More

    ಪ್ರಜಾಪ್ರಭುತ್ವದ ಭಾಸ್ಕರ ಡಾ.ಅಂಬೇಡ್ಕರ್

    ಯಾದಗಿರಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಕಿಕೊಟ್ಟ ದಾರಿಯಲ್ಲಿ ಯುವಜನತೆ ಸಾಗಬೇಕು. ಗುಣಮಟ್ಟದ ಶಿಕ್ಷಣ ಪಡೆದು ದೇಶದ ಪ್ರಗತಿಗೆ ಶ್ರಮಿಸುವಂತೆ ಶಾಸಕ ವೆಂಕಟರಡ್ಡಿ ಮುದ್ನಾಳ್ ಕರೆ ನೀಡಿದರು.

    ಬಾಬಾ ಸಾಹೇಬರ 66ನೇ ಮಹಾಪರಿನಿವರ್ಾಣ ದಿನದ ಹಿನ್ನೆಲೆಯಲ್ಲಿ ಮಂಗಳವಾರ ನಗರದಲ್ಲಿನ ಡಾ.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ನಮನಗಳನ್ನು ಸಲ್ಲಿಸಿದ ಅವರು, ದೇಶದಲ್ಲಿ ಶತ ಶತಮಾನಗಳಿಂದ ಮನೆಮಾಡಿದ್ದ ಶೋಷಣೆ, ಜಾತಿಪದ್ಧತಿ ಹಾಗೂ ಮೌಢ್ಯಾಚರಣೆ ವಿರುದ್ಧ ಶಿಕ್ಷಣದ ಅಸ ಪ್ರಯೋಗಿಸಿದ ಮಹಾನ್ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ರು ಎಂದು ಗುಣಗಾನ ಮಾಡಿದರು.

    ಯುವ ಜನತೆ ಬಾಬಾ ಸಾಹೇಬರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವ ಅವಶ್ಯಕತೆ ಇದೆ. ಸರ್ವರಿಗೂ ಸಮಪಾಲು,ಸರ್ವರಿಗೂ ಸಮಬಾಳು ಎಂದು ಶ್ರಮಿಸಿದ , ಸಾಮಾಜಿಕ ನ್ಯಾಯದ ಹರಿಕಾರ, ಪ್ರಜಾಪ್ರಭುತ್ವದ ಭಾಸ್ಕರ ಎಂದರು.

    ಡಾ.ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡುವ ಮೂಲಕ ಶಿಕ್ಷಣ, ಉದ್ಯೋಗ, ರಾಜಕೀಯ ಸಮಾನತೆ, ಮತದಾನ ಪದ್ಧತಿ, ಮಹಿಳೆಯರ ಸಬಲೀಕರಣ, ಅಭಿವ್ಯಕ್ತಿ ಸ್ವಾತಂತ್ರ್ಯ ಮೂಲಭೂತ ಹಕ್ಕುಗಳನ್ನು ದೇಶದ ಜನತೆಗೆ ಕೊಡುಗೆಯಾಗಿ ನೀಡಿದ್ದಾರೆ. ಪ್ರತಿಯೊಬ್ಬರೂ ಸಂವಿಧಾನವನ್ನು ಸಂಪೂರ್ಣವಾಗಿ ಅರಿತುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.

    ಭಾರತದ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಪ್ರಜಾಪ್ರಭುತ್ವ ಹೊಂದಿರುವ ನಮ್ಮ ದೇಶದಲ್ಲಿ ಸರ್ವ ಜನಾಂಗಕ್ಕೂ ಸಂವಿಧಾನದಲ್ಲಿ ಸಮಾನತೆ ಕಲ್ಪಿಸಲಾಗಿದೆ. ಅಂಬೇಡ್ಕರ್ ಹೇಳಿದಂತೆ ದಲಿತ ವರ್ಗ ಉನ್ನತ ಶಿಕ್ಷಣ ಪಡೆಯುವ ಮೂಲಕ ಅವರ ಕನಸನ್ನು ನನಸು ಮಾಡಬೇಕು ಎಂದು ತಿಳಿಸಿದರು.
    ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ, ಯುಡಾ ಅದ್ಯಕ್ಷ ರುದ್ರಗೌಡ ಪಾಟೀಲ್, ಪ್ರಮುಖರಾದ ಖಂಡಪ್ಪ ದಾಸನ್, ಬಸವರಾಜ ಚಂಡರಕಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts