More

    ಪ.ಪೂ. ಕಾಲೇಜುಗಳ ಖೋ-ಖೋ ಟೂರ್ನಿ  -ದಾವಣಗೆರೆ, ಬೆಂಗಳೂರು ಉತ್ತರ ಚಾಂಪಿಯನ್

    ದಾವಣಗೆರೆ: ದಾವಣಗೆರೆ ಬಾಲಕರು, ಬೆಂಗಳೂರು ಉತ್ತರ ಬಾಲೆಯರು ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಖೋ-ಖೋ ಪಂದ್ಯಾವಳಿಗಳ ಚಾಂಪಿಯನ್ನರಾಗಿ ಹೊರಹೊಮ್ಮಿದರು.
    ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ, ಬಾಲಕರ ವಿಭಾಗದ ಫೈನಲ್‌ನಲ್ಲಿ ಆತಿಥೇಯರು ಮೈಸೂರು ತಂಡವನ್ನು 24-15 ಅಂಕಗಳಿಂದ ಮಣಿಸಿ ಪಾರಿತೋಷಕ ಗಿಟ್ಟಿಸಿದರು.
    ಬಾಲಕಿಯರ ವಿಭಾಗದ ಅಂತಿಮ ಪಂದ್ಯದಲ್ಲಿ ಬೆಂಗಳೂರು ಉತ್ತರ ತಂಡದವರು ಮೈಸೂರು ತಂಡವನ್ನು 18-10 ಅಂಕಗಳಿಂದ ಪರಾಭವಗೊಳಿಸಿ ಬಹುಮಾನ ಮುಡಿಗೇರಿಸಿಕೊಂಡರು.
    ದಾವಣಗೆರೆ ತಂಡದ ನಿಖಿಲ್, ಮೈಸೂರಿನ ಕೆ.ಎಂ. ಪ್ರಕೃತಿ ಉತ್ತಮ ಹಿಡಿತಗಾರ/ ಹಿಡಿತಗಾರ್ತಿ, ಮೈಸೂರಿನ ಆಕಾಶ್, ಬೆಂಗಳೂರು ಉತ್ತರದ ಐಶ್ವರ್ಯ ಉತ್ತಮ ಓಟಗಾರ/ ಓಟಗಾರ್ತಿ, ದಾವಣಗೆರೆಯ ಹುಲಿಗೆಪ್ಪ ಹಾಗೂ ಬೆಂಗಳೂರು ಉತ್ತರ ತಂಡದ ಮಾನ್ಯಾ ಆಲ್‌ರೌಂಡರ್ ಬಹುಮಾನ ಪಡೆದರು.
    ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ, ಸಿದ್ಧಗಂಗಾ ಪಪೂ ಕಾಲೇಜಿನ ಸಹಯೋಗದಲ್ಲಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಸಮಾರೋಪದಲ್ಲಿ ಸಿದ್ಧಗಂಗಾ ಶಾಲೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ ಬಹುಮಾನ ವಿತರಿಸಿದರು. ಸಂಸ್ಥೆಯ ಕಾರ್ಯದರ್ಶಿ ಡಿ.ಎಸ್. ಹೇಮಂತ್, ನಿರ್ದೇಶಕ ಡಾ.ಡಿ.ಎಸ್. ಜಯಂತ್, ಡಿಡಿಪಿಯು ಎಸ್.ಜಿ.ಕರಿಸಿದ್ದಪ್ಪ, ಬೆಂಗಳೂರು ಉತ್ತರ ಜಿಲ್ಲೆಯ ಡಿಡಿಪಿಯು ರಾಜು, ಪ್ರಾಚಾರ್ಯರ ಸಂಘದ ಅಧ್ಯಕ್ಷ ಆರ್. ಪ್ರದೀಪ್‌ಕುಮಾರ್, ಕ್ರೀಡಾ ಸಂಯೋಜಕ ಕುಮಾರ ನಾಯ್ಕ, ಎನ್. ಶಿವಪ್ಪ, ಖೋಖೋ ಅಂತಾರಾಷ್ಟ್ರೀತ ತರಬೇತುದಾರ ಜೆ. ರಾಮಲಿಂಗಪ್ಪ, ಕ್ರೀಡಾಧಿಕಾರಿ ಸಿ.ಚಂದ್ರಶೇಖರ್, ವೀಕ್ಷಕರಾದ ಎಸ್. ಗೋಪಾಲ್, ಶಿವಕುಮಾರ್ ಹಾವೇರಿ, ರಮೇಶ್ ಛಲವಾದಿ, ಸಂಜಯ್‌ಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts