More

    ಪ್ರತಿಭೆಗೆ ಪ್ರೋತ್ಸಾಹವೇ ಸಾಧನೆ ಮೆಟ್ಟಿಲು


    ಕಲಬುರಗಿ: ಓದಿನಲ್ಲಿ ಕೊಂಚ ಹಿಂದಿರುವ ಮಕ್ಕಳನ್ನು ದಡ್ಡರನ್ನಬೇಡಿ. ಅವರಲ್ಲೂ ಪ್ರತಿಭೆ ಇರುತ್ತದೆ. ಪ್ರೋತ್ಸಾಹ ನೀಡಿದರೆ ದಡ್ಡ ವಿದ್ಯಾರ್ಥಿಯೂ ಹೊಸದನ್ನು ಆವಿಷ್ಕಾರ ಮಾಡಲು ಸಾಧ್ಯ ಎಂದು ತೊನಸನಳ್ಳಿಯ ಶ್ರೀ ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯ ಸ್ವಾಮೀಜಿ ನುಡಿದರು.
    ಕಾಯಕ ಕಾಲೇಜಿನ ಕ್ಯಾಂಪಸ್ನಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಕಾಯಕ ಫೌಂಡೇಷನ್ ಪ್ರಾಥಮಿಕ ಮತ್ತು ವಸತಿ ಪ್ರೌಢಶಾಲೆ ಹಾಗೂ ವಿಜ್ಞಾನ-ವಾಣಿಜ್ಯ ಕಾಲೇಜಿನ ವಾರ್ಷಿಕೋತ್ಸವ, ಕಾಯಕ ಸಂಭ್ರಮ-11 ಮತ್ತು ಕಾಯಕ ಯೋಗಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಕಾಯಕ ಫೌಂಡೇಷನ್ ಸಮೂಹ ಶಿಕ್ಷಣ ಸಂಸ್ಥೆಗಳ ಆರಂಭಕ್ಕೆ ಮಾಜಿ ಶಾಸಕ ದಿ. ತೇಜಪ್ಪಗೌಡ ಪಾಟೀಲ್ ಪತ್ನಿ ಲಿಂಗೈಕ್ಯ ಶಾಂತಾದೇವಿ ಪಾಟೀಲ್ ಕಾರಣ. ತಾಯಿ ಮೇಲಿರುವ ಪ್ರೀತಿಯಿಂದ ಶಿವರಾಜ ಪಾಟೀಲ್ ಸಹೋದರರು ಈ ಸಂಸ್ಥೆ ಕಟ್ಟಿ ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಕಾಯಕ-ದಾಸೋಹ ಸೂತ್ರ ಪಾಲಿಸಿಕೊಂಡು ಬರುತ್ತಿದ್ದಾರೆ ಎಂದು ಶ್ಲಾಘಿಸಿದರು.
    ಸಪ್ನಾರಡ್ಡಿ ಪಾಟೀಲ್ ಸ್ವಾಗತಿಸಿದರು. ಕಾಯಕ ಫೌಂಡೇಷನ್ ಸಂಸ್ಥಾಪಕ ಶಿವರಾಜ ಟಿ.ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಸಂಸ್ಥೆ ಕಾನೂನು ಸಲಹೆಗಾರರಾದ ಬಸವರಾಜ ಬಿರಾದಾರ ಸೊನ್ನ, ವಾಸ್ತುಶಿಲ್ಪಿ ಸುಮಾ ಬೆಂಗಳೂರು, ಕಾಲೇಜಿನ ಪ್ರಾಚಾರ್ಯ ಗುರುಬಸಯ್ಯ ಸಾಲಿಮಠ, ಹೈಸ್ಕೂಲ್ ಮತ್ತು ಪ್ರಾಥಮಿಕ ಶಾಲೆ ಪ್ರಾಚಾರ್ಯ ವೈಶಾಲಿ ಗೋಟಗಿ, ಕಾಲೇಜಿನ ಹಿರಿಯ ಶೈಕ್ಷಣಿಕ ನಿದರ್ೇಶಕ ಕೇಶಲು ಸ್ವಾಮಿ, ಆಡಳಿತಾಧಿಕಾರಿ ಗೋವಿಂದ ಕುಲಕಣರ್ಿ, ಮಹಾಂತೇಶ ಪಾಟೀಲ್, ಉಪ ಪ್ರಾಚಾರ್ಯ ಪ್ರವೀಣಕುಮಾರ, ವಾಣಿಜ್ಯ ವಿಭಾಗದ ಪ್ರಾಚಾರ್ಯ ಮಹ್ಮದ್ ಅಜಂ, ಪ್ರೀತಿ ಬಿರಾದಾರ ಇತರರಿದ್ದರು.
    ಪಾಳಾದ ಶ್ರೀ ಡಾ.ಗುರುಮೂತರ್ಿ ಶಿವಾಚಾರ್ಯ, ಓಂಕಾರಬೇನೂರಿನ ಶ್ರೀ ಸಿದ್ದರೇಣುಕ ಶಿವಾಚಾರ್ಯ, ಬಬಲಾದದ ಶ್ರೀ ರೇವಣಸಿದ್ದ ಶಿವಾಚಾರ್ಯ ಮತ್ತು ತೊನಸನಳ್ಳಿಯ ಶ್ರೀ ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರ ಸ್ವಾಮೀಜಿಗಳಿಗೆ ಕಾಯಕ ಫೌಂಡೇಷನ್ ಸಮೂಹ ಶಿಕ್ಷಣ ಸಂಸ್ಥೆಯಿಂದ ಕೊಡಮಾಡುವ ಪ್ರತಿಷ್ಠಿತ ಕಾಯಕ ಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
    ಅಬಾಕಸ್ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಉತ್ತಮ ರ್ಯಾಂಕ್ ಪಡೆದ, ವಿವಿಧ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು. ಮಕ್ಕಳ ರಕ್ಷಣೆ ಕುರಿತ ಅಣಕು ಪ್ರದರ್ಶನಗಳು ಗಮನ ಸೆಳೆದವು.


    ವಿಶ್ವದಲ್ಲಿ ತಾಯಿಗಿಂತ ಮಿಗಿಲಾಗಿರುವವರು ಮತ್ತೊಬ್ಬರಿಲ್ಲ. ತಾಯಿಯೇ ಎಲ್ಲವೂ. ಹೀಗಾಗಿ ನಿಮ್ಮ ಹೆತ್ತವರನ್ನು ಅತ್ಯಂತ ಪ್ರೀತಿ-ಅಕ್ಕರೆಯಿಂದ ನೋಡಬೇಕು.
    | ಶಿವರಾಜ ಟಿ.ಪಾಟೀಲ್
    ಕಾಯಕ ಫೌಂಡೇಷನ್ ಸಂಸ್ಥಾಪಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts