More

    ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಣ್ಣಿನ ಪರೀಕ್ಷೆ

    ಚಿತ್ರದುರ್ಗ: ಆಶಾಕಾರ‌್ಯಕರ್ತರು ಮನೆ,ಮನೆಗೆ ಭೇಟಿ ನೀಡಿ ದೃಷ್ಟಿ ದೋಷ ಇರುವಂಥವರನ್ನು ಗುರುತಿಸ ಬೇಕೆಂದು ತಾಲೂಕು ವೈದ್ಯಾಧಿಕಾರಿ ಡಾ.ಬಿ.ವಿ. ಗಿರೀಶ್ ಹೇಳಿದರು.
    ಚಿತ್ರದುರ್ಗ ತಾಲೂಕು ಸಿ.ಜಿ.ಹಳ್ಳಿ,ಗುಡ್ಡದರಂಗವ್ವನಹಳ್ಳಿ,ದೊಡ್ಡಸಿದ್ದವ್ವನಹಳ್ಳಿ,ಯಳಗೋಡು ಮುದ್ದಾಪುರ ಮತ್ತು ವಿಜಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೋಮವಾರ ಭೇಟಿ ನೀಡಿ,ಆಶಾಕಿರಣ’ದ್ವಿತೀಯ ಹಂತದ ಕಣ್ಣಿನ ಪರೀಕ್ಷಾ ಕಾರ್ಯಕ್ರಮ ಕುರಿತಂತೆ ಪರಿಶೀಲನೆ ನಡೆಸಿ ಮಾತನಾಡಿದರು.
    ಆಶಾ ಕಾರ್ಯಕರ್ತೆಯರು ಗುರುತಿಸಿದ ದೃಷ್ಟಿ ದೋಷವಿರುವ ನಾಗರಿಕರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನೇತ್ರಾಧಿಕಾರಿಗಳು ಪರೀಕ್ಷೆ ನಡೆಸುತ್ತಾರೆ.ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಕನ್ನಡಕ ವಿತರಿಸಲಾಗುತ್ತದೆ. ಅಗತ್ಯವಿದ್ದವರಿಗೆ ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಲಾಗುತ್ತದೆ ಎಂದರು.
    ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮಾತನಾಡಿ ಸಿ.ಜಿ.ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 540,ಯಳಗೋಡು ಪ್ರಾಥಮಿಕ ಆ ರೋಗ್ಯ ಕೇಂದ್ರದಲ್ಲಿ 345, ವಿಜಾಪುರ ಆರೋಗ್ಯ ಕೇಂದ್ರದಲ್ಲಿ 425 ಹಾಗೂ ದೊಡ್ಡ ಸಿದ್ದವ್ವನಹಳ್ಳಿ ವ್ಯಾಪ್ತಿಯಲ್ಲಿ 245 ಕಣ್ಣಿನ ದೋಷವಿರುವ ಜನರನ್ನು ಗುರುತಿಸಲಾಗಿದೆ ಎಂದರು.
    ಯಳಗೋಡು ಪ್ರಾಥಮಿಕ ಆರೋಗ್ಯಾಧಿಕಾರಿ ಡಾ.ಸುಷ್ಮಿತಾ,ನೇತ್ರಾಧಿಕಾರಿಗಳಾದ ಬರ್ಕತ್‌ಅಲಿ,ನವೀನ್‌ಕುಮಾರ್,ಆರೋಗ್ಯ ನಿರೀಕ್ಷಣಾಧಿ ಕಾರಿಗಳಾದ ರಂಗಾರೆಡ್ಡಿ,ಶಂಕರ್‌ನಾಯ್ಕ್,ಪ್ರವೀಣ್ಕುಮಾರ್,ಕುಚೇಲಾ,ಸಮುದಾಯ ಆರೋಗ್ಯಾಧಿಕಾರಿಗಳಾದ ಶಾಲಿನಿ ಲೋಕೇಶ್‌ಕು ಮಾರ್ ಮತ್ತಿತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts