More

    ಪ್ಯಾರಿ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ನುರಿಸುವಿಕೆ ಶುರು

    ಹಳಿಯಾಳ: ಪ್ರಸಕ್ತ ಸಾಲಿನ ಕಬ್ಬು ಕಟಾವು ಹಂಗಾಮು ಆರಂಭಗೊಂಡಿದ್ದು, ಕಬ್ಬು ನುರಿಸುವಿಕೆ ಕಾರ್ಯವನ್ನು ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯಲ್ಲಿ ಆರಂಭಿಸಲಾಗಿದೆ.

    ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ವ್ಯಾಪ್ತಿಗೆ ಜಿಲ್ಲೆಯ ಹಳಿಯಾಳ, ಮುಂಡಗೋಡ, ಯಲ್ಲಾಪುರ, ಜೊಯಿಡಾ ತಾಲೂಕುಗಳು ಹಾಗೂ ಧಾರವಾಡ ಜಿಲ್ಲೆಯ ಕಲಘಟಗಿ, ಅಳ್ನಾವರ, ಧಾರವಾಡ ಗ್ರಾಮೀಣ ಭಾಗಗಳು ಒಳಪಡುತ್ತಿವೆ. ಪ್ರಸಕ್ತ ಹಂಗಾಮಿಗೆ ಕಬ್ಬಿನ ಕ್ಷೇತ್ರ 36000 ಎಕರೆಗೆ ವೃದ್ಧಿಸಿದೆ.

    ಕಾರ್ಖಾನೆ ಹೊರ ರಾಜ್ಯದಿಂದ ತರಿಸಿದ 180 ಲಗಾಣಿ ತಾಂಡಾಗಳು ತಾಲೂಕು ಸೇರಿ ಕಾರ್ಖಾನೆ ವ್ಯಾಪ್ತಿಯಲ್ಲಿ ಕಬ್ಬು ಕಟಾವು ಆರಂಭಿಸಿವೆ. ಕಾರ್ಖಾನೆ ಆಡಳಿತ ಮಂಡಳಿ ತಾಲೂಕಾಡಳಿತಕ್ಕೆ ನೀಡಿದ ಮಾಹಿತಿಯಂತೆ ಕಾರ್ಖಾನೆಗೆ ಒಪ್ಪಿಗೆ ಪತ್ರ ನೀಡಿದ 1400 ರೈತರ ಗದ್ದೆಗಳಲ್ಲಿ ಕಬ್ಬು ಕಟಾವು ಈಗ ನಡೆದಿದೆ.

    ಈ ಮಧ್ಯೆ ಕಬ್ಬು ಕಟಾವು ಮಾಡುತ್ತಿರುವ ಲಗಾಣಿ ತಾಂಡಾಗಳಿಗೆ ಹೆಚ್ಚುವರಿ ಹಣ ಎಂಟ್ರಿ ನೀಡಬಾರದೆಂದು ತಾಲೂಕು ಕಬ್ಬು ಬೆಳೆಗಾರರ ಸಂಘವು ರೈತರಲ್ಲಿ ಮನವಿ ಮಾಡಿದೆ. ಬೇರೆ ತಾಲೂಕುಗಳಲ್ಲಿ ಲಗಾಣಿ ತಾಂಡಾಗಳಿಗೆ ಎಂಟ್ರಿ ನೀಡುವ ಪದ್ಧತಿಯಿಲ್ಲ. ತಾಲೂಕಿನಲ್ಲಿ ಇತ್ತೀಚೆಗೆ ತಮ್ಮ ಕಬ್ಬು ಮೊದಲು ಕಟಾವು ಮಾಡಲು ಪೈಪೋಟಿಗಿಳಿಯುವ ರೈತರು ಲಗಾಣಿ ತಾಂಡಾಗಳಿಗೆ ಹಣ ನೀಡುತ್ತಿದ್ದಾರೆ. ಇದರ ದುರ್ಲಾಭ ಪಡೆದು ಲಗಾಣಿ ತಾಂಡಾಗಳು ರೈತರಲ್ಲಿ ಪೈಪೋಟಿ ಹೆಚ್ಚಿಸಿ, ಬೆಳೆಗಾರರಿಗೆ ಆರ್ಥಿಕ ನಷ್ಟ ಮಾಡುತ್ತಿವೆ. ಯಾರೂ ಲಗಾಣಿ (ಎಂಟ್ರಿ) ನೀಡಬಾರದು ಎಂದು ಸಂಘದ ಕಾರ್ಯಾಧ್ಯಕ್ಷ ಕುಮಾರ ಬೊಬಾಟೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts