More

    ಪ್ರಾಣಿ, ಪಕ್ಷಿ ನಮಗೆ ಪ್ರೇರಣಾದಾಯಕ

    ಬೆಳಗಾವಿ: ಪ್ರಾಣಿ, ಪಕ್ಷಿಗಳಿಲ್ಲದೆ ಮಾನವನ ಬದುಕು ಪರಿಪೂರ್ಣವಲ್ಲ. ಅವು ಮಾನವ ಜಗತ್ತಿಗೆ ಪ್ರೇರಣಾದಾಯಕ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ
    ಪ್ರೊ.ಎಂ.ರಾಮಚಂದ್ರಗೌಡ ಹೇಳಿದರು.

    ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ ಹಾಗೂ ವಿಜಯಪುರದ ಸ್ನಾತಕೋತ್ತರ ಕೇಂದ್ರ, ಮೈಸೂರು ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ಅಖಿಲ ಭಾರತ ಸಂಶೋಧಕರ ಸಂಘ ಸಹಯೋಗದಲ್ಲಿ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಲ್ಲಿ ಶುಕ್ರವಾರ ಏರ್ಪಡಿಸಿರುವ 2 ದಿನಗಳ ‘ಆಧುನಿಕ ಕನ್ನಡ ಸಾಹಿತ್ಯದಲ್ಲಿ ಪ್ರಾಣಿ ಪಕ್ಷಿಗಳ ಸಂಸ್ಕೃತಿ’ ರಾಷ್ಟ್ರಮಟ್ಟದ ಸಮೂಹ ಕೇಂದ್ರಿತ ಚರ್ಚೆ ಉದ್ಘಾಟಿಸಿ ಅವರು ಮಾತನಾಡಿದರು. ಮಾನವ ಪರಿಸರ ಪ್ರಜ್ಞೆ ಹೊಂದುವುದು ಅವಶ್ಯ. ಸುತ್ತಲಿನ ವಾತಾವರಣದಲ್ಲಿ ಗಿಡ, ಮರ, ಹೂ, ಬಳ್ಳಿ ಬೆಳೆಯಬೇಕು. ಆ ಮೂಲಕ ಪ್ರಾಣಿ ಹಾಗೂ ಪಕ್ಷಿಗಳಿಗೆ ಆ ವಾತಾವರಣದಲ್ಲಿ ಸ್ವಚ್ಛಂದವಾಗಿ ಬದುಕಲು ಅವಕಾಶ ಮಾಡಿಕೊಟ್ಟಾಗ ಮಾತ್ರ ಬದುಕು ಪರಿಪೂರ್ಣ ಎಂದರು.

    ದೆಹಲಿ ವಿಶ್ವವಿದ್ಯಾಲಯದ ಭಾಷಾ ಸಾಹಿತ್ಯ ಅಧ್ಯಯನ ಸಂಸ್ಥೆಯ ವಿಶ್ರಾಂತ ಪ್ರಾಧ್ಯಾಪಕ ಡಾ.ಟಿ.ಎಸ್.ಸತ್ಯನಾಥ ಮಾತನಾಡಿ, ಮಾನವನಿಗೆ ಸಂಸ್ಕೃತಿ ಎಂಬ ಪದದ ಬಳಕೆಗೆ ಕೇವಲ ಒಂದು ಶತಮಾನದ ಇತಿಹಾಸ ಇದೆ. ಆದರೆ, ಪ್ರಾಣಿಗಳ ಸಂಸ್ಕೃತಿಗೆ ಹಲವಾರು ಶತಮಾನಗಳ ಇತಿಹಾಸ ಇದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ. ಎಸ್.ಎಂ. ಗಂಗಾಧರಯ್ಯ, ಡಾ. ಕುಶಾಲ ಬರಗೂರು ಮಾತನಾಡಿದರು. ಪ್ರೊ. ಗುಂಡಣ್ಣ ಕಲಬುರ್ಗಿ, ಡಾ.ಹನುಮಂತಪ್ಪ ಸಂಜೀವಣ್ಣನವರ, ಡಾ.ಮಹೇಶ ಗಾಜಪ್ಪನವರ, ಡಾ.ಪಿ.ನಾಗರಾಜ, ಡಾ.ಸಿದ್ದಲಿಂಗೇಶ್ವರ ಬಿದರಳ್ಳಿ, ಡಾ.ಸಂತೋಷ ಪಾಟೀಲ ಹಾಗೂ ಸಂಶೋಧಕರು, ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ.ಗಜಾನನ ನಾಯ್ಕ ಸ್ವಾಗತಿಸಿದರು. ಡಾ.ಚಿದಾನಂದ ಢವಳೇಶ್ವರ ನಿರೂಪಿಸಿದರು. ಪ್ರೊ.ಅಶೋಕ ಡೀಸೋಜಾ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts