More

    ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಕ್ಕೆ ಮನವಿ

    ಚಿತ್ರದುರ್ಗ: ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಹೊಸ ಸಂಘಟನೆಗೆ ಶಕ್ತಿ ತುಂಬಬೇಕಾಗಿದೆ ಎಂದು ಯೂನಿಯನ್ ಆಫ್ ಕರ್ನಾಟಕ ಕ್ವಾರಿ ಆ್ಯಂಡ್ ಸ್ಟೋ ನ್ ಕ್ರಷರ್ ಓನರ್ಸ್‌ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಅಬ್ದುಲ್‌ಮಾಜಿದ್ ಹೇಳಿದರು.
    ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ನಡೆ ದ ಕ್ವಾರಿ ಆ್ಯಂಡ್ ಸ್ಟೋನ್‌ಕ್ರಷರ್ ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಹೊಸ ಸಂಘಟನೆಯನ್ನು ಕಾನೂನಾತ್ಮಕವಾಗಿ ಸಂಘಟಿಸಬೇಕಿದೆ. ಆದ್ದರಿಂದ ಪ್ರತಿ ಜಿಲ್ಲೆಯಲ್ಲೂ ಸಭೆ ನಡೆಸಿ ಅಸೋಸಿಯೇಷನ್ ಬಲಪಡಿಸಬೇಕಿದ್ದು, ಇದಕ್ಕಾಗಿ ಎಲ್ಲರ ಸಹಕಾರದ ಅಗತ್ಯವಿದೆ ಎಂದರು.
    ಅಸೋಸಿಯೇಷನ್ ಸಂಘಟನಾ ಕಾರ್ಯದರ್ಶಿ ಸಿ.ಎಸ್.ಭಾಸ್ಕರ್ ಮಾತನಾಡಿ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದೆ ಮುಂ ದೂಡುತ್ತಾ ಬಂದಿದೆ. ಕ್ರಷರ್,ಕ್ವಾರಿಗೆ ಸಂಬಂಧಿಸಿದಂತೆ ಕಾನೂನು ತಿದ್ದುಪಡಿ ಅಗತ್ಯವಿದೆ. ಬೇಡಿಕೆಗಳ ಈಡೇರಿಕೆಗೆ ಹಾಗೂ ಕಾನೂನಿನ ಅಗತ್ಯ ತಿದ್ದುಪಡಿಗೆ ಒಗ್ಗಟ್ಟಿನ ಹೋರಾಟ ನಡೆಸಬೇಕಿದೆ ಎಂದರು.
    ಯೂನಿಯನ್ ಆಫ್ ಕರ್ನಾಟಕ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್‌ ಅಸೋಸಿಯೇಷನ್ ಅಧ್ಯಕ್ಷ ಡಿ.ಸಿದ್ದರಾಜು ಮಾತನಾಡಿ,ಪ್ರಮುಖ 14 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪ್ರಧಾನ ಕಾರ‌್ಯದರ್ಶಿಗೆ ಮನವಿ ಸಲ್ಲಿಸ ಲಾಗಿದೆ ಎಂದರು.
    ಅಸೋಸಿಯೇಷನ್ ಜಿಲ್ಲಾ ಉಪಾಧ್ಯಕ್ಷ ಎಚ್.ವಾಗೀಶ್ ಮಾತನಾಡಿ,ಸಂಘಟನೆಗೆ ಸಂಬಂಧಿಸಿದಂತೆ ಸಭೆ ಕರೆದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳ ಬೇಕಿದೆ. ಆ ಮೂಲಕ ಹೊಸ ಅಸೋಸಿಯೇಷನ್‌ನ್ನು ಬಲಪಡಿಸಬೇಕಿದೆ ಎಂದರು.
    ಉಸ್ಮಾನ್‌ಘನಿ ಖಾಜಿ,ವಿಜಯ ಶ್ರೀ ಮಾತನಾಡಿದರು. ಸ್ಟೇಟ್ ಅಸೋಷಿಯೇಷನ್ ಪ್ರಧಾನ ಕಾರ್ಯದರ್ಶಿ ಡಿ.ಆರ್.ಮಹೇಶ್, ಶಿವಮೊಗ್ಗ ಮಂಜಣ್ಣ,ವೆಂಕಟೇಶ್,ಮಲ್ಲಿಕಾರ್ಜುನ್,ಜಿ.ಬಿ.ಶೇಖರ್,ಸಂದೀಪ್,ಅಭಿಷೇಕ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts