More

    ಪ್ರಜಾಪಿತ ಈಶ್ವರೀಯ ವಿವಿ ಶಿವ ಸಂಸ್ಕೃತಿಯ ಪ್ರತೀಕ

    ಚನ್ನರಾಯಪಟ್ಟಣ: ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯ ಪ್ರತಿಯೊಬ್ಬರನ್ನೂ ಅಧ್ಯಾತ್ಮದ ಚೈತನ್ಯದತ್ತ ಕರೆತರುತ್ತ ಶಿವ ಸಂಸ್ಕೃತಿಯ ಪ್ರತೀಕದಂತೆ ಪ್ರಜ್ವಲಿಸುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮಾ ಬಾಲಕೃಷ್ಣ ಹೇಳಿದರು.


    ಪಟ್ಟಣದ ಗಣಪತಿ ಪೆಂಡಾಲ್‌ನಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ 87ನೇ ತ್ರಿಮೂರ್ತಿ ಶಿವಜಯಂತಿ ಮಹೋತ್ಸವ ಹಾಗೂ ಮಹಾ ಶಿವರಾತ್ರಿ ಅಂಗವಾಗಿ ಗುರುವಾರ ಆಯೋಜಿಸಿದ್ದ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.


    ಫೆ.21ರವರೆಗೆ ಪಟ್ಟಣದ ಗಣಪತಿ ಪೆಂಡಾಲಿನಲ್ಲಿ ದ್ವಾದಶ ಜ್ಯೋತಿಲಿರ್ಂಗಗಳ ಪುಣ್ಯ ದರ್ಶನವಿದ್ದು ಪಟ್ಟಣದ ನಾಗರಿಕರು ಇದರ ಸದುಪಯೋಗ ಪಡೆಯಲು ಮನವಿ ಮಾಡಿದರು.


    ರಾಜಯೋಗಿನಿ ಬ್ರಹ್ಮಕುಮಾರ ರಂಗನಾಥ್ ಮಾತನಾಡಿ, ಭಾರತೀಯ ಸನಾತನ ಧರ್ಮವನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಉಳಿಸಿ ಬೆಳೆಸುವಂಥ ಕೆಲಸವನ್ನು ಮಾಡುತ್ತ ವಿಶ್ವದ 180 ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.


    ಅರಕಲಗೂಡು ಚಿಲುಮೆ ಮಠದ ಶ್ರೀ ಜಯದೇವ ಸ್ವಾಮೀಜಿ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನ ಉದ್ಘಾಟಿಸಿದರು. ಮೈಸೂರು ಉಪ ವಲಯ ನಿರ್ದೇಶಕಿ ರಾಜಯೋಗಿನಿ ಬ್ರಹ್ಮಕುಮಾರಿ ಲಕ್ಷ್ಮೀಜಿ, ಪುರಸಭೆ ಅಧ್ಯಕ್ಷೆ ರೇಖಾ ಅನಿಲ್, ನವೋದಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಆದಿಶೇಷ ಕುಮಾರ್, ರಾಜಯೋಗಿನಿ ಬ್ರಹ್ಮಕುಮಾರಿ ಮೀನಾ, ಮೋಹನ್ ಕುಮಾರಿ, ಪ್ರಾಣೇಶ್, ಚಾಮರಾಜೇಗೌಡ, ಮಂಜುನಾಥ, ಗುರುರಾಜೇಗೌಡ, ರಮೇಶ್, ಚಂದ್ರ, ಗೀತಾ, ಸಂಜನಾ, ನಿವೃತ್ತ ಜಿಲ್ಲಾಧಿಕಾರಿ ನಾಗಪ್ಪ, ಚನ್ನರಾಯಪಟ್ಟಣ ಬ್ರಹ್ಮಕುಮಾರಿಯ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts