More

    ಪ್ರತಿ ಮನೆಯಲ್ಲಿ ರಾಷ್ಟ್ರಧ್ವಜ ಹಾರಿಸಿ

    ಗುರುಮಠಕಲ್: ದೇಶಕ್ಕೆ ಸ್ವಾತಂತ್ರೃ ಲಭಿಸಿ 75 ವರ್ಷದ ಅಮೃತ ಮಹೋತ್ಸವ ಸಂಭ್ರಮದ ಕಾರಣ ಪ್ರತಿ ಮನೆ ಮನೆಯಲ್ಲಿ 13ರಿಂದ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಗೌರವ ಸಲ್ಲಿಸಬೇಕು ಎಂದು ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ ಹೇಳಿದರು.

    ಪಟ್ಟಣದ ಪುರಸಭೆ ಆವರಣದಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಧ್ವಜ ಹಾರಿಸುವ ಮೂಲಕ ದೇಶವಾಸಿಗಳ ಹೃದಯದಲ್ಲಿ ದೇಶಭಕ್ತಿಯ ಭಾವನೆ ಮೂಡಿಸುವ ಮೂಲ ಉದ್ದೇಶ ಇದಾಗಿದೆ ಎಂದರು.

    ಪುರಸಭೆ ಮುಖ್ಯಾಧಿಕಾರಿ ಭಾರತಿ, ಮಾತನಾಡಿ, ಪ್ರತಿ ಮನೆಯ ಮೇಲೆ ಧ್ವಜ ಹಾರಿಸಲು ಜಿಲ್ಲಾಧಿಕಾರಿ ಕಚೇರಿಯಿಂದ 2500 ಧ್ವಜ ತರಲಾಗಿದ್ದು, ಪ್ರತಿ ಧ್ವಜಕ್ಕೆ 22 ರೂ. ಪಾವತಿಸಿ ಖರೀದಿಸಬೇಕು. ಇದಕ್ಕಾಗಿ ಪ್ರತ್ಯೇಕ ಕೌಂಟರ್ ಕೂಡ ಮಾಡಲಾಗಿದೆ ಎಂದರು.

    ಪುರಸಭೆಯಿಂದ ಆರಂಭಗೊಂಡ ಜಾಥಾ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ನಗರೇಶ್ವರ ದೇವಸ್ಥಾನ ಮಾರ್ಗವಾಗಿ ನಡೆಯಿತು. ಸೈಯ್ಯದ್ ಖಾಜಾ ಮೈನೊದ್ದೀನ್, ಆಶನ್ನ ಬುದ್ಧ, ಅಶೋಕ ಕಲಾಲ್, ಶಿರಾಜ ಚಿಂತಕುಂಟಿ, ಕೃಷ್ಣ, ಬಾಬು ತಲಾರಿ, ಬಾಲಪ್ಪ ದಾಸರಿ, ಅನ್ವರ್ ಅಹ್ಮದ್, ಚಂದುಲಾಲ್ ಚೌಧರಿ, ಲಾಲಪ್ಪ ಕಂದೂರ, ವೆಂಕಟಪ್ಪ ಮನ್ನೆ, ಅಂಬದಾಸ ಜಿತ್ರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts