More

    ಪ್ರತಿಯೊಂದು ರಂಗದಲ್ಲೂ ಹೆಣ್ಣು ಮಕ್ಕಳ ಸಾಧನೆ ಅಪಾರ

    ಚಿತ್ರದುರ್ಗ: ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಕಾರ‌್ಯನಿರ್ವಹಿಸುವ ಮೂಲಕ ಹೆಣ್ಣು ಮಕ್ಕಳಿಂದು ಸಮಾಜದ ಮುಂಚೂಣಿ ಸ್ಥಾನದಲ್ಲಿ ತಮ್ಮನ್ನು ಗು ರುತಿಸಿಕೊಂಡಿದ್ದಾರೆ ಎಂದು ಎಂಎಲ್‌ಸಿ ಕೆ.ಎಸ್.ನವೀನ್ ಹೇಳಿದರು.
    ನಗರದ ಶ್ರೀ ಕಬೀರಾನಂದಾಶ್ರಮದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಹಾಗೂ ಸುಕನ್ಯಾ ಸಮೃ ದ್ಧಿ ಯೋಜನೆ ಪಾಸ್‌ಬುಕ್ ವಿತರಣೆ ಕಾರ‌್ಯಕ್ರಮದಲ್ಲಿ ಮಾತನಾಡಿದ ಅವರು, ಆಶಾ,ಅಂಗನವಾಡಿ ಕಾರ್ಯಕರ್ತೆಯರು,ಶಿಕ್ಷಕಿ,ನರ್ಸ್, ಕಂಡಕ್ಟರ್,ಪೊಲೀಸ್,ಸೇನೆ,ವಿಜ್ಞಾನಿ,ಪೈಲೆಟ್,ಕೈಗಾರಿಕೋದ್ಯಮಿ,ಆಡಳಿತ,ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯ ಲ್ಲಿರುವ ಮಹಿಳೆಯರ ಸಾಧನೆ ಅನನ್ಯ.
    ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಿ ಸಮಾಜದಲ್ಲಿ ಸಮಾನವಾಗಿ ಅವರು ನಿಲ್ಲುವಂತೆ ಮಾಡಬೇಕು. ಗೌರವದ ಬದುಕಿಗೆ,ದೌರ್ಜನ್ಯದ ವಿ ರುದ್ಧ ಧ್ವನಿ ಎತ್ತಲು ಶಕ್ತಿ ನೀಡಬೇಕು. ಮಾನಸಿಕವಾಗಿ ಸದೃಢರಾಗಿರುವಂತೆ ಅವರನ್ನು ಬೆಳೆಸ ಬೇಕಿದೆ ಎಂದರು. ಹೆಣ್ಣು ಆದಿಶಕ್ತಿ,ಜಗತ್ತಿ ಗೆ ಸಂಕಟ ಬಂದಾಗ ಆದಿಶಕ್ತಿ ನಮ್ಮನ್ನು ಕಾಪಾಡುತ್ತಾಳೆ ಎಂಬ ಭಕ್ತಿ,ಭಾವನೆ ನಮ್ಮಲ್ಲಿದೆ. ಒನಕೆ ಓಬವ್ವ,ಕಿತ್ತೂರು ರಾಣಿ ಚೆನ್ನಮ್ಮ,ರಾಣಿ ಅ ಬ್ಬಕ್ಕ, ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಮತ್ತಿತರ ವೀರವನಿತೆಯ ನಾಡು ನಮ್ಮದೆಂದರು.
    ಸಾನ್ನಿಧ್ಯ ವಹಿಸಿದ್ದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಅವರು ಅವರು ಅಶೀರ್ವಚನ ನೀಡಿ,ಹೆಣ್ಣು ಮಕ್ಕಳು ನಮಗೆ ಭಾರವಲ್ಲ,ಅವರು ನಮಗೆ ಮಾರ್ಗದರ್ಶಕರು.ಮಮತೆ, ಕರುಣೆ ಹಾಗೂ ಪ್ರೀತಿಯಿಂದ ಹೆಣ್ಣುಮಕ್ಕಳು ಬೆಳಸಿದರೆ ಅವರು ಸಮಾಜ ಕಣ್ಣಾಗುತ್ತಾರೆ. ಪ್ರ ಮುಖ ನದಿಗಳಿಗೆ ಅವರ ಹೆಸರಿದೆ. ಹೆಣ್ಣು ಮಕ್ಕಳಿಲ್ಲದೆ ಸಮಾಜಕ್ಕೆ ಅಸ್ತಿತ್ವವೇ ಇಲ್ಲ ಎಂದರು. ಬಾಲ ನ್ಯಾಯ ಮಂಡಳಿ ಸದಸ್ಯೆ ಸುಮನಾ ಎಸ್.ಅಂಗಡಿ ವಿಶೇಷ ಉಪನ್ಯಾಸ ನೀಡಿದರು. ಎಎಸ್‌ಪಿ ಎಚ್.ಜೆ. ಕುಮಾರಸ್ವಾಮಿ ಮಾತನಾಡಿದರು.
    ಪ್ರಶಸ್ತಿ ಪ್ರದಾನ
    ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಹೊಯ್ಸಳ, ಕೆಳದಿ ಚೆನ್ನಮ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಗೌರವಿಸಲಾಯಿತು. ವಿ ದ್ಯಾರ್ಥಿಗಳಾದ ಎಚ್.ಎಸ್.ಜಯಂತ್,ಕೆ.ಸಿ.ಪೃಥ್ವಿ, ಲವ.ಟಿ.ವಡಕಲ್,ಎಸ್.ಬಿ.ಸಿಂಧು,ಜಿ.ಆರ್.ರಮ್ಯಾ,ಮೊಹಮ್ಮದ್‌ಸಫ್ವಾನ್‌ಖಾ ನ್,ಕೆಪಿಎಂ ಗುರುದೇವ ಹಾಗೂ ಪಿ.ಪದ್ಮಾವತಿ ಅವರಿಗೆ ತಲಾ ರೂ.10 ಸಾವಿರ ನಗದು ಪುರಸ್ಕಾರ ಪ್ರದಾನ ಮಾಡಿ ಗೌರವಿಸಲಾಯಿತು.
    ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆ ತೋರಿದ ವಿದ್ಯಾರ್ಥಿನಿಯರಾದ ಎಸ್.ಪಿ.ದಯಾನಿಧಿ, ಎಸ್.ಸಾಯಿಸಂಕೀರ್ತ ನಾ,ರಕ್ಷಾ ಟಿ.ಬೆಲಗೂರ್, ಜಿ.ಸಹನಾ ಹಾಗೂ ಎನ್.ಉಷಾ ಅವರನ್ನು ಸನ್ಮಾನಿಸಲಾಯಿತು. ಸುಕನ್ಯಾ ಸಮೃದ್ಧಿ ಯೋಜನೆ ಫಲಾನುಭವಿ ಗಳಿಗೆ ಅಂಚೆ ಪಾಸ್‌ಬುಕ್ ಹಾಗೂ ಯೋಜನೆ ಮಂಜೂರಾತಿ ಪತ್ರ ವಿತರಿಸಲಾಯಿತು.
    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್ ಸ್ವಾಗತಿಸಿದರು. ತಹಸೀಲ್ದಾರ್ ಡಾ.ನಾಗ ವೇಣಿ,ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹರೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕಿ ಪವಿತ್ರಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ಸವಿತಾ,ಶಿಶು ಅಭಿವೃದ್ಧಿ ಅಧಿಕಾರಿಗಳಾದ ಎನ್.ಸುಧಾ, ವಿ.ಮಂಜುಳಾ ಮತ್ತಿರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts