More

    ಪ್ರವಾಸಿ ತಾಣ ಅಭಿವೃದ್ಧಿಗೆ ಗ್ರಹಣ

    ಜಯತೀರ್ಥ ಪಾಟೀಲ ಕಲಬುರಗಿ
    ಅತಿಥಿ ದೇವೋಭವ ಎಂಬುದು ನಮ್ಮ ಸಂಸ್ಕೃತಿ. ಇದರಿಂದಾಗಿ ಭಾರತದ ಪ್ರವಾಸೋದ್ಯಮ ಕ್ಷೇತ್ರ ಹಿಂದೆಂದಿಗಿಂತಲೂ ಅತ್ಯಂತ ಲಾಭದಾಯಕ ಉದ್ಯಮವಾಗಿ ಬದಲಾಗಿದೆ. ದೇಶದ ಆರ್ಥಿಕತೆ ಸದೃಢಗೊಳಿಸುವಲ್ಲಿ ಪ್ರವಾಸೋದ್ಯಮ ಸಹಕಾರಿ. ಆದರೆ ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಕಲಬುರಗಿ ಜಿಲ್ಲೆ ಇದಕ್ಕೆ ಹೊರತಾಗಿದೆ. ಈ ಭಾಗದಲ್ಲೂ ಅಸಂಖ್ಯ ಪ್ರವಾಸಿ ತಾಣಗಳಿದ್ದರೂ ಅಭಿವೃದ್ಧಿ ಕಾಣದ್ದರಿಂದ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗುತ್ತಿಲ್ಲ.
    ಎಲ್ಲೆಲ್ಲಿ ಏನೇನು?: ನಗರದಲ್ಲಿ ಬಹಮನಿ ಕೋಟೆಯ ಜಾಮಾ ಮಸೀದಿ, ದಾಸೋಹಿ ಶರಣಬಸವೇಶ್ವರ ದೇವಸ್ಥಾನ, ಸೂಫಿ ಸಂತ ಖ್ವಾಜಾ ಬಂದಾ ನವಾಜ್, ಮಳಖೇಡ ಕೋಟೆ, ತೀರ್ಥಂಕರರು, ಟೀಕಾಚಾರ್ಯರು, ಗಾಣಗಾಪುರ ದತ್ತಾತ್ರೇಯ ದೇವಸ್ಥಾನ, ನಾಗಾವಿ, ಸನ್ನತಿ, ಕಾಳಗಿ, ಮರತೂರಿನ ಮಿತಾಕ್ಷರ ಶಾಸನ, ಎತ್ತಪೋತ ನಿಸರ್ಗತಾಣ, ಬುದ್ಧವಿಹಾರ, ಚರ್ಚ್​ ಸೇರಿ ಹತ್ತು ಹಲವು ಐತಿಹಾಸಿಕ, ಪ್ರೇಕ್ಷಣೀಯ ಮತ್ತು ಪೌರಾಣಿಕ/ಧಾರ್ಮಿಕ ತಾಣಗಳಿವೆ. ಆದರೂ ವಿಶ್ವ ಪಾರಂಪರಿಕ ಪಟ್ಟಿಯಿಂದ ಕೈಬಿಟ್ಟು ಹೋಗಿವೆ.
    ಈ ತಾಣಗಳನ್ನು ಅಭಿವೃದ್ಧಿಪಡಿಸುವ ಮೂಲಕ ಪ್ರವಾಸಿಗರನ್ನು ಆಕರ್ಷಿಸುವ ಯಾವ ಪ್ರಯತ್ನವೂ ನಡೆಯುತ್ತಿಲ್ಲ ಎಂಬುದು ಬೇಸರದ ಸಂಗತಿ. ಕಲ್ಯಾಣ ನಾಡಿನಲ್ಲಿ ಎಷ್ಟೊಂದು ಅದ್ಭುತ ಪ್ರವಾಸಿ ತಾಣಗಳಿವೆ ಎಂದು ಈ ಭಾಗದ ಜನಕ್ಕೆ ಗೊತ್ತಿಲ್ಲ. ಗೊತ್ತು ಮಾಡುವ ಕೆಲಸವನ್ನು ಸರ್ಕಾರ, ಪ್ರವಾಸೋದ್ಯಮ ಇಲಾಖೆಯೂ ಮಾಡಿಲ್ಲ.
    ಅರಿವು ಮೂಡಿಸುವ ಕೆಲಸ: ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯ ವಿದ್ಯಾರ್ಥಿಗಳಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳ ಕುರಿತು ಅರಿವು ಮೂಡಿಸುವ ಕೆಲಸ ಆಗಬೇಕಿದೆ. ಪ್ರೇಕ್ಷಣೀಯ ಸ್ಥಳ ಕುರಿತು ಫಲಕ ಹಾಕಬೇಕು. ಪ್ರವಾಸಿ ತಾಣಗಳಲ್ಲಿ ಸಾಂಸ್ಕೃತಿಕ, ಕರಕುಶಲ ಪ್ರದರ್ಶನ, ಸಂಗೀತ ಕಛೇರಿ, ಪಾರಂಪರಿಕ ನಡಿಗೆ, ಬೀದಿ ನಾಟಕ, ಕಾರ್ಯಾಗಾರ, ವಿಚಾರ ಸಂಕಿರಣ, ರಸಪ್ರಶ್ನೆ, ಚರ್ಚಾ ಸ್ಪರ್ಧೆ ಆಯೋಜಿಸುವ ಮೂಲಕ ಪ್ರವಾಸಿಗರನ್ನು ಆಕರ್ಷಿಸಬೇಕು. ಪ್ರವಾಸಿ ತಾಣಗಳ ಮಾಹಿತಿ ಒದಗಿಸಲು ಹೆಲ್ಪ್ ಡೆಸ್ಕ್ ಮಾಡಬೇಕು.

    ಮೂಲಸೌಲಭ್ಯ ಅಗತ್ಯ: ಪ್ರವಾಸಿ ತಾಣಗಳಲ್ಲಿ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸೇರಿ ಅಗತ್ಯ ಮೂಲಸೌಲಭ್ಯ ಒದಗಿಸಲು ಆದ್ಯತೆ ನೀಡಬೇಕು. ಪ್ರವಾಸಿಗರನ್ನು ಆಕರ್ಷಿಸಲು ವಿಶೇಷ ಯೋಜನೆ ರೂಪಿಸಬೇಕು. ಉತ್ತಮ ಭಾಷಾ ಕೌಶಲ (ಬಹುಭಾಷೆ) ಹೊಂದಿರುವ ಅಭ್ಯರ್ಥಿ ಗಳನ್ನು ಮಾರ್ಗದರ್ಶಿಗಳನ್ನಾಗಿ ನೇಮಕ ಮಾಡಬೇಕು. ಈ ಮಾರ್ಗದರ್ಶಿ ಪ್ರೇಕ್ಷಣೀಯ, ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ಹೊಂದಿರಬೇಕು. ಆಯಾ ಭಾಗದ ಹೋಟೆಲ್ಸ್, ಪ್ರವಾಸಿ ಏಜೆನ್ಸಿ, ಉತ್ತಮ ಆಹಾರ ದೊರೆಯುವ ಸ್ಥಳ, ಪ್ರವಾಸ ಯೋಜನೆ ಜ್ಞಾನ ಹೊಂದಿರಬೇಕು.
    ಒಂದು ಮಾಹಿತಿ ಪ್ರಕಾರ ವಿಶ್ವ ಪ್ರವಾಸ ಮತ್ತು ಪ್ರವಾಸೋದ್ಯಮ ಕೌನ್ಸಿಲ್ ಪ್ರಕಾರ ಶೇ.7ಆದಾಯ ಪ್ರವಾಸೋದ್ಯಮದಿಂದ ಸಂಗ್ರಹವಾಗುತ್ತಿದೆ. ಈ ಅನುದಾನ ಮೂಲಕ ಪ್ರವಾಸಿ ತಾಣಗಳ ಅಭಿವೃದ್ದಿ, ಕಾಯಕಲ್ಪಕ್ಕೆ ಸರ್ಕಾರ ಮುಂದಾಗಬೇಕಿದೆ.
    ಹೆಲ್ಪ್ ಡೆಸ್ಕ್ ಸ್ಥಾಪನೆ: ರೈಲು/ಬಸ್ನಿಲ್ದಾಣ ಸೇರಿ ಪ್ರಮುಖ ಸ್ಥಳಗಳಲ್ಲಿ ಮಾಹಿತಿ ಕೇಂದ್ರ, ಪ್ರವಾಸೋದ್ಯಮ ಬ್ಯಾನರ್ ಅಳವಡಿಸಬೇಕು. ಕೃಷಿ ಪ್ರವಾಸೋದ್ಯಮದ ಮೂಲಕ ಹಳ್ಳಿಯ ಸೊಗಡು ಬಿಂಬಿಸುವ ಎಳ್ಳ ಅಮವಾಸೆ, ವೈವಿದ್ಯಮಯ ಆಹಾರ, ಭೋಜನ, ಕವಿ-ಕಲಾವಿದರ ಸಂಗೀತ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕು. ಈ ಮೂಲಕ ಜನರನ್ನು ಆಕರ್ಷಿಸಬಹುದಾಗಿದೆ.
    ಪ್ರಚಾರ, ಪ್ರಸಾರಕ್ಕೆ ಸಂಬಂಧಿಸಿದಂತೆ ಪ್ರವಾಸೋದ್ಯಮ, ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ. ಒಂದಕ್ಕೊಂದು ಸಂಬಂಧಿವಿಲ್ಲದಂತೆ ಇವೆ.
    ಕಲ್ಯಾಣ ನಾಡಿನ ಪ್ರಮುಖ ಕೇಂದ್ರ ಕಲಬುರಗಿಯ ಪ್ರವಾಸಿ ತಾಣಗಳ ಅಭಿವೃದ್ದಿಗೆ ಸರ್ಕಾರ 44.16 ಕೋಟಿ ರೂ. ಖಚರ್ು ಮಾಡಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ. ಆದರೆ ಯಾವ ತಾಣಗಳು ಅಭಿವೃದ್ಧಿಗೊಂಡಿವೆ, ಎಷ್ಟು ಜನರನ್ನು ಆಕರ್ಷಿಸುತ್ತಿದೆ ಎಂಬುದು ಯಕ್ಷಪ್ರಶ್ನೆಯಾಗಿ ಉಳಿದಿದೆ.

    ಅನೇಕ ಪ್ರವಾಸಿ ತಾಣಗಳಲ್ಲಿ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಒತ್ತು ನೀಡಲಾಗಿದೆ. ಈಗಾಗಲೇ ಅನೇಕ ಸ್ಥಳಗಳಲ್ಲಿ ಒದಗಿಸಲಾಗಿದೆ. ಮುಂದಿನ ಸಾಲಿಗಾಗಿ ಕ್ರಿಯಾ ಯೋಜನೆ ರೂಪಿಸಿ ಅನುದಾನ ಕೋರಿ ಸಕರ್ಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ.
    ಪ್ರಭುಲಿಂಗ ತಳಕೇರಿ,
    ಉಪ ನಿದರ್ೇಶಕ, ಪ್ರವಾಸೋದ್ಯಮ ಇಲಾಖೆ ಕಲಬುರಗಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts