More

    ಫಲಹಾರ ಸ್ವಾಮಿ ಮಠದಿಂದ ಭಕ್ತರಿಗೆ ಹಿತ್ತಾರ್

    ಆಲ್ದೂರು: ಮಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಫಲಹಾರಸ್ವಾಮಿ ಮಠದಿಂದ ಸೋಮವಾರ ಬಿಂಡಿಗ ದೇವಿರಮ್ಮ ದೇವಸ್ಥಾನದಲ್ಲಿ ಗೌರಿಹಬ್ಬಕ್ಕೆ ಆಶೀರ್ವದಿಸಿದ ಹಿತ್ತಾರ್(ತಾಂಬೂಲ) ನೀಡಲಾಯಿತು. ಫಲಹಾರಸ್ವಾಮಿ ಮಠದಿಂದ ಪದ್ಧತಿಯಂತೆ ಸುತ್ತಲಿನ ಹಲಸಬಾಳು, ಹೆಬ್ಬಳ್ಳಿ, ಮಲ್ಲೇನಹಳ್ಳಿ, ಅರಿಶಿನಕುಪ್ಪೆ, ಬಿಂಡಿಗ ಗ್ರಾಮಗಳ ಮಠದ ಭಕ್ತರಿಗೆ ಮಠದಿಂದ ಆಶೀರ್ವದಿಸಿದ ಎರಡು ತೆಂಗಿನ ಕಾಯಿಗಳನ್ನು ಆದಿ ಗುರು ಫಲಹಾರಸ್ವಾಮಿ ಮಠದ ಮುರುಘೕಂದ್ರ ಸ್ವಾಮೀಜಿ ಭಕ್ತರಿಗೆ ನೀಡಿ ಆಶೀರ್ವದಿಸಿದರು. ಎರಡು ತೆಂಗಿನ ಕಾಯಿಗಳನ್ನು ನೀಡುವುದು ಹಿಂದಿನಿಂದ ನಡೆದುಕೊಂಡು ಬಂದಿದೆ. ಇದನ್ನು ಹಿತ್ತಾರ್ ಎಂದು ಕರೆಯುತ್ತಾರೆ. ಇದರಲ್ಲಿ ಒಂದು ತೆಂಗಿನ ಕಾಯಿಯನ್ನು ಗೌರಿಗೆ ಅರ್ಪಿಸಿದರೆ ಇನ್ನೊಂದು ಹಿರಿಯರಿಗೆ ಅರ್ಪಿಸುತ್ತಾರೆ. ಈ ಬಾರಿಯೂ ಭಕ್ತರಿಗೆ ಕಾಯಿ ನೀಡಿ ಆಶೀರ್ವದಿಲಾಗಿದೆ ಎಂದು ಆದಿ ಗುರು ಫಲಹಾರಸ್ವಾಮಿ ಮಠದ ಮುರುಘೕಂದ್ರ ಸ್ವಾಮೀಜಿ ತಿಳಿಸಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts