More

    ಪ್ರತಿಯೊಬ್ಬರಿಗೂ ಭಾಷೆ ಮೇಲೆ ಪ್ರೀತಿ ಇರಲಿ

    ಯಾದಗಿರಿ: ಗಿರಿಜಿಲ್ಲೆಯಾದ್ಯಂತ ಬುಧವಾರ ಕನ್ನಡ ರಾಜ್ಯೋತ್ಸವ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
    ನಗರದ ಕರವೇ ಕಚೇರಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ ಮಾತನಾಡಿ, ರಾಜ್ಯದಲ್ಲಿ ಹಲವು ಭಾಷಿಕರು ನೆಲೆಸಿದ್ದಾರೆ. ಅವರು ಭಾಷಾ ಸಾಮರಸ್ಯ ಅಳವಡಿಸಿಕೊಳ್ಳಬೇಕು. ಪ್ರತಿಯೊಬ್ಬರೂ ತಮ್ಮ ಭಾಷೆಯ ಮೇಲೆ ಪ್ರೀತಿ ಇರಬೇಕು, ಆದರೆ ನಾಡಿನ ಭಾಷೆಗೂ ಕೂಡಾ ಗೌರವ ಹೊಂದಿರಬೇಕು ಎಂದರು.

    ನಗರದ ಹೃದಯ ಭಾಗವಾಗಿರುವ ಐತಿಹಾಸಿಕ ಕೋಟೆ, ಸೇರಿ ಪ್ರಮುಖ ವೃತ್ತಗಳಲ್ಲಿ ಧ್ವಜಾರೋಹಣ ಮಾಡುವುದು ನಮಗೆ ಹೆಮ್ಮೆಯ ಸಂಗತಿ. ಕನ್ನಡ ರಾಜ್ಯೋತ್ಸವವನ್ನು ನಮ್ಮ ಕರವೇ ಕಾರ್ಯಕರ್ತರು ಜಿಲ್ಲೆಯ ಪ್ರತಿಯೊಂದು ಹಳ್ಳಿಯಲ್ಲಿ ಆಚರಿಸಿದ್ದಾರೆ ಎಂದು ಹೇಳಿದರು.

    ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಮರೆಪ್ಪ ನಾಯಕ ಮಗದಂಪೂರ, ಮಲ್ಲು ಮಾಳಿಕೇರಿ, ಹಣಮಂತ ನಾಯಕ ಖಾನಳ್ಳಿ, ವಿಶ್ವರಾಧ್ಯ ದಿಮ್ಮೆ, ಅಂಬ್ರೇಶ ಹತ್ತಿಮನಿ, ಸಾಹೇಬ್ಗೌಡ ನಾಯಕ, ಸಿದ್ದಪ್ಪ ಕೂಯಿಲೂರು, ಯಮನಯ್ಯ ಗುತ್ತೆದಾರ, ಭೀಮರಾಯ ರಾಮಸಮುದ್ರ, ನಾಗು ತಾಂಡೂಲ್ಕರ್, ಅನೀಲ ದಾಸನಕೇರಿ, ಕಾಶೀನಾಥ ನಾನೇಕ, ಮೌನೇಶ ಮಾದ್ವಾರ್, ರವಿಕುಮಾರ ತೇಲ್ಗೂರು, ಸುರೇಶ ತಾತಳಗೇರಾ, ಚನ್ನು ಹೊನೆಗೇರಾ,ಅನೀಲ ಹಾಲಗೇರಿ, ಮಲ್ಲು ಗೌಡಗೇರ, ಮರೆಪ್ಪನಾಯಕ ಕಡ್ಡಿ ಇದ್ದರು.

    ತಾತಳಗೇರಾ ವರದಿ: ಗುರುಮಠಕಲ್ ತಾಲೂಕಿನ ತಾತಳಗೇರಾ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅದ್ದೂರಿಯಿಂದ ಆಚರಿಸಲಾಯಿತು. 111 ಅಡಿ ಉದ್ದ ಕನ್ನಡ ಧ್ವಜ ಮೆರವಣಿಗೆಗೆ ಸಂಭ್ರಮದಿಂದ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts