More

    ಪ್ರಬಂಧ ಸ್ಪರ್ಧೆಗೆ ವ್ಯಾಪಕ ಸ್ಪಂದನೆ

    ಬೆಳಗಾವಿ: ರಾಜ್ಯದ ನಂಬರ್ 1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಸುದ್ದಿ ವಾಹಿನಿ ಮತ್ತು ಕೆಎಲ್ಇ ಸಂಸ್ಥೆಯ ಆರ್‌ಎಲ್‌ಎಸ್ ಕಾಲೇಜು ಸಹಯೋಗದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ ಹಿನ್ನೆಲೆಯಲ್ಲಿ ಶನಿವಾರ ಆಯೋಜಿಸಿದ್ದ ಅಂತರ ಕಾಲೇಜು ಕನ್ನಡ ಪ್ರಬಂಧ ಸ್ಪರ್ಧೆಗೆ ವ್ಯಾಪಕ ಸ್ಪಂದನೆ ವ್ಯಕ್ತವಾಯಿತು.

    ಆರ್‌ಎಲ್‌ಎಸ್ ಮಹಾವಿದ್ಯಾಲಯ, ಕೆಎಲ್‌ಎಸ್ ಗೋಗಟೆ ಮಹಾವಿದ್ಯಾಲಯ, ಜ್ಯೋತಿ ಕಾಲೇಜು, ಸಂಗೊಳ್ಳಿ ರಾಯಣ್ಣ ಘಟಕ ಮಹಾವಿದ್ಯಾಲಯ, ಬೆನನ್ ಸ್ಮಿತ್, ಸರ್ಕಾರ ಪದವಿ ಮಹಾವಿದ್ಯಾಲಯ ಹಾಗೂ ಸರ್ಕಾರಿ ಶಿಕ್ಷಕರ ತರಬೇತಿ ಕೇಂದ್ರದ ಬಿಇಡಿ ವಿದ್ಯಾರ್ಥಿಗಳು ಸೇರಿದಂತೆ ನಗರದ ಪ್ರತಿಷ್ಠಿತ ಮಹಾವಿದ್ಯಾಲಯಗಳ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು, ಮೆರುಗು ತಂದರು.
    ದೂರವಾಣಿ ಮೂಲಕ ಗುರುವಾರ ಹಾಗೂ ಶುಕ್ರವಾರವೇ ಸ್ಪರ್ಧೆಗೆ ಹೆಸರು ನೋಂದಾಯಿಸಿದ ವಿದ್ಯಾರ್ಥಿಗಳು, ಶನಿವಾರದ ತರಗತಿ ಮುಗಿಸಿ, 12:30ರ ನಂತರ ಕೆಎಲ್ಇ ಸಂಸ್ಥೆಯ ಆರ್‌ಎಲ್‌ಎಸ್ ಕಾಲೇಜಿನತ್ತ ಹೆಜ್ಜೆ ಹಾಕಿದರು. ಇನ್ನು ಸ್ಥಳದಲ್ಲೇ ನೋಂದಣಿ ಮಾಡಿಸುವುದಕ್ಕಾಗಿ ನೂರಾರು ವಿದ್ಯಾರ್ಥಿಗಳು ಬೆಳಗ್ಗೆ 11ಗಂಟೆಯಿಂದಲೇ ಆಗಮಿಸಿ, ಹೆಸರು ನೋಂದಾಯಿಸುವುದ ಮೂಲಕ ಉತ್ಸುಕತೆ ತೋರಿದರು.
    ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಎಲ್ಲ ಸ್ಪರ್ಧಾಳುಗಳಿಗೆ ನೋಂದಣಿ ಸಂಖ್ಯೆ ನೀಡಿ, ಹೆಸರು ದಾಖಲಿಸದೆ ಸಂಖ್ಯೆ ಮಾತ್ರ ನಮೂದಿಸಿ, ಪ್ರಬಂಧ ಬರೆದರು. ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮಾಚರಣೆಯಲ್ಲಿರುವ ‘ಭಾರತ ಸ್ವಾತಂತ್ರೊೃೀತ್ಸವ, ಮುಂದಿನ 25 ವರ್ಷಗಳಲ್ಲಿ ಸಾಧಿಸಬೇಕಿರುವುದೇನು? ಇದರಲ್ಲಿ ಯುವ ಜನರ ಪಾತ್ರ ಏನು’? ಎಂಬುದರ ಕುರಿತು ತಮ್ಮದೇ ಕಲ್ಪನೆಯ ಭವಿಷ್ಯದ ಭಾರತವನ್ನು ಅಕ್ಷರ ರೂಪಕ್ಕಿಳಿಸಿದರು.

    ಕಾಲೇಜಿನ ಉಪನ್ಯಾಸಕರಾದ ಸಹಾಯಕ ಪ್ರಾಧ್ಯಾಪಕ ಎಚ್.ಎನ್.ಬನ್ನೂರ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಶಿವಾನಂದ ಬುಲಬುಲೆ, ಎಸ್.ವಿ.ತಾರದಾಳೆ, ಎಂ.ಹುಣಸೆಬೀಜ, ವೀಣಾ ಕೊನ್ನೂರ, ಕೆ.ಎಸ್.ಘಿವಾರಿ, ಲಕ್ಷ್ಮೀ ಎಚ್., ಪವನಕುಮಾರ್, ಅಜಿತ ಸುತಾರ, ಪಿ.ಜೆ.ಸಾಮಜೆ, ಐ.ವಿ.ಮೆನಸೆ, ಎಸ್.ಬಿ.ಬಿರಾದಾರ, ಅರ್ಚನಾ ಮಗದುಮ್ಮ, ವಿಜಯವಾಣಿ ಸಿಬ್ಬಂದಿ ಮಲ್ಲಿಕಾರ್ಜುನ ಕಂಠಿ, ಅರುಣ ಯಳ್ಳೂರಕರ್, ಈರಯ್ಯ ಪತ್ರಿ, ದೀಪಕ ಬಾಂದೇಕರ್, ಅನಿಲಸಿಂಗ್ ಕುರಣಿ ಸ್ಪರ್ಧೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.

    ಕಾಲೇಜು ಪ್ರಾಚಾರ್ಯೆ ಜ್ಯೋತಿ ಕವಳೇಕರ ಮಾತನಾಡಿ, ವಸ್ತುನಿಷ್ಠ ಸುದ್ದಿ ಪ್ರಕಟಣೆಯಿಂದಾಗಿ ಕನ್ನಡದ ನಂಬರ್ 1 ಪಟ್ಟಕ್ಕೇರಿರುವ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ವತಿಯಿಂದ ತಮ್ಮ ಸಂಸ್ಥೆಯಲ್ಲಿ ಪ್ರಬಂಧ ಸ್ಪರ್ಧೆ ಆಯೋಜಿಸಿರುವುದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

    ಆ.13ರಂದು ಫಲಿತಾಂಶ ಪ್ರಕಟ: ಸ್ಪರ್ಧಾಳುಗಳನ್ನು ಉದ್ದೇಶಿಸಿ ವಿಜಯವಾಣಿ ಸ್ಥಾನಿಕ ಸಂಪಾದಕ ರಾಯಣ್ಣ ಆರ್.ಸಿ.ಮಾತನಾಡಿ, ವಿದ್ಯಾರ್ಥಿಗಳು ಬರೆದ ಎಲ್ಲ ಪ್ರಬಂಧಗಳನ್ನು ಹಿರಿಯ ಉಪನ್ಯಾಸಕರಿಂದ ಮೌಲ್ಯಮಾಪನ ಮಾಡಲಾಗುತ್ತದೆ. ಆ.13ರಂದು ಸ್ಪರ್ಧೆಯ ಫಲಿತಾಂಶವನ್ನು ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು. ಪ್ರಥಮ ಬಹುಮಾನ 5 ಸಾವಿರ ರೂ., ಎರಡನೇ ಬಹುಮಾನ 3 ಸಾವಿರ ರೂ., ಹಾಗೂ ತೃತೀಯ ಬಹುಮಾನ 2 ಸಾವಿರ ರೂ. ಬಹುಮಾನ ಇದ್ದು, ಪತ್ರಿಕೆಯಲ್ಲಿ ತಿಳಿಸುವ ವಿಳಾಸಕ್ಕೆ ಆಗಮಿಸಿ ಬಹುಮಾನ ಸ್ವೀಕರಿಸಬೇಕು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts