More

    ಪ್ರತಿಭೆ ಹೊರತರಲು ವೇದಿಕೆ ಅಗತ್ಯ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ಯುವಕರಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರತರಲು ವೇದಿಕೆಗಳು ಅಗತ್ಯ. ಗ್ರಾಮೀಣ ಭಾಗದಲ್ಲಿ ಅದೆಷ್ಟೋ ಪ್ರತಿಭೆಗಳು ಇವೆ. ಇವರಿಗಾಗಿ ನಾವು ಬಹಳಷ್ಟು ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರೋತ್ಸಾಹಿಸುತ್ತಿದ್ದೇವೆ ಎಂದು ಶ್ರೀಗಾಯತ್ರಿ ತಪೋಭೂಮಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿನಾಯಕ ಆಕಳವಾಡಿ ತಿಳಿಸಿದರು.

    ಆರ್ಟ್ ಆಫ್ ಲಿವಿಂಗ್​ನ ವ್ಯಕ್ತಿವಿಕಾಸ ಕೇಂದ್ರ, ಶ್ರೀ ಗಾಯತ್ರಿ ತಪೋಭೂಮಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಶಿಗ್ಗಾಂವಿ ತಾಲೂಕಿನ ಮುತ್ತಳ್ಳಿಯ ಗಾಯತ್ರಿ ನಗರದ ಶ್ರೀ ಗಾಯತ್ರಿ ತಪೋಭೂಮಿಯಲ್ಲಿ ಭಾನುವಾರ ಏರ್ಪಡಿಸಿದ್ದ ಯುವ ನಾಯಕತ್ವ ತರಬೇತಿ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.

    ಮಾತನಾಡುವ ಕಲೆ, ಸಂಸ್ಕೃತಿ, ಸಂಸ್ಕಾರಗಳು ಯುವಕರಿಗೆ ಈಗ ಅತ್ಯಗತ್ಯ. ಪುಸ್ತಕವನ್ನೇ ಮಸ್ತಕದಲ್ಲಿ ತುಂಬಿಕೊಂಡಿದ್ದರೂ ಪ್ರಸ್ತುತಪಡಿಸುವ ಕಲೆ ಗೊತ್ತಿರಬೇಕು. ಇವುಗಳಿಗೆ ವೇದಿಕೆಗಳು ಇವೆ. ಅವುಗಳನ್ನು ಯುವಕರು ಬಳಸಿಕೊಂಡು ದೇಶದ ಏಳ್ಗೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು. ಮೇ ತಿಂಗಳಲ್ಲಿ ಹುಬ್ಬಳ್ಳಿಯ ವಾಸವಿ ಮಹಲ್​ನಲ್ಲಿ ವ್ಯಕ್ತಿತ್ವ ವಿಕಸನ ಶಿಬಿರವನ್ನು ಆಯೋಜಿಸಲಾಗುವುದು ಎಂದು ಇದೇ ವೇಳೆ ಪ್ರಕಟಿಸಿದರು.

    ಆರ್ಟ್ ಆಫ್ ಲಿವಿಂಗ್​ನ ಹಿರಿಯ ಶಿಕ್ಷಕ ಬಿ.ಎಂ. ಪಾಟೀಲ ಮಾತನಾಡಿ, ಯುವಕರು ಧೈರ್ಯದಿಂದ ಮುನ್ನುಗ್ಗಬೇಕು. ತಾಂತ್ರಿಕ ಜಗತ್ತಿನಲ್ಲಿ ವಿಪುಲ ಅವಕಾಶಗಳಿವೆ. ಬಳಸಿಕೊಳ್ಳುವ ಕಲೆ ಕಲಿತುಕೊಳ್ಳಬೇಕು. ನಾಯಕರಾಗಿ ಹೊರಹೊಮ್ಮಬೇಕು ಎಂದು ತಿಳಿವಳಿಕೆ ನೀಡಿದರು.

    ವಾರದವರೆಗೆ ನಡೆದ ಶಿಬಿರದಲ್ಲಿ 50ಕ್ಕೂ ಹೆಚ್ಚು ಯುವಕರು ಭಾಗವಹಿಸಿದ್ದರು. ಶಿಬಿರಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಟ್ರಸ್ಟ್ ಉಪಾಧ್ಯಕ್ಷ ಅಶೋಕ ಹರಪನಹಳ್ಳಿ, ಆರ್ಟ್ ಆಫ್ ಲಿವಿಂಗ್​ನ ಹಿರಿಯ ಶಿಕ್ಷಕ ರಾಜೇಂದ್ರ ಕುಲಕರ್ಣಿ, ಮೆರಿಟ್ಯೂಡ್ ಸ್ಕಿಲ್ ಡೆವೆಲಪ್​ವೆುಂಟ್ ಪ್ರೖೆ.ಲಿ. ಮುಖ್ಯಸ್ಥ ಮೋಹನರಾಜ ಇಲ್ಲೂರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts