More

    ಪೌರ ಕಾರ್ವಿುಕರಿಗೆ ಗೌರವ ಸಲ್ಲಿಸಿದ ಜನತೆ

    ವಿಜಯವಾಣಿ ಸುದ್ದಿಜಾಲ ಧಾರವಾಡ: ಜಿಲ್ಲೆಯಲ್ಲಿ ಕರೊನಾ ವೈರಸ್ ಒಂದು ಹಂತದಲ್ಲಿ ನಿಯಂತ್ರಣಕ್ಕೆ ಬರಲು ಹಾಗೂ ಹರಡುವಿಕೆ ತಡೆಗಟ್ಟಲು ಮಹಾನಗರ ಪೌರ ಕಾರ್ವಿುಕರ ಪಾತ್ರ ಬಹು ಮುಖ್ಯವಾಗಿದೆ. ಹೀಗೆ ಹಗಲಿರುಳು ಶ್ರಮಿಸಿದ ಪೌರ ಕಾರ್ವಿುಕರಿಗೆ ನಗರದ ಜನರು ಭಾನುವಾರ ಸನ್ಮಾನಿಸಿ ಗೌರವ ಸಲ್ಲಿಸಿದ್ದಾರೆ.

    ಜಿಲ್ಲೆಗೆ ಕರೊನಾ ಕಾಲಿಡುತ್ತಿದ್ದಂತೆ ಜನರೆಲ್ಲರೂ ಮನೆಯಲ್ಲೇ ವಾಸವಾಗಿದ್ದಾರೆ. ಆದರೆ ಈ ಕಾರ್ವಿುಕರು ಮಾತ್ರ ಎಂದಿನಂತೆ ಬೆಳ್ಳಂ ಬೆಳಗ್ಗೆ ತಮಗೆ ನೀಡಿದ ಬಡಾವಣೆಗಳಿಗೆ ತೆರಳಿ ಸ್ವಚ್ಛತೆ ಕಾರ್ಯ ನಡೆಸಿದ್ದಾರೆ. ಇದರ ಜತೆಗೆ ಪ್ರಕರಣಗಳು ದೃಢಪಟ್ಟ ಪ್ರದೇಶ ಮಾತ್ರವಲ್ಲದೆ, ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಔಷಧ ಸಿಂಪಡಿಸುವ ಕೆಲಸ ನಡೆಸಿದ್ದ ಕಾರ್ವಿುಕರ ಶ್ಲಾಘನೀಯವಾಗಿತ್ತು.

    ಇದೀಗ ಬಸವ ಜಯಂತಿ ನಿಮಿತ್ತ ನಗರದ ಕೆಲ ಬಡಾವಣೆಗಳಲ್ಲಿ ಎಲ್ಲ ಪೌರ ಕಾರ್ವಿುಕರಿಗೆ ಜನರು ಸ್ವ ಹಿತಾಸಕ್ತಿಯಿಂದ ಸನ್ಮಾನಿಸಿ ಅವರನ್ನು ಗೌರವಿಸುವ ಕೆಲಸ ಮಾಡಿದ್ದಾರೆ. ಕಾರ್ವಿುಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಜನರು ಅವರಿಗೆ ನೆನಪಿನ ಕಾಣಿಕೆ ನೀಡಿದ್ದಲ್ಲದೆ, ತಮ್ಮ ಮನೆಗಳಲ್ಲಿ ಉಪಾಹಾರ ನೀಡಿ ಗೌರವಿಸಿದ್ದಾರೆ. ಜನರಿಂದ ಗೌರವ ಸನ್ಮಾನ ಪಡೆದ ಕಾರ್ವಿುಕರು, ತಮಗೆ ಇಷ್ಟು ದಿನಗಳ ಕಾಲ ಸುರಕ್ಷತಾ ವಸ್ತುಗಳು, ಆಹಾರ ಧಾನ್ಯಗಳ ಕಿಟ್, ಉಪಾಹಾರ, ಊಟ ನೀಡಿದ ದಾನಿಗಳಿಗೆ ಕೃತಜ್ಞತೆಯನ್ನೂ ಸಲ್ಲಿಸಿದ್ದಾರೆ.

    ಕಾರ್ವಿುಕರ ಪಾದ ಪೂಜೆ: ನಗರದ ಟೋಲ್​ನಾಕಾ ಬಳಿ ನಿತ್ಯ 30ಕ್ಕೂ ಹೆಚ್ಚು ಕಾರ್ವಿುಕರು ಒಂದು ತಿಂಗಳಿಂದ ಕೆಲಸ ಮಾಡುತ್ತಿದ್ದನ್ನು ಗಮನಿಸಿದ ವ್ಯಕ್ತಿಯೊಬ್ಬರು ಕಾರ್ವಿುಕರ ಪಾದಪೂಜೆ ಮಾಡಿ ಗೌರವ ಸಲ್ಲಿಸಿದ್ದಾರೆ. ವಿಜಯಪುರ ಇಂಚಗೇರಿ ಸಂಪ್ರದಾಯ ಮಠದ ಭಕ್ತ, ಕೆಎಂಎಫ್​ನಲ್ಲಿ ತಾಂತ್ರಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ನಾಗಪ್ಪ ಅರವಾಳದ ಎಂಬುವವರು ಇಂಚಗೇರಿ ಮಠದ ಶ್ರೀಗಳು ಹೇಳಿದಂತೆ ಪೌರ ಕಾರ್ವಿುಕರ ಪಾದಪೂಜೆ ನೆರವೇರಿಸಿ, ತುಪ್ಪ ಹಾಗೂ ಪೇಢೆ, ಆಹಾರ ಕಿಟ್ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts