More

    ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಪ್ರತಿಭಟನೆ

    ಲಕ್ಷೆ್ಮೕಶ್ವರ: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಪಕ್ಷದ ಯುವ ಮೋರ್ಚಾ ಶಿರಹಟ್ಟಿ ಮಂಡಲದಿಂದ ಪಟ್ಟಣದ ಪೇಟೆ ಆಂಜನೇಯ ದೇವಸ್ಥಾನದ ಹತ್ತಿರ ಶುಕ್ರವಾರ ಪ್ರತಿಭಟನೆ ನಡೆಸಿ, ಪ್ರವೀಣ್​ಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
    ಬಿಜೆಪಿ ಶಿರಹಟ್ಟಿ ಮಂಡಲ ಅಧ್ಯಕ್ಷ ಫಕೀರೇಶ ರಟ್ಟಿಹಳ್ಳಿ ಮಾತನಾಡಿ, ಬಿಜೆಪಿ ದೇಶದ ಬಗ್ಗೆ ಸ್ವಾಭಿಮಾನ ಮೂಡಿಸುವ ತತ್ವ ಸಿದ್ಧಾಂತ ಹೊಂದಿರುವ ಸಂಘಟನೆಯಾಗಿದೆ. ಇಂತಹ ಪಕ್ಷದ ಕಾರ್ಯಕರ್ತರನ್ನು ಕೆಲವು ದುಷ್ಟ ಜಿಹಾದಿಗಳು ಹತ್ಯೆ ಮಾಡುತ್ತಿರುವುದು ಖಂಡನೀಯ ಎಂದರು.
    ಯುವ ಮೋರ್ಚಾ ತಾಲೂಕಾಧ್ಯಕ್ಷ ನವೀನ ಹಿರೇಮಠ ಮಾತನಾಡಿ, ರಾಜ್ಯ ಮತ್ತು ದೇಶದಲ್ಲಿ ಬಿಜೆಪಿ ಸರ್ಕಾರಗಳಿದ್ದು, ಈ ರೀತಿ ಸಾಲುಸಾಲು ಹಿಂದುಗಳ ಮತ್ತು ಪಕ್ಷದ ಕಾರ್ಯಕರ್ತರ ಹತ್ಯೆಯಾಗುತ್ತಿರುವುದು ನೋವಿನ ಸಂಗತಿ. ಆದ್ದರಿಂದ ಸರ್ಕಾರ ಪಿಎಫ್​ಐ, ಎಸ್​ಡಿಪಿಐನಂತಹ ಮತಾಂಧ, ಭಯೋತ್ಪಾದಕ ಮತ್ತು ಜಿಹಾದಿ ಮನಸ್ಥಿತಿಯ ಮುಸ್ಲಿಂ ಸಂಘಟನೆಗಳನ್ನು ನಿರ್ದಾಕ್ಷಿಣ್ಯವಾಗಿ ಬ್ಯಾನ್ ಮಾಡಬೇಕು ಎಂದರು.
    ಶ್ರೀರಾಮ ಸೇನೆಯ ತಾಲೂಕಾಧ್ಯಕ್ಷ ಪ್ರಕಾಶ ಮಾದನೂರ ಮಾತನಾಡಿ, ಭಾರತ ಮಾತೆಯ ಮಡಿಲಲ್ಲಿ ಜೀವಿಸಿ, ಇಲ್ಲಿನ ಅನ್ನ ಉಂಡು ಭಾರತ ಮಾತೆಯ ಮಕ್ಕಳಾದ ಹಿಂದುಗಳ ಮೇಲೆ ಇಸ್ಲಾಮಿಕ್ ಜೀಹಾದಿಗಳು ಹತ್ಯೆ ಮಾಡುತ್ತಿರುವುದನ್ನು ಇನ್ನು ಸಹಿಸಲ್ಲ. ಹಿಂದುಗಳ ರಕ್ಷಣೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಅಲ್ಲಿನ ಮತಾಂಧರಿಗೆ ಕಠಿಣ ಶಿಕ್ಷೆ ಆಗುವಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
    ಬಿಜೆಪಿ ತಾಲೂಕಾ ಪ್ರಧಾನ ಕಾರ್ಯದರ್ಶಿ ಗಂಗಾಧರ ಮೆಣಸಿನಕಾಯಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಸುನೀಲ ಮಹಾಂತಶೆಟ್ಟರ್, ಪ್ರವೀಣಗೌಡ ಪಾಟೀಲ, ಮಹೇಶ ಲಮಾಣಿ, ದುಂಡೇಶ ಕೊಟಗಿ ಎಂ.ಆರ್. ಪಾಟೀಲ, ವಿಜಯಕುಮಾರ ಹತ್ತಿಕಾಳ, ವಿಜಯ ಕುಂಬಾರ, ಅರುಣ ಪಾಟೀಲ, ಪ್ರವೀಣ ಬೋಮಲೆ, ಬಸವರಾಜ ಚಕ್ರಸಾಲಿ, ಸೋಮು ಉಪನಾಳ, ಪೂರ್ಣಾಜಿ ಖರಾಟೆ, ಪ್ರಕಾಶ ಮಾದನೂರ, ರಮೇಶ ಹಾಳತೋಟದ, ಸಂಗಮೇಶ ಬೆಳವಲಕೊಪ್ಪ, ರುದ್ರಪ್ಪ ಉಮಚಗಿ, ಬಸವರಾಜ ಅರಳಿ, ಸಂತೋಷ ಜಾವೂರ, ನಾಗೇಶ ಅಮರಾಪುರ, ಅರುಣ ಮೆಕ್ಕಿ, ಹಿಂದು ಸಂಘಟನೆಗಳ ಕಾರ್ಯಕರ್ತರು, ಪದಾಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts