತ.ಮ.ನರಸಿಂಹ, ವೇದಮೂರ್ತಿ, ಪಿಡಿಒ ಮಂಜುಳಾ, ಸಿಡಿಪಿಒ ಶಶಿರೇಖಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts