More

    ಈ ವಾರ ಒಟ್ಟು ಮೂರು ಎಲಿಮಿನೇಶನ್..! ಬಿಗ್​ ಮನೆಯಲ್ಲಿ ಟ್ವಿಸ್ಟ್​​ ಮೇಲೆ ಟ್ವಿಸ್ಟ್; ಹೊರ ಬರುತ್ತಿರುವ ಸ್ಪರ್ಧಿಗಳು ಇವರೇ..!

    ಕಿಚ್ಚ ಸುದೀಪ್​ ವಾರಾಂತ್ಯದಲ್ಲಿ ನೀಡಿರುವ ಸುಳಿವಿನ ಪ್ರಕಾರ ಈ ವಾರ ಮಿಡ್ ವೀಕ್ ಎಲಿಮಿನೇಶನ್ ಇರುವುದು ಪಕ್ಕಾ. ಈ ಹಿಂದಿನ ಸೀಸನ್ ನಲ್ಲಿ ಕೂಡಾ ಮಿಡ್ ವೀಕ್ ಎಲಿಮಿನೇಶನ್ ನಡೆದಿದೆ. ಆದರೆ ಈ ಬಾರಿ ಮಿಡ್ ವೀಕ್ ನಲ್ಲಿ ಒಬ್ಬರಲ್ಲ ಇಬ್ಬರು ಮನೆಯಿಂದ ಹೊರ ನಡೆಯುತ್ತಾರೆ ಎಂದು ಹೇಳಲಾಗುತ್ತಿದೆ.

    ವಾರದ ಮಧ್ಯದಲ್ಲಿ ಮನೆಯಿಂದ ಹೊರ ಬಂದರೆ ಮತ್ತೆ ಆರು ಮಂದಿ ಉಳಿದುಕೊಳ್ಳುತ್ತಾರೆ. ಇವರಲ್ಲಿ ಒಬ್ಬರು ವಾರಾಂತ್ಯದಲ್ಲಿ ಮನೆಯಿಂದ ಎಲಿಮಿನೆಟ್ ಆಗುತ್ತಾರೆ. ಆಗ ಐದು ಮಂದಿ ಫಿನಾಲೆ ವಾರ ತಲುಪುತ್ತಾರೆ.

    ಲಿಮಿನೆಟ್ ಆಗುವವರು ಯಾರು ಎಂದು ನೋಡುವುದಾದರೆ ನಮ್ರತಾ ಗೌಡ, ತುಕಾಲಿ ಸಂತು ಮತ್ತು ತನಿಷಾ ಹೆಸರು ಕೇಳಿ ಬರುತ್ತಿದೆ. ಉಳಿದ ಸ್ಪರ್ಧಿಗಳನ್ನು ಹೋಲಿಸಿ ನೋಡಿದರೆ ಇವರಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಿಗುವ ಬೆಂಬಲ ಕೂಡಾ ಕಡಿಮೆ ಎಂದು ಹೇಳಲಾಗುತ್ತಿದೆ.

    ಕಳೆದ ವಾರವೂ ಎಲಿಮಿನೇಶನ್ ಇರದ ಕಾರಣ ಮನೆಯೊಳಗೆ ಇನ್ನೂ 8 ಮಂದಿ ಉಳಿದುಕೊಂಡಿದ್ದಾರೆ. ದಿನೇ ದಿನೇ ಎಲ್ಲಾ ಆಟಗಾರರ ಫ್ಯಾನ್​ ಬೇಸ್​​ನಲ್ಲಿಯೂ ಸಾಕಷ್ಟು ಬದಲಾವಣೆಗಳಾಗುತ್ತಲೇ ಇವೆ.

    ಫಿನಾಲೆ ಹತ್ತಿರ ಬರುತ್ತಿದ್ದಂತೆಯೇ ಈ ಬಾರಿಯ ಬಿಗ್​​​ಬಾಸ್​​​​ನಲ್ಲಿ ಯಾರು ಎಲಿಮಿನೇಟ್​​​ ಆಗ್ಬೇಕು ಅನ್ನೋದ್ರ ಕುರಿತಂತೆ ಸೋಷಿಯಲ್​ ಮೀಡಿಯಾದಲ್ಲಿ ಹೆಚ್ಚಿನ ಚರ್ಚೆಗಳು ಪ್ರಾರಂಭವಾಗಿದೆ. ಯಾರು ಎಲಿಮಿನೇಟ್​​ ಆಗಲಿದ್ದಾರೆ? ಈ ಬಾರಿ ಥ್ರಿಬಲ್​ ಎಲಿಮಿನೇಷನ್​​​ ಇರಲಿದ್ಯಾ ಎಂಬ ಚರ್ಚೆಗಳು ಒಂದೆಡೆ ನಡೆಯುತ್ತಿದ್ರೆ, ಮತ್ತೊಂದೆಡೆ ವಿನ್ನರ್​ ಯಾರಾಗ್ತಾರೆ ಎಂಬ ಪ್ರಶ್ನೆಗಳೂ ಹುಟ್ಟಿಕೊಂಡಿವೆ.

    ಒಟ್ಟಾರೆಯಾಗಿ ಈ ವಾರ ತುಕಾಲಿ, ತನೀಷಾ ಮತ್ತು ನಮ್ರತಾ ಔಟ್​​ ಆಗಲಿದ್ದಾರೆಂಬ ಕೂಗೇ ಹೆಚ್ಚಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts